ಬೆಂಗಳೂರು |ಬಿಎಂಟಿಸಿ ಬಸ್‌ನಲ್ಲಿ ದಂಡ ವಿವಾದ; ಕಂಡಕ್ಟರ್‌ನಿಂದ ಪ್ರಯಾಣಿಕನಿಗೆ ಕಪಾಳಮೋಕ್ಷ
x

ಟಿಕೆಟ್ ವಿತರಣೆಯಲ್ಲಿ ನಿರ್ಲಕ್ಷ್ಯ, ದಂಡ ವಿಧಿಸಿದಕ್ಕೆ ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವೆ ಜಗಳದಲ್ಲಿ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. 

ಬೆಂಗಳೂರು |ಬಿಎಂಟಿಸಿ ಬಸ್‌ನಲ್ಲಿ ದಂಡ ವಿವಾದ; ಕಂಡಕ್ಟರ್‌ನಿಂದ ಪ್ರಯಾಣಿಕನಿಗೆ ಕಪಾಳಮೋಕ್ಷ

ಟಿಕೆಟ್ ತಪಾಸಣಾ ತಂಡ ಬಸ್ ಹತ್ತಿ ತಪಾಸಣೆ ನಡೆಸಿದಾಗ ಪ್ರಯಾಣಿಕನ ಬಳಿ ಟಿಕೆಟ್ ಇರಲಿಲ್ಲ. ಇದರಿಂದ ಆತನಿಗೆ ದಂಡ ವಿಧಿಸಲಾಗಿತ್ತು. ಇದು ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವಿನ ಜಗಳಕ್ಕೆ ಕಾರಣವಾಗಿದೆ.


ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) ಬಸ್‌ನಲ್ಲಿ ಟಿಕೆಟ್ ವಿಚಾರವಾಗಿ ನಡೆದ ವಾಗ್ವಾದದಲ್ಲಿ ನಿರ್ವಾಹಕರೊಬ್ಬರು ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ದೇವನಹಳ್ಳಿಯಿಂದ ಮೆಜೆಸ್ಟಿಕ್‌ಗೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ನಡೆದಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋ ವೈರಲ್‌ ಆಗಿದ್ದು, ಬಸ್‌ ಹತ್ತಿದ ಪ್ರಯಾಣಿಕನಿಗೆ ನಿರ್ವಾಹಕ ಟಿಕೆಟ್‌ ನೀಡಿರಲಿಲ್ಲ. ಮಾರ್ಗಮಧ್ಯೆ, ಟಿಕೆಟ್ ತಪಾಸಣಾ ತಂಡ ಬಸ್ ಹತ್ತಿ ಪರಿಶೀಲಿಸಿದಾಗ ಪ್ರಯಾಣಿಕನ ಬಳಿ ಟಿಕೆಟ್ ಇರಲಿಲ್ಲ. ಇದರಿಂದ ಆತನಿಗೆ ದಂಡ ವಿಧಿಸಲಾಗಿತ್ತು. ಇದು ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವಿನ ಜಗಳಕ್ಕೆ ಕಾರಣವಾಗಿದೆ.

ಘಟನೆಯ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ"ನನ್ನ ಸ್ನೇಹಿತ ದೇವನಹಳ್ಳಿಯಿಂದ ಮೆಜೆಸ್ಟಿಕ್‌ಗೆ BMTC ಬಸ್ KA-57 F-4029 ರಲ್ಲಿ ಪ್ರಯಾಣಿಸುತ್ತಿದ್ದ. ‌ನಿರ್ವಾಹಕ ಟಿಕೆಟ್ ನೀಡಲು ಬಂದಿರಲಿಲ್ಲ. ತಪಾಸಣಾ ತಂಡ ಬಂದಾಗ ಅವನಿಗೆ ದಂಡ ವಿಧಿಸಿತು. ನಂತರ ನಿರ್ವಾಹಕ ಇದ್ದಕ್ಕಿದ್ದಂತೆ ಬಂದು ಅವನ ಮೇಲೆ ಹಲ್ಲೆ ಮಾಡಿದರು" ಎಂದು ಬರೆದಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ ಸಂತ್ರಸ್ತ ಪ್ರಯಾಣಿಕನು ತನ್ನ ಭಯಾನಕ ಅನುಭವ ವಿವರಿಸಿದ್ದಾನೆ. "ಇಂದು BMTC ಬಸ್ KA 57 F-4029 ನಲ್ಲಿ ನಾನು ರೂ. 420 ದಂಡ ಪಾವತಿಸಿದೆ. ಆದರೆ, ನಿರ್ವಾಹಕ ನನ್ನ ಮುಖಕ್ಕೆ ಬಲವಾಗಿ ಹೊಡೆದು ನಿಂದಿಸಿದರು. ನನ್ನ ಬಳಿ ಈ ಘಟನೆಯ ವಿಡಿಯೊ ಪುರಾವೆಯೂ ಇದೆ. ಯಾವುದೇ ಪ್ರಯಾಣಿಕರ ಮೇಲೆ ಹಲ್ಲೆ ಸರಿಯಲ್ಲ. ದಯವಿಟ್ಟು ನನಗೆ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಬಿಎಂಟಿಸಿ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಯಾಣಿಕನಿಗೆ ನ್ಯಾಯ ಸಿಗಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.

Read More
Next Story