
ಬಿಬಿಎಂಪಿಯ ಈಜುಕೊಳ ಪ್ರವೇಶ ದರ ಏರಿಕೆಯಾಗಿದೆ.
Swimming pool| ಈಜುಕೊಳ ಪ್ರವೇಶ ದರ ಏರಿಕೆ ಮಾಡಿದ ಬಿಬಿಎಂಪಿ
ಈ ಹಿಂದೆ ಚಿಕ್ಕವರಿಗೆ 25-30 ರೂಪಾಯಿ, ವಯಸ್ಕರಿಗೆ 50 ರೂಪಾಯಿ ಇತ್ತು. ಇದೀಗ ಎಲ್ಲರಿಗೂ ಸಮಾನವಾಗಿ 50 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯಲ್ಲಿನ ಈಜುಕೊಳದ ಪ್ರವೇಶ ದರ ಹೆಚ್ಚಳ ಮಾಡಲಾಗಿದೆ.
ಈ ಹಿಂದೆ ಚಿಕ್ಕವರಿಗೆ 25-30 ರೂಪಾಯಿ, ವಯಸ್ಕರಿಗೆ 50 ರೂಪಾಯಿ ಇತ್ತು. ಇದೀಗ ಎಲ್ಲರಿಗೂ ಸಮಾನವಾಗಿ 50 ರೂಪಾಯಿ ವಿಧಿಸಲಾಘಿದೆ. ಅರ್ಧದಿಂದ ಒಂದು ಗಂಟೆವರೆಗಿನ ಸಮಯಕ್ಕೆ ಈಜುಕೊಳಕ್ಕೆ ನಿಗಿದಿಪಡಿಸಿದ್ದ ದರವನ್ನು ಚಿಕ್ಕವರು ದೊಡ್ಡವರು ಎನ್ನದೆ ಏಕಾಏಕಿ ಏರಿಸಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾಲಕ್ಷ್ಮೀ ಬಡಾವಣೆ, ವಿಜಯಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಈಜುಕೊಳಕ್ಕೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ಮಕ್ಕಳು ಈಜುಕೊಳದಲ್ಲಿ ಆಟವಾಡುವುದನ್ನು ಆನಂದಿಸುತ್ತಿದ್ದಾರೆ. ಆದ್ದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದರ ಇಳಿಕೆ ಇಲ್ಲವೇ ಏಕ ರೂಪದ ಸೂಕ್ತ ದರ ನಿಗದಿಗೆ ಕ್ರಮ ಕೈಗೊಳ್ಳುವಂತೆ ಪೋಷಕರು ಮನವಿ ಮಾಡಿದ್ದಾರೆ.
ನಿಮಿಷ ಈಜುಕೊಳ ಪ್ರವೇಶಿಸಲು ದರ ಹೆಚ್ಚಿಸಿದ್ದಲ್ಲದೇ, ಈಜುಕೊಳದ ಉಸ್ತುವಾರಿಗಳ ಸಹ ಮನ ಬಂದಂತೆ ಹೆಚ್ಚುವರಿ ಹಣ ಪಡೆದದ್ದು ಕಂಡು ಬಂದಿದೆ. ಒಂದೊಂದು ಕಡೆ ಒಂದೊಂದು ರೀತಿಯ ದರವಿದೆ. ಏಕರೂಪದ ದರ ನಿಗದಿ ಆಗಿಲ್ಲ. ಇದನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಮ್ಮರ್ ಕ್ಯಾಂಪ್ ಹಣ ವಸೂಲಿ ಮಾಡುವುದು, ಸಿಕ್ಕ ಅವಕಾಶ ದುರುಪಯೋಗಪಡಿಸಿಕೊಂಡರೆ ಅಂತವರ ವಿರುದ್ಧ ಪಾಲಿಕೆ ಕ್ರಮ ಜರುಗಿಸಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಚ್ಚರಿಕೆ ನೀಡಿದ್ದರು. ಮನ ಬಂದಂತೆ ಹಣ ವಸೂಲಿಗೆ ಅವಕಾಶ ಇಲ್ಲ ಎಂದು ಅವರು ಹೇಳಿದ್ದರು. ಹೀಗಿದ್ದರೂ ಈಜುಕೊಳದ ವಿಚಾರದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ಇನ್ನು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬಿಬಿಎಂಪಿ ಕಸ, ಪಾರ್ಕಿಂಗ್ ಶುಲ್ಕ ವಿಧಿಸುವ ಮೂಲಕ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದೆ. ಇದೀಗ ಈಜುಕೊಳ ಪ್ರವೇಶ ದರ ಏರಿಕೆಯ ಬಿಸಿ ಮುಟ್ಟಿಸಿದೆ.