
ಸಾಂದರ್ಭಿಕ ಚಿತ್ರ
Auto fare hike| ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ ಖಚಿತ
ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು.ಇದೀಗ ವರದಿ ಪರಿಶೀಲಿಸಿ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಬಸ್, ಮೆಟ್ರೋ ಪ್ರಯಾಣ ದರ ಹೆಚ್ಚಳದ ಬಳಿಕ ಆಟೋ ಪ್ರಯಾಣ ದರವೂ ಹೆಚ್ಚಳವಾಗುವ ಕಾಲ ಸನ್ನಿಹಿತವಾಗಿದೆ. ಆಟೋ ಪ್ರಯಾಣ ದರ ಏರಿಕೆ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಇನ್ನಷ್ಟೆ ಆದೇಶ ಹೊರಬೀಳಬೇಕಾಗಿದೆ.
ಬೆಂಗಳೂರು ನಗರದಲ್ಲಿ ಆಟೊ ಮೀಟರ್ ದರ ಏರಿಕೆ ಮಾಡುವಂತೆ ಕಳೆದ ಮೂರು ವರ್ಷಗಳಿಂದ ಆಟೋ ಚಾಲಕ ಹಾಗೂ ಮಾಲೀಕರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿದ್ದವು. ಇದೀಗ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಆಟೋ ಚಾಲಕರ ಮನವಿ ಪುರಸ್ಕರಿಸಲು ಮುಂದಾಗಿದೆ. ಅಧಿಕೃತ ಆದೇಶ ಹೊರಬೀಳುವುದಷ್ಟೇ ಬಾಕಿ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಸ್ತುತ ಇರುವ ಆಟೋ ಪ್ರಯಾಣ ದರ?
ಸದ್ಯ ಬೆಂಗಳೂರಿನಲ್ಲಿ ಕನಿಷ್ಠ ದರ 30 ರೂಪಾಯಿ ಹಾಗೂ ನಂತರ ಪ್ರತಿ ಕಿಲೋ ಮೀಟರ್ ಗೆ 15 ರೂಪಾಯಿ ಇದೆ. ಇದೀಗ ಪರಿಷ್ಕೃತ ದರ ಪಟ್ಟಿ ಪ್ರಕಾರ ಕನಿಷ್ಠ ದರ 30 ರಿಂದ 35 ರೂಪಾಯಿಗೆ, ಅಂದರೆ ಐದು ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ. ನಂತರದ ಪ್ರತಿ ಕಿಲೋ ಮೀಟರ್ ದರ 15 ರಿಂದ 18 ರೂಪಾಯಿಗೆ, ಅಂದರೆ ಮೂರು ರೂಪಾಯಿ ಏರಿಕೆ ಆಗಲಿದೆ.
ಆಟೋ ಮೀಟರ್ ದರ ಏರಿಕೆಗೆ ಜಿಲ್ಲಾಧಿಕಾರಿ ಗ್ರೀನ್ ಸಿಗ್ನಲ್
ಮಾರ್ಚ್ 12ರಂದು ದರ ಏರಿಕೆ ಸಂಬಂಧ ನಡೆದಿದ್ದ ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಸಭೆಯಲ್ಲಿ, ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು.ಇದೀಗ ವರದಿ ಪರಿಶೀಲಿಸಿ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಟೋ ಚಾಲಕರಿಗೆ ಹೆಚ್ಚುತ್ತಿರುವ ವೆಚ್ಚಗಳು
ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯಿಂದಾಗಿ ಆಟೋಗಳ ಕಾರ್ಯಾಚರಣೆಯ ವೆಚ್ಚವೂ ಹೆಚ್ಚುತ್ತಿದೆ. ಎರಡು ವರ್ಷಗಳ ಹಿಂದೆ, ಸಿಎನ್‌ಜಿ ಬೆಲೆ ಕೆ.ಜಿ.ಗೆ 47 ರೂ. ರಿಂದ 50 ರೂ.ವರೆಗೆ ಇತ್ತು. ಇಂದು ಇದು ಸುಮಾರು ಕೆ.ಜಿ.ಗೆ 90 ರೂ ತಲುಪಿದೆ. ಹೆಚ್ಚುವರಿಯಾಗಿ ಪರವಾನಗಿ ನವೀಕರಣ ಮತ್ತು ಪರವಾನಗಿ ಶುಲ್ಕದಂತಹ ವೆಚ್ಚಗಳು ಹೆಚ್ಚಿವೆ. ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ದರ ಹೊಂದಾಣಿಕೆ ಅತ್ಯಗತ್ಯ, ಮತ್ತು ಸಾಧ್ಯವಾದಷ್ಟು ಬೇಗ ಪರಿಷ್ಕರಣೆಗೆ ಅನುಮೋದನೆ ನೀಡುವಂತೆ ಆಟೋ ಚಾಲಕರು ಮನವಿ ಸಲ್ಲಿಸಿದ್ದರು.