ಚನ್ನಪಟ್ಟಣದಲ್ಲಿ ನಾಳೆ ಸರೋಜಾದೇವಿ ಅಂತಿಮ ದರ್ಶನ; ಅಂತ್ಯಕ್ರಿಯೆ
x

ಚನ್ನಪಟ್ಟಣದಲ್ಲಿ ನಾಳೆ ಸರೋಜಾದೇವಿ ಅಂತಿಮ ದರ್ಶನ; ಅಂತ್ಯಕ್ರಿಯೆ

ಸರೋಜಾದೇವಿ ಅವರು 1955ರಿಂದ 2020ರವರೆಗೆ ಸುದೀರ್ಘ 7 ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ತಮ್ಮ 29 ವರ್ಷಗಳ ವೃತ್ತಿಜೀವನದಲ್ಲಿ, 1955ರಿಂದ 1984ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.


ಕನ್ನಡ ಚಿತ್ರರಂಗದ ದಂತಕಥೆ, 'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಪಡೆದಿದ್ದ ಹಿರಿಯ ನಟಿ ಬಿ. ಸರೋಜಾದೇವಿ (87) ಇಂದು (ಸೋಮವಾರ) ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಾಳೆ (ಜುಲೈ 15, ಮಂಗಳವಾರ) ಅವರ ಪಾರ್ಥಿವ ಶರೀರವನ್ನು ಮಲ್ಲೇಶ್ವರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಟ್ಟು, ಬಳಿಕ ಚನ್ನಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸರೋಜಾದೇವಿ ಅವರ ಪಾರ್ಥಿವ ಶರೀರವನ್ನು ಇಂದು ಜುಲೈ 14ರ ಮಧ್ಯಾಹ್ನ 12 ಗಂಟೆವರೆಗೂ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ನಾಳೆ, ಜುಲೈ 15 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಏಳು ದಶಕಗಳ ಅದ್ಭುತ ಕಲಾ ಪಯಣ

ಸರೋಜಾದೇವಿ ಅವರು 1955ರಿಂದ 2020ರವರೆಗೆ ಸುದೀರ್ಘ 7 ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ತಮ್ಮ 29 ವರ್ಷಗಳ ವೃತ್ತಿಜೀವನದಲ್ಲಿ, 1955ರಿಂದ 1984ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಒಟ್ಟಾರೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದರು.

ಅವರು ನಟಿಸಿದ ಪ್ರಮುಖ ಕನ್ನಡ ಚಿತ್ರಗಳಲ್ಲಿ 'ಮಹಾಕವಿ ಕಾಳಿದಾಸ', 'ಕಿತ್ತೂರು ಚೆನ್ನಮ್ಮ', 'ಅಣ್ಣಾ ತಮ್ಮ', 'ಭಕ್ತ ಕನಕದಾಸ', 'ಬಾಳೇ ಬಂಗಾರ', 'ನಾಗಕನ್ಯೆ', 'ಬೆಟ್ಟದ ಹೂವು', 'ಕಸ್ತೂರಿ ನಿವಾಸ' ಸೇರಿವೆ. ತಮಿಳಿನಲ್ಲಿ 'ನಾಡೋಡಿ ಮನ್ನನ್', 'ಕರ್ಪೂರ ಕರಸಿ', 'ಪಾಂಡುರಂಗ ಮಹಾತ್ಯಂ', 'ತಿರುಮಣಂ' ಮುಂತಾದ ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2020ರಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದಲ್ಲಿ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದರು.

ಪ್ರಶಸ್ತಿ ಮತ್ತು ಗೌರವಗಳ ಗರಿ

ಸರೋಜಾದೇವಿ ಅವರ ಅಮೋಘ ಕಲಾ ಸೇವೆಗಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. 1969ರಲ್ಲಿ ಪದ್ಮಶ್ರೀ ಮತ್ತು 1992ರಲ್ಲಿ ಭಾರತ ಸರ್ಕಾರದಿಂದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣಕ್ಕೆ ಅವರು ಭಾಜನರಾಗಿದ್ದರು. ಇದರ ಜೊತೆಗೆ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ 'ಕಲೈಮಾಮಣಿ' ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

Read More
Next Story