
ಬೆಳಗಾವಿ ಸಿಸಿಬಿ ಪೊಲೀಸರ ಕಾರ್ಯಾಚರಣೆ: ದಾಖಲೆರಹಿತ 2.73 ಕೋಟಿ ರೂ. ಹಣ ಜಪ್ತಿ
ಮಹಾರಾಷ್ಟ್ರದ ಸಾಂಗ್ಲಿಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸರಕು ಸಾಗಣೆ ವಾಹನವನ್ನು ಖಚಿತ ಮಾಹಿತಿ ಮೇರೆಗೆ ತಡೆದು, ತಪಾಸಣೆ ಮಾಡಿದಾಗ ಕೋಟಿಗಟ್ಟಲೇ ನಗದು ಪತ್ತೆಯಾಗಿದೆ.
ಸೂಕ್ತ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2.73 ಕೋಟಿ ರೂ. ನಗದನ್ನು ಬೆಳಗಾವಿಯ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸರಕು ಸಾಗಣೆ ವಾಹನವನ್ನು ಖಚಿತ ಮಾಹಿತಿ ಮೇರೆಗೆ ತಡೆದು, ತಪಾಸಣೆ ಮಾಡಿದಾಗ ಕೋಟಿಗಟ್ಟಲೇ ನಗದು ಪತ್ತೆಯಾಗಿದೆ.
ಹಣ ಸಾಗಿಸುತ್ತಿದ್ದ ಸಾಂಗ್ಲಿ ಪಟ್ಟಣದ ಸಚಿನ ಮೇನಕುದುಳೆ ಹಾಗೂ ಮಾರುತಿ ಮಾರಗುಡೆ ಎಂಬ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಾಹನ ಹಾಗೂ ನಗದು ವಶಕ್ಕೆ ಪಡೆದಿದ್ದಾರೆ.
2.73 ಕೋಟಿ ರೂ. ಹಣವನ್ನು ಗೂಡ್ಸ್ ವಾಹನದ ಕ್ಯಾಬಿನ್ ನಲ್ಲಿ ಇಡಲಾಗಿತ್ತು. ಹಣ ಸಾಗಣೆಗಾಗಿಯೇ ಕ್ಯಾಬಿನ್ ಅನ್ನು ವಿಶಾಲವಾಗಿ ಸಿದ್ಧಪಡಿಸಲಾಗಿತ್ತು. ಜಪ್ತಿಯಾಗಿರುವ ಹಣದ ಮೂಲದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಡಿಸಿಪಿ ರೋಹನ್ ಜಗದೀಶ್ ಶನಿವಾರ ತಿಳಿಸಿದ್ದಾರೆ. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನ.13 ರಂದು ಉಪ ಚುನಾವಣೆ ನಡೆಯಲಿದ್ದು, ಈ ಹೊತ್ತಿನಲ್ಲೇ ದೊಡ್ಡ ಪ್ರಮಾಣದಲ್ಲಿ ನಗದು ಸಾಗಣೆ ಮಾಡಿರುವುದು ಅನುಮಾನಗಳಿಗೆ ಎಡೆ ಮಾಟಿಕೊಟ್ಟಿದೆ. ಬಳ್ಳಾರಿಯ ಸಂಡೂರು, ರಾಮನಗರದ ಚನ್ನಪಟ್ಟಣ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.