
'ಇವತ್ತು ಬರಲ್ಲ, ಗಂಟಲು ನೋವು...' – ಮನೆಗೆಲಸದ ಮಹಿಳೆಯ ಇಂಗ್ಲಿಷ್ ರಜೆ ಪತ್ರ ವೈರಲ್!
ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮನೆಗೆಲಸದ ಮಹಿಳೆಯ ಇಂಗ್ಲಿಷ್ ಕೌಶಲ್ಯ ಮತ್ತು ಅವರ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ. ಹಲವರು ತಮ್ಮ ಮನೆಯಲ್ಲಿ ನಡೆದ ಇದೇ ರೀತಿಯ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಮನೆಗೆಲಸದವರ ಬಗ್ಗೆ ಲಿಂಕ್ಡ್ಇನ್ನಲ್ಲಿ ಬರೆದುಕೊಂಡ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಜೆ ಕೇಳಲು ಮನೆಗೆಲಸದವರು ಕಳುಹಿಸಿದ ವಾಟ್ಸ್ಆ್ಯಪ್ ಸಂದೇಶಗಳನ್ನು ಆ ಮಹಿಳೆ ಹಂಚಿಕೊಂಡಿದ್ದು, ಆ ಸಂದೇಶಗಳು ಅತ್ಯಂತ ವೃತ್ತಿಪರವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಹಿಳೆ ಹಂಚಿಕೊಂಡ ಸ್ಕ್ರೀನ್ ಶಾಟ್ಗಳು ಈ ರೀತಿ ಇವೆ.
ಸಂದೇಶ 1: "I am not well, I have cold and throat infection so I will not be coming to work today." (ನನಗೆ ಹುಷಾರಿಲ್ಲ, ಶೀತ ಮತ್ತು ಗಂಟಲು ನೋವಿದೆ, ಹಾಗಾಗಿ ಇಂದು ಕೆಲಸಕ್ಕೆ ಬರುವುದಿಲ್ಲ.)
ಸಂದೇಶ 2: "I won’t be able to come today cuz I’m not well so." (ಇವತ್ತು ಬರಲು ಸಾಧ್ಯವಿಲ್ಲ, ಯಾಕೆಂದರೆ ನನಗೆ ಹುಷಾರಿಲ್ಲ.)
ಸಂದೇಶ 3: "I won’t be able to come today because I have got hurt in leg and it’s swollen and I’m not able to walk." (ಕಾಲಿಗೆ ಪೆಟ್ಟಾಗಿ ಊದಿಕೊಂಡಿದೆ ಮತ್ತು ನಡೆಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಇಂದು ಬರಲು ಸಾಧ್ಯವಿಲ್ಲ.)
ಈ ಸಂದೇಶಗಳನ್ನು ತಮ್ಮ ಮನೆಗೆಲಸದವರ 10 ವರ್ಷದ ಮಗಳು ಟೈಪ್ ಮಾಡಿದ್ದಾಳೆ ಎಂದು ಉಲ್ಲೇಖಿಸಿರುವ ಮಹಿಳೆ, ಅವರ ವೃತ್ತಿಪರತೆಗೆ "100/100" ಅಂಕಗಳನ್ನು ನೀಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮನೆಗೆಲಸದ ಮಹಿಳೆಯ ಇಂಗ್ಲಿಷ್ ಕೌಶಲ್ಯ ಮತ್ತು ಅವರ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ. ಹಲವರು ತಮ್ಮ ಮನೆಯಲ್ಲಿ ನಡೆದ ಇದೇ ರೀತಿಯ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಒಬ್ಬರು, ಆಫೀಸ್ಗೆ ರಜೆ ತೆಗೆದುಕೊಳ್ಳುವಾಗ ಕಾರಣವನ್ನೇ ಕೊಡುವುದಿಲ್ಲ. ಇದು ಅದಕ್ಕಿಂತ ಎಷ್ಟೋ ವೃತ್ತಿಪರವಾಗಿದೆ," ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರ, "ಮುಂದಿನ ಪೀಳಿಗೆಯ ಕಾಪಿರೈಟರ್ ತಯಾರಾಗುತ್ತಿದ್ದಾರೆ," ಎಂದು ಶ್ಲಾಘಿಸಿದ್ದಾರೆ.