BANGALORE WATER CRISIS | ನೀರಿನ ಟ್ಯಾಂಕರ್‌ಗೆ ಸ್ಟಿಕರ್ ಕಡ್ಡಾಯ: ಬಿಬಿಎಂಪಿ ಸೂಚನೆ
x
ನೀರು ಸರಬರಾಜು ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಸ್ಟಿಕರ್ ಅಳವಡಿಸಲು ಬಿಬಿಎಂ ಸೂಚನೆ ನೀಡಿದೆ.

BANGALORE WATER CRISIS | ನೀರಿನ ಟ್ಯಾಂಕರ್‌ಗೆ ಸ್ಟಿಕರ್ ಕಡ್ಡಾಯ: ಬಿಬಿಎಂಪಿ ಸೂಚನೆ

ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್​ಗಳನ್ನು ಆಯಾ ವಲಯಗಳಿಗೆ ನಿಯೋಜಿಸಲಾಗಿದ್ದು, ಟ್ಯಾಂಕರ್​ಗಳು ಕಡ್ಡಾಯವಾಗಿ ಸ್ಟಿಕರ್​ ಅಂಟಿಸಿಕೊಳ್ಳಬೇಕು ಎಂದು ಬಿಬಿಎಂಪಿ ಸೂಚನೆ ನೀಡಿದೆ.


Click the Play button to hear this message in audio format

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ‌ ವ್ಯಾಪ್ತಿಯಲ್ಲಿ ಈಗಾಗಲೇ ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್​ಗಳನ್ನು ಆಯಾ ವಲಯಗಳಿಗೆ ನಿಯೋಜಿಸಲಾಗಿದ್ದು, ಟ್ಯಾಂಕರ್​ಗಳು ಕಡ್ಡಾಯವಾಗಿ ಸ್ಟಿಕರ್​ ಅಂಟಿಸಿಕೊಳ್ಳಬೇಕು ಎಂದು ಬಿಬಿಎಂಪಿ ಸೂಚನೆ ನೀಡಿದೆ.

ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಈ ಸ್ಟಿಕ್ಕರ್​ಗಳನ್ನು ವಲಯವಾರು ಹಂಚಿಕೆ ಮಾಡಲಾಗಿದೆ. ಅದರಂತೆ, ಪ್ರತಿ ಟ್ಯಾಂಕರ್ ಮಾಲೀಕರು ಪಾಲಿಕೆಯಲ್ಲಿ ಸ್ವಯಂ ನೋಂದಣಿ ಮಾಡಿಕೊಂಡಿರುವ ನೋಂದಣಿ ಪ್ರಮಾಣ ಪತ್ರವನ್ನು ಮತ್ತು ಪಾಲಿಕೆ ನೀಡಿರುವ ಸ್ಟಿಕರ್​ನಲ್ಲಿ ವಾಹನದ ಸಂಖ್ಯೆ, ಮಾಲೀಕರ ಹೆಸರು, ದೂರವಾಣಿ ಸಂಖ್ಯೆ, ಸ್ವಯಂ ನೋಂದಣಿಯಾಗಿರುವ ಸಂಖ್ಯೆಯನ್ನು ವಾಹನಗಳ ಮೇಲೆ ಪ್ರದರ್ಶಿಸಬೇಕಿದೆ. ವಲಯದ ಹೆಸರು ನಮೂದಿಸಿ ವಾಹನದ ಮೇಲೆ ಕಡ್ಡಾಯವಾಗಿ ಅಂಟಿಸಬೇಕಿದೆ. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.


ನೋಂದಣಿಯಾಗದ ಟ್ಯಾಂಕರ್‌ಗಳಿಗೆ ನೀರು ಪೂರೈಕೆ ಮಾಡಲು ಅವಕಾಶ ನೀಡುವುದಿಲ್ಲ. ಸರ್ಕಾರದಿಂದ ನಿಗದಿಪಡಿಸಿರುವ ದರಕ್ಕಿಂದ ಹೆಚ್ಚಾಗಿ ಮಾರಾಟ ಮಾಡಿದಲ್ಲಿ ಅಥವಾ ನೀರಿನ ಗುಣಮಟ್ಟದ ಸಮಸ್ಯೆ ಉಂಟಾದಲ್ಲಿ ಜಲಮಂಡಳಿಯ ಸಹಾಯವಾಣಿ ಸಂಖ್ಯೆ 1916 ಗೆ ಹಾಗೂ ಪಾಲಿಕೆಯ ಸಹಾಯವಾಣಿ ಸಂಖ್ಯೆ 1533 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Read More
Next Story