
ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ಚಿತ್ರಗಳು. ಕೃತ್ಯದ ಸಂದರ್ಭ, ಆರೋಪಿ ಸಂತೋಷ್.
ಸುದ್ದಗುಂಟೆ ಪಾಳ್ಯ ಲೈಂಗಿಕ ಕಿರುಕುಳ ಪ್ರಕರಣ; 3 ರಾಜ್ಯಗಳಲ್ಲಿ 700 ಸಿಸಿಟಿವಿ ತಪಾಸಣೆ ನಡೆಸಿ ಆರೋಪಿ ಬಂಧನ
ಆರೋಪಿ ಸಂತೋಷ್ ಕೃತ್ಯ ಎಸಗಿ ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ಪರಾರಿಯಾಗಿದ್ದನು. ಅಲ್ಲಿ ಒಬ್ಬ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು, ನಂತರ, ಅವನು ಕೇರಳದ ಕೋಝಿಕೋಡ್‌ಗೆ ಬಸ್ ಮೂಲಕ ತೆರಳಿದ್ದನು.
ಬೆಂಗಳೂರಿನ ಬಿಟಿಎಂ ಲೇಔಟ್‌ನ ಸುದ್ದಗುಂಟೆ ಪಾಳ್ಯದಲ್ಲಿ ಇತ್ತೀಚೆಗೆ ಒಬ್ಬ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ಎಸಗಿ ಪರಾಗಿಯಾಗಿದ್ದ ಕೇರಳ ಮೂಲದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅದಕ್ಕಾಗಿ ದೊಡ್ಡ ಮಟ್ಟದ ಶ್ರಮ ವಹಿಸಿದ್ದಾರೆ ಎಂಬುದು ಬಹಿರಂಗಗೊಂಡಿದೆ. ಮೂರು ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ 700 ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಯನ್ನು ಕೇರಳದ ಸಣ್ಣ ಗ್ರಾಮದಲ್ಲಿ ಸೆರೆ ಹಿಡಿದಿದ್ದಾರೆ.
ಆರೋಪಿಯನ್ನು ಸಂತೋಷ್ ಡಿ. ಎಂದು ಗುರುತಿಸಲಾಗಿದೆ. ಅತ ಬೆಂಗಳೂರಿನ ತಿಲಕ್‌ನಗರದ ಗುಲ್ಬರ್ಗಾ ಕಾಲೋನಿಯ ನಿವಾಸಿಯಾಗಿದ್ದು, ಜಾಗ್ವಾರ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. . ಘಟನೆಯ ಸಮಯದಲ್ಲಿ ಆರೋಪಿಯು ಮದ್ಯಪಾನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ ತಿಂಗಳ ಆರಂಭದಲ್ಲಿ, ಸುದ್ದಗುಂಟೆ ಪಾಳ್ಯದಲ್ಲಿ ಕಿರುಕುಳ ಘಟನೆ ನಡೆದಿತ್ತು. ರಾತ್ರಿ ರಸ್ತೆಯಲ್ಲಿ ಇಬ್ಬರು ಮಹಿಳೆಯ ವ್ಯಕ್ತಿ ಹಿಂಬಾಲಿಸುವ ದೃಶ್ಯವು ಸಿಸಿಟಿಟಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು, ಇದರಿಂದಾಗಿ ಸಾರ್ವಜನಿಕರ ಗಮನಕ್ಕೆ ಈ ಘಟನೆ ಬಂದಿತ್ತು. ಆರೋಪಿ ಇಬ್ಬರಲ್ಲಿ ಮೇಲೆ ಕಿರುಕುಳ ಎಸಗಿದ್ದ. ಈ ಘಟನೆಯು ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು, ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ಮೇಲೆ ಟೀಕೆಯನ್ನು ಮಾಡಿದ್ದವು.
ಆರೋಪಿ ಸಂತೋಷ್ ಕೃತ್ಯ ಎಸಗಿ ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ಪರಾರಿಯಾಗಿದ್ದನು. ಅಲ್ಲಿ ಒಬ್ಬ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು, ನಂತರ, ಅವನು ಕೇರಳದ ಕೋಝಿಕೋಡ್‌ಗೆ ಬಸ್ ಮೂಲಕ ತೆರಳಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಕಾನೂನು ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ
ಈ ಬಂಧನ ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ತಂಡದ ಶ್ರಮದ ಫಲವಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ. ಬಿ. ದಯಾನಂದ ಅವರು, "ನಮ್ಮ ತಂಡವು 24X7 ಕಾರ್ಯನಿರ್ವಹಿಸುತ್ತಿದೆ. ನಗರದ ಎಲ್ಲಾ ಪ್ರದೇಶಗಳಲ್ಲಿ ಗಸ್ತು ತಿರುಗುವಂತೆ ಸೂಚಿಸಲಾಗಿದೆ," ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.