
ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು.
ಗಾಂಧೀಜಿ ತ್ಯಾಗ, ಬಲಿದಾನಗಳು ಸದಾ ನಮಗೆ ಆದರ್ಶ: ಸಿಎಂ ಸಿದ್ದರಾಮಯ್ಯ
ಶಸ್ತ್ರವಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದ ಮಹಾತ್ಮ ಗಾಂಧಿ, ತನ್ನ ವೈರಿಗಳಿಗೂ ಮಾನವೀಯತೆಯ ಕಣ್ಣುತೆರೆಸಿದ ಮಹಾನ್ ಸಂತ, ಧರ್ಮದ ಹಾದಿಯಲ್ಲಿ ನಡೆಸಿದ ದಾರ್ಶನಿಕ ಎಂದು ಸಿಎಂ ತಿಳಿಸಿದರು.
ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಹೋರಾಟದ ಫಲದಿಂದ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಅವರ ತ್ಯಾಗ, ಬಲಿದಾನಗಳು ಸದಾ ನಮಗೆ ಆದರ್ಶಪ್ರಾಯವಾಗಿರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಗುರುವಾರ ಗಾಂಧಿ ಜಯಂತಿ ಪ್ರಯುಕ್ತ ಮೈಸೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅ.2 ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಹೌದು, ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿ ಅವರು ಎಂದು ಸ್ಮರಿಸಿದರು.
ಶಸ್ತ್ರವಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದ ಮಹಾತ್ಮ ಗಾಂಧಿ, ತನ್ನ ವೈರಿಗಳಿಗೂ ಮಾನವೀಯತೆಯ ಕಣ್ಣುತೆರೆಸಿದ ಮಹಾನ್ ಸಂತ, ಧರ್ಮದ ಹಾದಿಯಲ್ಲಿ ನಡೆಸಿದ ದಾರ್ಶನಿಕ. ಜಗದ ಕಷ್ಟಗಳಿಗೆಲ್ಲ ಮರುಗುತ್ತಿದ್ದ ಬಾಪುವಿನ ಹೃದಯದೊಳಗೆ ಅದೆಷ್ಟು ಕರುಣೆ, ಪ್ರೀತಿ ತುಂಬಿತ್ತೆಂದು ಊಹಿಸುವುದು ಅಸಾಧ್ಯ. ಸತ್ಯ, ಶಾಂತಿ, ಸಹನೆ, ಸರ್ವಧರ್ಮ ಸಮಭಾವ ಗಾಂಧೀಜಿಯವರ ಚಿಂತನೆಗಳಾಗಿರಲಿಲ್ಲ, ಅದು ಜೀವನ ಮಾರ್ಗವಾಗಿತ್ತು ಎಂದರು.
ಜಗತ್ತು ಹಿಂಸೆ, ಅಶಾಂತಿಗಳ ದಾಳಿಗೆ ಒಳಗಾದಾಗಲೆಲ್ಲ ಮತ್ತೆ ಮತ್ತೆ ನೆನಪಾಗುವವರು ಗಾಂಧಿ. ಅವರ ಸೇವೆ, ಸಮರ್ಪಣಾಭಾವ, ತ್ಯಾಗ, ಬಲಿದಾನವನ್ನು ಅತ್ಯಂತ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ. ಕಾಕತಾಳೀಯ ಎಂಬಂತೆ ಗುರುವಾರ(ಸೆ.2) ವಿಜಯದಶಮಿಯೂ ಕೂಡಾ ಬಂದಿದ್ದು, ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಶುಭಾಶಯಗಳನ್ನು ತಿಳಿಸಿದರು.