Fegal Cyclone | ಬಿಟ್ಟು ಬಿಡದ ತುಂತುರು ಮಳೆಗೆ ಹೈರಾಣರಾದ ಬೆಂಗಳೂರು
x
ಬೆಂಗಳೂರು ಮಳೆ

Fegal Cyclone | ಬಿಟ್ಟು ಬಿಡದ ತುಂತುರು ಮಳೆಗೆ ಹೈರಾಣರಾದ ಬೆಂಗಳೂರು

ಫೆಂಜಾಲ್‌ ಚಂಡಮಾರುತದ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ನಿರಂತರ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಆದರೆ, ಮಂಗಳವಾರ ಬೆಳಿಗ್ಗೆಯಿಂದಲೇ ಮಳೆ ಬಿಡುವುಕೊಟ್ಟಿದ್ದು ಮೋಡ ಸರಿಯತೊಡಗಿದೆ.


Click the Play button to hear this message in audio format

ಫೆಂಜಾಲ್‌ ಚಂಡಮಾರುತದ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ನಿರಂತರ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕೆಲಸದಿಂದ ತೆರಳುವವರು, ವಾಹನ ಸವಾರರು , ಮಕ್ಕಳು ಪರದಾಡಿದರು. ಜಯನಗರ 4 ನೇ ಬ್ಲಾಕ್ ಮತ್ತು ಮಲ್ಲೇಶ್ವರಂನಂತಹ ಪ್ರದೇಶಗಳಲ್ಲಿ ಕನಿಷ್ಠ ಆರು ಮರಗಳು ಬಿದ್ದಿರುವುದು ಸೇರಿದಂತೆ ಹಲವಾರು ರಸ್ತೆಗಳು ಭಾಗಶಃ ಜಲಾವೃತವಾಗಿ ಸಾರ್ವಜನಿಕರಿಗೆ, ಸವಾರರಿಗೆ ತೊಂದರೆಯಾಯಿತು. ಮಳೆಯ ಕಾರಣಕ್ಕಾಗಿ ಹಲವಾರು ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದ್ದವು.

ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಸೋಮವಾರ ರಾತ್ರಿ ವೇಳೆಗೆ ಬೆಂಗಳೂರಿನಲ್ಲಿ 33.7 ಮಿ.ಮೀ ಮಳೆ ದಾಖಲಾಗಿದ್ದರೆ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 27.4 ಮಿ.ಮೀ ಮಳೆ ದಾಖಲಾಗಿತ್ತು.

ಮಳೆ ಆರ್ಭಟದ ಹಿನ್ನೆಲೆಯಲ್ಲಿ ಡಿ.3 ರಂದು ರಾಮನಗರ ಸೇರಿದಂತೆ ರಾಜ್ಯದ ಚಿಕ್ಕಬಳ್ಳಾಪುರ, ಚಾಮರಾಜನಗರ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಕೋಲಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಮಂಗಳವಾರ (ಡಿ.3) ಕೂಡ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ನಿರಂತರ ಮಳೆ ಬಂದರೂ ಶಾಲೆಗೆ ರಜೆ ಇಲ್ಲ

ಬೆಂಗಳೂರಿನಲ್ಲಿ ಸೋಮವಾರ ನಿರಂತರ ಮಳೆ ಸುರಿದಿದ್ದರೂ ಶಾಲೆಗಳಿಗೆ ರಜೆ ಘೋಷಿಸಿರಲಿಲ್ಲ. ಪೋಷಕರ ಮನವಿಯ ಹೊರತಾಗಿಯೂ ಬೆಂಗಳೂರು ನಗರ ಜಿಲ್ಲಾಡಳಿತ ಯಾವುದೇ ರಜೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ, ಮಂಗಳವಾರ ನಗರದಲ್ಲಿ ಬಹುತೇಕ ಮಳೆ ಸಂಪೂರ್ಣ ನಿಂತಿದ್ದು, ಬಿಸಿಲು ಕಾಣಿಸಿಕೊಂಡಿದೆ.

ಪಥ ಬದಲಿಸಿದ ಚಂಡಮಾರುತ

ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರದತ್ತ ಚಂಡಮಾರುತ ಪಥ ಬದಲಿಸಿದ್ದು ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Read More
Next Story