
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100ಕ್ಕೂ ಹೆಚ್ಚು ಉನ್ನತ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ (ಸಿಇಒ) ಜೊತೆಗೆ ಉಪಾಹಾರ ಸಭೆ ನಡೆಸಿದರು.
ಬೆಂಗಳೂರು ಟೆಕ್ ಸಮ್ಮಿಟ್ 2025: 'ಭವಿಷ್ಯೋದಯ'ಕ್ಕೆ ಚಾಲನೆ, 100ಕ್ಕೂ ಹೆಚ್ಚು ಸಿಇಒಗಳೊಂದಿಗೆ ಸಿಎಂ ಸಮಾಲೋಚನೆ
ಸಿದ್ದರಾಮಯ್ಯ ಅವರು 100ಕ್ಕೂ ಹೆಚ್ಚು ಉನ್ನತ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ (ಸಿಇಒ) ಜೊತೆಗೆ ಉಪಾಹಾರ ಸಭೆ ನಡೆಸುವ ಮೂಲಕ ಸಮಾಲೋಚನೆ ನಡೆಸಿದರು.
ನವೆಂಬರ್ 18 ರಿಂದ 20ರವರೆಗೆ ನಡೆಯಲಿರುವ 'ಬೆಂಗಳೂರು ಟೆಕ್ ಸಮ್ಮಿಟ್-2025'ರ ಪೂರ್ವಭಾವಿ ಸಿದ್ಧತೆಗಳು ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100ಕ್ಕೂ ಹೆಚ್ಚು ಉನ್ನತ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ (ಸಿಇಒ) ಜೊತೆಗೆ ಉಪಾಹಾರ ಸಭೆ ನಡೆಸುವ ಮೂಲಕ ಸಮಾಲೋಚನೆ ನಡೆಸಿದರು. 'ಭವಿಷ್ಯೋದಯ' ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಜಾಗತಿಕ ತಂತ್ರಜ್ಞಾನ ಸಮಾವೇಶವನ್ನು ಆಯೋಜಿಸಲಾಗುತ್ತಿದೆ.
ಈ ಮಹತ್ವದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಟೆಕ್ ಸಮ್ಮಿತ್ನ ಯಶಸ್ಸಿಗೆ ಉದ್ಯಮ ವಲಯದ ಸಹಕಾರ ಮತ್ತು ಸಲಹೆಗಳನ್ನು ಪಡೆಯುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ಬೆಂಗಳೂರನ್ನು ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಉದ್ಯಮದ ನಡುವಿನ ಸಹಭಾಗಿತ್ವದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. 'ಭವಿಷ್ಯೋದಯ'ದ ಆಶಯದೊಂದಿಗೆ ನಡೆಯಲಿರುವ ಈ ಸಮ್ಮೇಳನವು ತಂತ್ರಜ್ಞಾನ ಕ್ಷೇತ್ರದ ಭವಿಷ್ಯದ ದಿಕ್ಕುಗಳನ್ನು ನಿರ್ಧರಿಸುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ.