Bengaluru Kempe Gowda International Airport |100 ನಗರಗಳಿಗೆ ನೇರ ವಿಮಾನ
x

Bengaluru Kempe Gowda International Airport |100 ನಗರಗಳಿಗೆ ನೇರ ವಿಮಾನ

ಮೇ 2008 ರಲ್ಲಿ ಕಾರ್ಯಾಚರಣೆ ಆರಂಭಿಸಿದ ಕೆಐಎ, ಈಗ ನೇರವಾಗಿ 72 ದೇಶಿ ಮತ್ತು 28 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.


ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಸೆಪ್ಟೆಂಬರ್ 1 ರಂದು ಒಂದು ವಿಶಿಷ್ಟ ಮೈಲಿಗಲ್ಲನ್ನು ಸಾಧಿಸಿತು. ಮಧ್ಯಪ್ರದೇಶದ ಜಬಲ್ಪುರವು ಬೆಂಗಳೂರಿನಿಂದ ನೇರ ವಿಮಾನ ಸಂಪರ್ಕ ಹೊಂದಿರುವ 100ನೇ ತಾಣವಾಗಿದೆ.

ಮೇ 2008 ರಲ್ಲಿ ಕಾರ್ಯಾಚರಣೆ ಆರಂಭಿಸಿದ ಕೆಐಎ, ಈಗ 72 ದೇಶಿ ಮತ್ತು 28 ಅಂತಾರಾಷ್ಟ್ರೀಯ ನಗರಗಳೀಗೆ ಸಂಪರ್ಕ ಕಲ್ಪಿಸುತ್ತದೆ.

ಉತ್ತರ ಮತ್ತು ಪಶ್ಚಿಮ: ಬೆಂಗಳೂರಿನಿಂದ ನೇರ ಸಂಪರ್ಕ ಹೊಂದಿರುವ ಉತ್ತರ ಭಾರತದ ನಗರಗಳೆಂದರೆ ಆಗ್ರಾ, ಅಲಹಾಬಾದ್, ಅಯೋಧ್ಯೆ, ಬರೇಲಿ, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ದೆಹಲಿ, ಗೋರಖ್‌ಪುರ, ಗ್ವಾಲಿಯರ್, ಇಂದೋರ್, ಜಮ್ಮು, ಜಬಲ್‌ಪುರ, ಕಾನ್ಪುರ, ಲಕ್ನೋ, ರಾಯ್‌ಪುರ, ಶ್ರೀನಗರ ಮತ್ತು ವಾರಾಣಸಿ.

ಪಶ್ಚಿಮದಲ್ಲಿ ಅಗಟ್ಟಿ, ಅಹಮದಾಬಾದ್, ಔರಂಗಾಬಾದ್, ಗೋವಾ (ದಾಬೋಲಿಮ್ ಮತ್ತು ಮೋಪಾ), ಜೈಪುರ, ಜಾಮ್‌ನಗರ, ಜೋಧ್‌ಪುರ, ಕೊಲ್ಲಾಪುರ, ಮುಂಬೈ, ನಾಗಪುರ, ನಾಂದೇಡ್, ಪುಣೆ, ರಾಜ್‌ಕೋಟ್ (ಹಿರಾಸರ್), ಶಿರಡಿ, ಸಿಂಧುದುರ್ಗ, ಸೂರತ್, ಉದಯಪುರ ಮತ್ತು ವಡೋದರಾ.

ದಕ್ಷಿಣ ಮತ್ತು ಪೂರ್ವ: ದಕ್ಷಿಣದಲ್ಲಿ ಬೆಳಗಾವಿ, ಕೋಯಿಕ್ಕೋಡ್, ಚೆನ್ನೈ, ಕೊಯಮತ್ತೂರು, ಕೊಚ್ಚಿ, ಕಣ್ಣೂರು, ಕಲಬುರಗಿ, ಕರ್ನೂಲ್, ಹುಬ್ಬಳ್ಳಿ, ಹೈದರಾಬಾದ್, ಮಂಗಳೂರು, ಮದುರೈ, ರಾಜಮಂಡ್ರಿ, ಸೇಲಂ, ಶಿವಮೊಗ್ಗ, ತಿರುಪತಿ, ತಿರುಚಿರಾಪಳ್ಳಿ, ತಿರುವನಂತಪುರ, ತೂತುಕುಡಿ, ವಿದ್ಯಾನಗರ, ವಿಜಯವಾಡ ಮತ್ತು ವೈಜಾಗ್.

ಪೂರ್ವದಲ್ಲಿ ಅಗರ್ತಲಾ, ಐಜ್ವಾಲ್, ಬಾಗ್ಡೋಗ್ರಾ, ಭುವನೇಶ್ವರ, ದರ್ಭಾಂಗ, ದಿಯೋಘರ್, ದುರ್ಗಾಪುರ, ಗುವಾಹಟಿ, ಇಂಫಾಲ್, ಜಾರ್ಸುಗುಡ, ಕೋಲ್ಕತ್ತಾ, ಪಾಟ್ನಾ, ಪೋರ್ಟ್ ಬ್ಲೇರ್ ಮತ್ತು ರಾಂಚಿ.

ಅಂತಾರಾಷ್ಟ್ರೀಯ ವಿಮಾನಗಳು: ನೇರ ವಿಮಾನ ಸಂಚಾರ ಇರುವ ಅಂತಾರಾಷ್ಟ್ರೀಯ ನಗರಗಳೆಂದರೆ, ಅಡಿಸ್ ಅಬಾಬಾ, ಆಮ್‌ ಸ್ಟರ್‌ಡಾಂ, ಅಬುಧಾಬಿ, ಬಹ್ರೇನ್, ಬ್ಯಾಂಕಾಕ್(ಬಿಕೆಕೆ, ಡಿಎಂಕೆ), ಪ್ಯಾರಿಸ್, ಕೊಲಂಬೊ, ಧಾಲು, ದೋಹಾ, ಡೆನ್‌ಪಾಸರ್, ದುಬೈ, ಫ್ರಾಂಕ್‌ಫರ್ಟ್, ಹಾಂಗ್ ಕಾಂಗ್, ಫುಕೆಟ್, ಜೆಡ್ಡಾ, ಕಠ್ಮಂಡು, ಕೌಲಾಲಂಪುರ, ಕುವೈತ್, ಲಂಡನ್-ಗಾಟ್ವಿಕ್, ಲಂಡನ್, ಮಸ್ಕತ್, ಮಾಲೆ, ಮ್ಯೂನಿಚ್, ನರಿಟಾ, ಸ್ಯಾನ್ ಫ್ರಾನ್ಸಿಸ್ಕೋ, ಶಾರ್ಜಾ, ಸಿಂಗಾಪುರ ಮತ್ತು ಸಿಡ್ನಿ.

ಕೆಐಎ ಮೊದಲ ವರ್ಷದಲ್ಲಿ 90 ಲಕ್ಷ ಪ್ರಯಾಣಿಕರನ್ನು ಸಾಗಿಸಿತು. ಈಗ, ಎರಡು ಟರ್ಮಿನಲ್‌ಗಳೊಂದಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 400 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ನಿರೀಕ್ಷೆಯಿದೆ. ಮುಂದಿನ ದಶಕದಲ್ಲಿ 850 ಲಕ್ಷ ಪ್ರಯಾಣಿಕರು ಮತ್ತು 1 ದಶಲಕ್ಷ ಟನ್ ಸರಕು ಸಾಗಿಸುವ ನಿರೀಕ್ಷೆ ಹೊಂದಿದೆ.

Read More
Next Story