ಬೆಂಗಳೂರು ದ.ಭಾರತದಲ್ಲಿಯೇ ನಂಬರ್ 1 ಕ್ರೈಂ ಸಿಟಿ! ಎಂದ Numbeo ವರದಿ!
x

ಬೆಂಗಳೂರು ದ.ಭಾರತದಲ್ಲಿಯೇ ನಂಬರ್ 1 ಕ್ರೈಂ ಸಿಟಿ! ಎಂದ Numbeo ವರದಿ!

Numbeo ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ 200ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತದ ಹಲವು ನಗರಗಳೂ ಹೆಸರು ಪಡೆದಿವೆ. ಬೆಂಗಳೂರು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಂಬರ್ 1 ನಗರ ಎಂದು ಹೇಳಲಾಗಿದ್ದು, ಜಾಗತಿಕವಾಗಿ 102ನೇ ಸ್ಥಾನ ಪಡೆದಿದೆ.

ದಕ್ಷಿಣ ಭಾರತದಲ್ಲಿಯೇ ಬೆಂಗಳೂರು ನಂಬರ್ 1 ಕ್ರೈಂ ಸಿಟಿ ಎಂದು ನಂಬೆಯೊ (Numbeo ) ಎಂಬ ಜಾಗತಿಕ ಸಂಸ್ಥೆ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಅಷ್ಟೇ ಅಲ್ಲ, ವಿಶ್ವದ 200 ಟಾಪ್‌ ಕ್ರೈಂ ಸಿಟಿಗಳಲ್ಲಿ ಬೆಂಗಳೂರು 102ನೇ ಸ್ಥಾನ ಪಡೆದುಕೊಂಡಿದೆ.

ಸರ್ಬಿಯಾ ಮೂಲದ ಆನ್ಲೈನ್ ಡೇಟಾ ಬೇಸ್ ಸಂಸ್ಥೆಯಾದ Numbeo ವರದಿ ಪ್ರಕಾರ, ವೆನಿಜುವೆಲಾದ ಕ್ಯಾರ್ಕಸ್ ನಗರ ಅತಿ ಹೆಚ್ಚು ಅಪರಾಧ ಪ್ರಕರಣಗಳು ನಡೆಯುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಎರಡನೇ ಸ್ಥಾನ ಪಡೆದಿದೆ.

ಡರ್ಬಾನ್ ಮೂರನೇ ಸ್ಥಾನ, ಜೋಹಾನ್ಸ್ ಬರ್ಗ್ ನಾಲ್ಕನೇ ಸ್ಥಾನ, ಪೋರ್ಟ್ ಎಲಿಜೆಬೆತ್ 8 ನೇ ಸ್ಥಾನ ಹಾಗೂ ಕೇಪ್ಟೌನ್ 18 ನೇ ಸ್ಥಾನ ಪಡೆದಿವೆ.

ವಿಶೇಷವೆಂದರೆ ಟಾಪ್ 20ರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಐದು ನಗರಗಳು ಸ್ಥಾನ ಪಡೆದಿವೆ.

ದಕ್ಷಿಣ ಆಫ್ರಿಕಾದಲ್ಲಿ ಸಂಘಟಿತ ಅಪರಾಧಗಳು ಹೆಚ್ಚುತ್ತಿದ್ದು 2023ರಲ್ಲಿ 7,700 ಕೊಲೆಗಳು ನಡೆದಿವೆ ಎಂದು ವರದಿ ಹೇಳಿದೆ.

Numbeo ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ 200ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತದ ಹಲವು ನಗರಗಳೂ ಹೆಸರು ಪಡೆದಿವೆ. ಬೆಂಗಳೂರು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಂಬರ್ 1 ನಗರ ಎಂದು ಹೇಳಲಾಗಿದ್ದು, ಜಾಗತಿಕವಾಗಿ 102ನೇ ಸ್ಥಾನ ಪಡೆದಿದೆ.

ಜಾಗತಿಕವಾಗಿ ದೆಹಲಿ 70 ನೇ ಸ್ಥಾನ ಪಡೆಯುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಗರ ಎಂದು ಗುರುತಾಗಿದೆ. ನೋಯ್ಡಾ 87ನೇ ಸ್ಥಾನ, ಗುರುಗ್ರಾಮ 95ನೇ ಸ್ಥಾನ ಪಡೆದಿವೆ.

ಇಂದೋರ್ (136), ಕೋಲ್ಕತ್ತ (159), ಮುಂಬೈ (169), ಹೈದರಾಬಾದ್ (174), ಚಂಡೀಗಢ (177), ಪುಣೆ (184) ನಗರಗಳೂ ಸಹ ಟಾಪ್ 200ರ ಪಟ್ಟಿಯಲ್ಲಿ ಬಂದಿವೆ.

Read More
Next Story