Driver commits suicide in front of District Collectors office after writing MP Dr. K. Sudhakars name
x

ಸಂಸದ ಡಾ. ಕೆ. ಸುಧಾಕರ್‌ ಹಾಗೂ ಮೃತ ಕಾರು ಚಾಲಕ

ಬಾಬು ಆತ್ಮಹತ್ಯೆ ಪ್ರಕರಣ : ಸಂಸದ ಡಾ.ಕೆ.ಸುಧಾಕರ್‌ ಸೇರಿ ಮೂವರ ವಿರುದ್ಧ ಎಫ್‌ಐಅರ್‌ ದಾಖಲು

ಡಾ.ಕೆ.ಸುಧಾಕರ್‌ ಮೊದಲ ಆರೋಪಿಯಾಗಿದ್ದು, ನಾಗೇಶ್‌, ಮಂಜುನಾಥ್‌ ಎರಡು ಮತ್ತು ಮೂರನೇ ಆರೋಪಿಯಾಗಿದ್ದಾರೆ. ಬಾಬು ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.


ಬಿಜೆಪಿ ಸಂಸದ ಕೆ.ಸುಧಾಕರ್ ಹೆಸರು ಬರೆದಿಟ್ಟು ಬಾಬು ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ಸಂಸದ ಡಾ.ಕೆ.ಸುಧಾಕರ್‌ ಸೇರಿದಂತೆ ಮೂವರು ಹೆಸರು ಎಫ್‌ಐಆರ್‌ ದಾಖಲಾಗಿದ್ದು, ಸುಧಾಕರ್‌ಗೆ ಕಾನೂನು ಸಂಕಷ್ಟ ಎದುರಾಗಿದೆ.

ಮೃತ ಬಾಬು ಪತ್ನಿ ನೀಡಿದ ದೂರಿನ ಮೇರೆಗೆ ದೂರು ದಾಖಲಿಸಲಾಗಿದೆ. ಡೆತ್ ನೋಟ್​​ ನಲ್ಲಿ ಉಲ್ಲೇಖಿಸಿದ್ದ ಮೂವರ ವಿರುದ್ಧವೂ ಸೆಕ್ಷನ್ 108, 352, 351ರ ಅಡಿ ಪ್ರಕರಣ ದಾಖಲಾಗಿದೆ. ಮೂವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಡಾ.ಕೆ.ಸುಧಾಕರ್‌ ಮೊದಲ ಆರೋಪಿಯಾಗಿದ್ದು, ನಾಗೇಶ್‌ ಮತ್ತು ಮಂಜುನಾಥ್‌ ಎರಡನೇ ಮತ್ತು ಮೂರನೇ ಆರೋಪಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ನೌಕರ ಕಾರು ಚಾಲಕನಾಗಿದ್ದ ಬಾಬು, ಜಿಲ್ಲಾ ಪಂಚಾಯತಿ ಸಭಾಂಗಣದ ಪಕ್ಕದ ಮರದಡಿಯಲ್ಲೇ ಸರ್ಕಾರಿ ಕಾರು ನಿಲ್ಲಿಸಿದ್ದಾನೆ. ಬಳಿಕ ಕಾರಿನ ಮೇಲೆ ಹತ್ತಿ ಹೊಂಗೆ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. ಮೃತನ ಕಾರಿನಲ್ಲಿ 4 ಪುಟಗಳ ಡೆತ್‌ನೋಟ್‌ ಸಿಕ್ಕಿದೆ. ಡೆತ್ ನೋಟ್ ನ ಮೊದಲ ಪುಟದಲ್ಲೇ, ಮೊದಲ ಸಾಲಿನಲ್ಲೇ ನನ್ನ ಸಾವಿಗೆ ಡಾ. ಕೆ. ಸುಧಾಕರ್‌ ಹೆಸರು ಉಲ್ಲೇಖವಾಗಿದೆ. ನಾಗೇಶ್‌, ಜಿಲ್ಲಾ ಪಂಚಾಯತಿ ಲೆಕ್ಕ ಪರಿಶೋಧಕ ವಿಭಾಗದ ಎಸ್ ಡಿ ಎ ಮಂಜುನಾಥ್ ಹೆಸರು ಉಲ್ಲೇಖವಾಗಿದೆ.

ಆತ್ಮಹತ್ಯೆಗೂ ಮುನ್ನ ಬಾಬು ಡೆತ್ ನೋಟ್ ಬರೆದಿಟ್ಟಿದ್ದಾನೆ. ಡಾ.ಕೆ. ಸುಧಾಕರ್, ನಾಗೇಶ್ ಹಾಗೂ ಮಂಜುನಾಥ್ ವಿರುದ್ಧ ತನಿಖೆ ನಡೆಸಿ ಪತ್ನಿ ಶಿಲ್ಪಾಗೆ ನ್ಯಾಯ ಕೊಡಿಸಬೇಕು ಎಂದು ತಿಳಿಸಿದ್ದಾನೆ. ನನ್ನ ಬಳಿ 35 ಲಕ್ಷ ರೂ. ಹಣ ತೆಗೆದುಕೊಂಡಿದ್ದು, ಮೋಸ ಹೋದ ಕಾರಣ ಸಾವಿಗೆ ಶರಣಾಗುತ್ತಿದ್ದೇನೆ ಎಂದು ಡೆತ್​ ನೋಟ್​​ ನಲ್ಲಿ ಉಲ್ಲೇಖ ಮಾಡಲಾಗಿದೆ.

Read More
Next Story