Mayor Giri for non-native speakers in four municipalities, injustice to Kannadigas from the government
x

ಬಿಬಿಎಂಪಿ 

Unauthorized PGs in Bangalore | ಅನಧಿಕೃತ ಪಿಜಿಗಳಿಗೆ ಬೀಗ ಜಡಿಯಲು ಮುಂದಾದ ಬಿಬಿಎಂಪಿ

ಈ ಬಗ್ಗೆ ಎಚ್ಚೆತ್ತುಕೊಂಡಿರುವ ನಗರದ ಪಾಲಿಕೆ, ಈಗಾಗಲೇ ಪಾಲಿಕೆ ಹೊರಡಿಸಿರುವ ಕೆಲ ಮಾರ್ಗಸೂಚಿಗಳನ್ನು ಪಾಲಿಸದಿರುವ ಪಿಜಿಗಳನ್ನು ಮಚ್ಚಲು ಸಿದ್ದತೆ ಮಾಡಿಕೊಂಡಿದೆ.


ಬೆಂಗಳೂರು ನಗರದಲ್ಲಿ ಅನಧಿಕೃತ ಪಿಜಿಗಳು (ಪೇಯಿಂಗ್ ಗೆಸ್ಟ್​) ಮತ್ತು ನಿಯಮಗಳನ್ನು ಉಲ್ಲಂಘಿಸುವ ಪಿಜಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಸಜ್ಜಾಗಿದೆ. ಇತ್ತೀಚೆಗೆ ಹೆಚ್​ಎಸ್​ಆರ್ ಲೇಔಟ್​ನ ಲೇಡೀಸ್ ಪಿಜಿಯಲ್ಲಿ ಯುವತಿ ನಗ್ನವಾಗಿ ಓಡಾಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಪಿಜಿಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎನ್ನುವ ದೂರುಗಳು ಕೂಡ ಕೇಳಿಬಂದಿತ್ತು.

ಸತತವಾಗಿ ಬಂದಿರುವ ದೂರುಗಳಿಂದ ಎಚ್ಚೆತ್ತುಕೊಂಡಿರುವ ನಗರದ ಪಾಲಿಕೆ, ಈಗಾಗಲೇ ಪಾಲಿಕೆ ಹೊರಡಿಸಿರುವ ಕೆಲ ಮಾರ್ಗಸೂಚಿಗಳನ್ನು ಪಾಲಿಸದಿರುವ ಪಿಜಿಗಳನ್ನು ಮಚ್ಚಲು ಸಿದ್ಧತೆ ಮಾಡಿಕೊಂಡಿದೆ. ಸದ್ಯ 1200 ಅನಧಿಕೃತ ಪಿಜಿಗಳನ್ನು ಪಾಲಿಕೆ ಗುರುತಿಸಿಕೊಂಡಿದೆ.

ಪಿಜಿಗಳಿಗೆ ಪಾಲಿಕೆ ನಿಯಮಗಳೇನು?

ಸಿಸಿಟಿವಿ ಅಳವಡಿಕೆ ಕಡ್ಡಾಯ, 90 ದಿನಗಳ ಡೇಟಾ ಸಿಗುವ ವ್ಯವಸ್ಥೆ ಇರಬೇಕು.

ಪ್ರತಿಯೊಬ್ಬ ಅತಿಥಿಯ ವಾಸಕ್ಕೆ ತಲಾ 70 ಚದರ ಅಡಿಗಳ ಕನಿಷ್ಠ ಜಾಗವಿರುವುದನ್ನ ಖಚಿತಪಡಿಸಿಕೊಳ್ಳಬೇಕು.

ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯ ಇರಬೇಕು.

ಕಡ್ಡಾಯವಾಗಿ FSSAI ಇಲಾಖೆಯಿಂದ ಲೈಸನ್ಸ್‌ ಪಡೆದಿರಬೇಕು.

ಸುರಕ್ಷತಾ ದೃಷ್ಟಿಯಿಂದ ಕನಿಷ್ಠ ಪಕ್ಷ 01 ಸಿಬ್ಬಂದಿಯನ್ನಾದರೂ ಕಡ್ಡಾಯವಾಗಿ 24*7 ಸೇವೆಯಡಿಯಲ್ಲಿ ನಿಯೋಜಿಸಬೇಕು.

ಈ ನಿಯಮಗಳಷ್ಟೇ ಅಲ್ಲದೇ ಪಿಜಿಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆಯಾಗದಂತೆ ಗಮನ ಹರಿಸುವ ಹೊಣೆಯನ್ನ ಪಿಯುಗಳು ಪಾಲಿಸಲು ಸೂಚನೆ ನೀಡಲಾಗಿತ್ತು.

Read More
Next Story