ಫ್ಲೈಓವರ್ ಕೆಳಗೆ ಬೈಕ್ ನಿಲ್ಲಿಸುವವರೇ ಎಚ್ಚರ: ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರ ಬಂಧನ, 13 ಬೈಕ್ ವಶ!
x

ಸಾಂದರ್ಭಿಕ ಚಿತ್ರ 

ಫ್ಲೈಓವರ್ ಕೆಳಗೆ ಬೈಕ್ ನಿಲ್ಲಿಸುವವರೇ ಎಚ್ಚರ: ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರ ಬಂಧನ, 13 ಬೈಕ್ ವಶ!

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ಆರಂಭಿಸಿದ್ದರು. ಅಕ್ಟೋಬರ್ 29 ರಂದು ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ವಾಟರ್ ಟ್ಯಾಂಕ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಎರಡು ಬೈಕ್ ಸಮೇತ ವಶಕ್ಕೆ ಪಡೆದರು.


Click the Play button to hear this message in audio format

ಕೆಲಸಕ್ಕೆ ಹೋಗುವ ಆತುರದಲ್ಲಿ ರಸ್ತೆ ಬದಿ ಅಥವಾ ಫ್ಲೈಓವರ್ ಕೆಳಗೆ ವಾಹನ ನಿಲ್ಲಿಸಿ ಹೋಗುವ ಸಾರ್ವಜನಿಕರೇ ಎಚ್ಚರ. ಇಂತಹ ವಾಹನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಎಚ್.ಎಸ್.ಆರ್ ಲೇಔಟ್ ಪೊಲೀಸರು ಬಂಧಿಸಿದ್ದು, ಬರೋಬ್ಬರಿ 8 ಲಕ್ಷ ರೂಪಾಯಿ ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 23 ರಂದು ಬಂಡೇಪಾಳ್ಯದ ನಿವಾಸಿಯೊಬ್ಬರು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ತಮ್ಮ ದ್ವಿಚಕ್ರ ವಾಹನವನ್ನು ಅಗರ ಲೇಕ್ ಪಾರ್ಕ್‌ನ ಫ್ಲೈಓವರ್ ಕೆಳಗೆ ನಿಲ್ಲಿಸಿ ಹೋಗಿದ್ದರು. ಮಧ್ಯಾಹ್ನ ವಾಪಸ್ ಬಂದು ನೋಡಿದಾಗ ವಾಹನ ನಾಪತ್ತೆಯಾಗಿತ್ತು. ಈ ಬಗ್ಗೆ ಎಚ್.ಎಸ್.ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು.

ವಾಟರ್ ಟ್ಯಾಂಕ್ ಬಳಿ ಸಿಕ್ಕಿಬಿದ್ದ ಕಳ್ಳರು

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ಆರಂಭಿಸಿದ್ದರು. ಅಕ್ಟೋಬರ್ 29 ರಂದು ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ವಾಟರ್ ಟ್ಯಾಂಕ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಎರಡು ಬೈಕ್ ಸಮೇತ ವಶಕ್ಕೆ ಪಡೆದರು. ವಿಚಾರಣೆ ವೇಳೆ ಇವರು ನಗರದಾದ್ಯಂತ ವಾಹನ ಕಳ್ಳತನ ಮಾಡುತ್ತಿದ್ದ ವಿಷಯ ಬಯಲಿಗೆ ಬಂದಿದೆ.

ಖಾಲಿ ಜಾಗದಲ್ಲಿ ಬಚ್ಚಿಡುತ್ತಿದ್ದ ವಾಹನಗಳು

ಪೊಲೀಸರು ಆರೋಪಿಗಳನ್ನು 5 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಕದ್ದ ವಾಹನಗಳನ್ನು ಮಿಲಿಟರಿ ಕಾಂಪೌಂಡ್ ಮತ್ತು ಸಿಪಿಡಬ್ಲ್ಯೂಡಿ ಕ್ವಾರ್ಟರ್ಸ್ ಪಕ್ಕದ ಖಾಲಿ ಜಾಗಗಳಲ್ಲಿ ಬಚ್ಚಿಟ್ಟಿರುವುದಾಗಿ ಬಾಯಿಬಿಟ್ಟಿದ್ದಾರೆ. ಇವರ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ, ಒಟ್ಟು 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

7 ಠಾಣೆಗಳ ಪ್ರಕರಣ ಬಯಲಿಗೆ

ಈ ಇಬ್ಬರ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 13 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಎಚ್.ಎಸ್.ಆರ್ ಲೇಔಟ್ ಠಾಣೆಯ 7 ಪ್ರಕರಣಗಳು ಸೇರಿದಂತೆ ತಿಲಕ್ ನಗರ, ಸುದ್ದಗುಂಟೆಪಾಳ್ಯ, ಮಡಿವಾಳ, ಬನ್ನೇರುಘಟ್ಟ, ಬೆಳ್ಳಂದೂರು ಮತ್ತು ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಲಾ ಒಂದೊಂದು ಪ್ರಕರಣಗಳು ಸೇರಿವೆ.

Read More
Next Story