Atul Subhash suicide| ಅತುಲ್ ಸುಭಾಷ್ ಆತ್ಮಹತ್ಯೆ: X ನಲ್ಲಿ ಟ್ರೆಂಡ್ ಆಯ್ತು #MenToo, #JusticeForAtulSubhash ಹ್ಯಾಶ್ಟ್ಯಾಗ್
ಸಾಮಾಜಿಕ ಜಾಲತಾಣಗಳಲ್ಲಿ #JusticeForAtulSubhash ಟ್ರೆಂಡಿಂಗ್ ನಲ್ಲಿ ಹಲವಾರು ಜನರು ಅತುಲ್ ಸುಭಾಷ್ ಅವರ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಹಲವರು ತಮ್ಮ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ.
ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಅತುಲ್ ಸುಭಾಷ್ ಅವರು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮೊದಲು ಅವರು 24 ಪುಟಗಳ ಡೆತ್‌ನೋಟ್ ಹಾಗೂ ವಿಡಿಯೋವೊಂದನ್ನು ಮಾಡಿ, ನನ್ನ ಸಾವಿಗೆ ನನ್ನ ಪತ್ನಿ ನಿಖಿತಾ ಸಿಂಘಾನಿಯ ಹಾಗೂ ಅವರ ಕುಟುಂಬದವರೇ ಕಾರಣ. ನಕಲಿ ದೂರು ದಾಖಲು ಮಾಡಿ ನನಗೆ ಕಿರುಕುಳ ನೀಡಲಾಗಿದೆ ಎಂದು ಅವರು ಆರೋಪಿಸಿದ್ದರು.
ಈ ಪ್ರಕರಣವು ಇದೀಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ #JusticeForRishi, #JusticeForAtulSubhash, #MenTooಹ್ಯಾಶ್ಟ್ಯಾಗ್ X ನಲ್ಲಿ ಟ್ರೆಂಡಿಂಗ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ವಿವಿಧ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅತುಲ್ ಸುಭಾಷ್ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, #JusticeForAtulSubhash ಎಂಬ ಹ್ಯಾಷ್ ಟ್ಯಾಗ್ ಫೇಸ್ ಬುಕ್ ನಲ್ಲಿ ಕೂಡ ಟ್ರೆಂಡಿಗ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ #JusticeForAtulSubhash ಟ್ರೆಂಡಿಂಗ್ ನಲ್ಲಿ ಹಲವಾರು ಜನರು ಅತುಲ್ ಸುಭಾಷ್ ಅವರ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಹಲವರು ತಮ್ಮ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ.
X ಪೋಸ್ಟ್‌ನಲ್ಲಿ ಏನಿದೆ?
ಅತುಲ್ ಸುಭಾಷ್ ಅವರ ಕಥೆ ನಿಜವಾಗಿಯೂ ತುಂಬಾ ದುಃಖ ಮತ್ತು ಆತಂಕಕಾರಿಯಾಗಿದೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಹಾಗೂ 24 ಪುಟಗಳ ಸೂಸೈಡ್ ನೋಟ್ ಬಿಟ್ಟು ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಮಾನಸಿಕ ಕಿರುಕುಳ ಹಾಗೂ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ವೀಡಿಯೋದಲ್ಲಿ ಅವರು ಹೇಳುತ್ತಿರುವುದರಲ್ಲಿ ಅರ್ಧದಷ್ಟು ಸತ್ಯವಿದ್ದರೆ, ದೇಶದ ವ್ಯವಸ್ಥೆ ಮತ್ತು ಕಾನೂನು ತನಗೆ ದೊಡ್ಡ ಅನ್ಯಾಯ ಮಾಡಿದೆ ಎಂದು ಒಬ್ಬ ಟ್ವಿಟ್ಟರ್ ಬಳಕೆದಾರರು ಹೇಳಿದ್ದಾರೆ! ಅವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ ಎಂದು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರ ನಮ್ಮ ಕಾನೂನು ವ್ಯವಸ್ಥೆಯ ಈ ಭಾಗವನ್ನು ಸಂಪೂರ್ಣವಾಗಿ ಸುಧಾರಿಸಲು ಜನರು ಒತ್ತಾಯಿಸಬೇಕು. ಈ ಸನ್ನಿವೇಶದಲ್ಲಿ ಎಷ್ಟೋ ಮುಗ್ಧ ಪುರುಷರು ಮತ್ತು ಅವರ ಕುಟುಂಬಗಳು ನರಳುತ್ತಿದ್ದಾರೆ. ಊಹಿಸಿ, #AtulSubhash ತನ್ನ ಕೊನೆಯ ಕ್ಷಣಗಳಲ್ಲಿ ಏನನ್ನು ಸಹಿಸಬೇಕಾಗಿತ್ತು ಎಂದು ಅವರು ಬರೆದುಕೊಂಡಿದ್ದಾರೆ.
ಅತುಲ್ ಸೋತಿದ್ದಾರೆ, ನ್ಯಾಯಾಂಗ ವ್ಯವಸ್ಥೆಯು ಗೆದ್ದಿದೆ ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಒಬ್ಬ ಬಳಕೆದಾರ ಅವರ ಮೇಲೆ ಕೊಲೆಯ ಆರೋಪವೂ ಇರಲಿಲ್ಲ, ಆದರೆ ಅವರ ದಬ್ಬಾಳಿಕೆಯ ನ್ಯಾಯಾಂಗ ಆದೇಶಗಳನ್ನು ಅನುಸರಿಸಿ, ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡರು ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು #JusticeForAtulSubhash ಮತ್ತು #MenToo ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಕಾನೂನು ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪುರುಷರ ವಿರುದ್ಧದ ವ್ಯವಸ್ಥಿತ ಪಕ್ಷಪಾತಗಳನ್ನು ಬಹಿರಂಗಪಡಿಸುತ್ತಿದ್ದಾರೆ.
ಪತ್ನಿ ಕೆಲಸ ಮಾಡುವ ಆಕ್ಸೆಂಚರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬಳಕೆದಾರರು
ಆತ್ಮಹತ್ಯೆಗೀಡಾದ ಅಕುಲ್ ಪತ್ನಿ ಆಕ್ಸೆಂಚರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಕೆಲಸದಿಂದ ವಜಾ ಮಾಡುವಂತೆ ಆಕ್ಸೆಂಚರ್‌ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಜನರು ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಎಕ್ಸ್‌ನಲ್ಲಿ ನಿಕಿತಾ ಸಿಂಘಾನಿಯಾ ಅವರನ್ನು ವಜಾಗೊಳಿಸಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ. ಜನರ ಕೋಪವು ಎಷ್ಟು ಹೆಚ್ಚಾಯಿತು ಎಂದರೆ ಅವರು ಆಕ್ಸೆಂಚರ್ ಅನ್ನು ಟ್ಯಾಗ್ ಮಾಡಲು ಪ್ರಾರಂಭಿಸಿ, ನಿಕಿತಾ ಸಿಂಘಾನಿಯಾ ಅವರನ್ನು ಕೆಲಸದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.
ಒಬ್ಬ ಬಳಕೆದಾರ @AccentureIndia @Accenture ನೀವು ಇನ್ನೂ ತನ್ನ ಮಾಜಿ ಪತಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಕಿರುಕುಳ ನೀಡಿದ ಮಹಿಳೆ ನಿಕಿತಾ ಸಿಂಘಾನಿಯಾ ಅವರ ಉದ್ಯೋಗದಾತರಾಗಲು ಬಯಸುತ್ತೀರಾ? @JulieSweet ನೀವು ಅವಳನ್ನು Accenture ನ CEO ಆಗಿ ಬೆಂಬಲಿಸುತ್ತೀರಾ? ವಿಚಿತ್ರವೆಂದರೆ ನೀವು ಅವಳನ್ನು ಇನ್ನೂ ವಜಾ ಮಾಡಿಲ್ಲ ಎಂದು ಬರೆದಿದ್ದಾರೆ.
X ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಾ, ಇನ್ನೊಬ್ಬ ಬಳಕೆದಾರರು ಹೇಳಿದರು “ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ @Accenture @AccentureIndia ನಲ್ಲಿ ಕೆಲಸ ಮಾಡುತ್ತಾರೆ. ನೈತಿಕ ಆಧಾರದ ಮೇಲೆ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಆರೋಪಗಳ ಆಧಾರದ ಮೇಲೆ, ಆಕ್ಸೆಂಚರ್ ಅವರನ್ನು ವಜಾ ಮಾಡಬೇಕು, ಇಲ್ಲದಿದ್ದರೆ ವಿರೋಧವನ್ನು ಎದುರಿಸಲು ಸಿದ್ಧರಾಗಿರಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಜನರ ಕೋಪ ನೋಡಿ ಪ್ರೊಫೈಲ್ ಲಾಕ್ ಮಾಡಿದ ಆಕ್ಸೆಂಚರ್
ಸೋಷಿಯಲ್ ಮೀಡಿಯಾದಲ್ಲಿ ಅತುಲ್ ಸುಭಾಷ್ ಅವರನ್ನು ಗುರಿಯಾಗಿಸಿಕೊಂಡು ಅತುಲ್ ಸುಭಾಷ್ ಅವರ ಪತ್ನಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿದ ಆಕ್ಸೆಂಚರ್ ಟ್ಯಾಗ್ ಮಾಡಲಾಗಿತ್ತು. ಇದರಿಂದ ಆಕ್ಸೆಂಚರ್ ಅವರ ಎಕ್ಸ್ ಖಾತೆಯ ಪ್ರೊಫೈಲ್ ಅನ್ನು ಲಾಕ್ ಮಾಡಿದೆ.
ಅತುಲ್ ಸುಭಾಷ್ ತಂದೆ ಹೇಳಿದ್ದೇನು?
ಅತುಲ್ ಸುಭಾಷ್ ಅವರ ತಂದೆ ತನ್ನ ಮಗನ ಸಾವಿನ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 'ನನ್ನ ಮಗ ದೀರ್ಘಕಾಲ ಉಸಿರುಗಟ್ಟಿ ಬದುಕುತ್ತಿದ್ದ. ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಕಲ್ಪನೆಯೂ ನಮಗಿರಲಿಲ್ಲ. ಆದರೆ ಕಳೆದ 2-3 ತಿಂಗಳಿಂದ ಒಳಗೊಳಗೆ ಸಂಪೂರ್ಣ ಒಡೆದು ಹೋಗಿದ್ದರು. ಅವನು ಅಂತಹ ಹೆಜ್ಜೆ ಇಡಬಹುದು ಎಂದು ನಾವು ಹೆದರುತ್ತಿದ್ದೆವು.
ಭಗತ್ ಸಿಂಗ್ ಗೆ ಹೋಲಿಸಿದ ಮಗ
ಅತುಲ್ ಸುಭಾಷ್ ಅವರ ತಂದೆ ಪವನ್ ಮೋದಿ ಅವರು ತಮ್ಮ ಮಗನನ್ನು ಭಗತ್ ಸಿಂಗ್ ಗೆ ಹೋಲಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಸಿಂಗ್ ನನ್ನು ಹೇಗೆ ಗಲ್ಲಿಗೇರಿಸಲಾಯಿತು, ಅದೇ ರೀತಿ ನನ್ನ ಮಗ ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆಗಾಗಿ ಪ್ರಾಣ ಕೊಟ್ಟಿದ್ದಾನೆ ಎಂದು ಅತುಲ್ ತಂದೆ ಅಳಲು ತೋಡಿಕೊಂಡರು. ನನ್ನ ಮಗ ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ ಅವರಿಗೆ ಸಂದೇಶ ನೀಡಿದ್ದಾನೆ ಎಂದು ಹೇಳಿದರು.
ಪ್ರಧಾನಿ ಮೋದಿಗೆ ಮನವಿ
ಅತುಲ್ ಸುಭಾಷ್ ಅವರ ತಂದೆ ಮಗನಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿ ಸಲ್ಲಿಸಿದರು. ನನ್ನ ಮಗನಿಗೆ ನ್ಯಾಯ ಸಿಗುತ್ತದೆ ಎಂದು ಪ್ರಧಾನಿ ಮೋದಿಯವರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ನಾನು ನನ್ನ ಮೊಮ್ಮಗನ ಮುಖವನ್ನೂ ನೋಡಿಲ್ಲ ಮತ್ತು ಅವನು ನಮ್ಮೊಂದಿಗೆ ಬದುಕಬೇಕೆಂದು ನಾನು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಅತುಲ್ ಆರೋಪವೇನು?
ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಮತ್ತು ಅಸ್ವಾಭಾವಿಕ ಅಪರಾಧಗಳು ಸೇರಿದಂತೆ ಒಂಬತ್ತು ಪ್ರಕರಣಗಳನ್ನು ಪತ್ನಿ ತನ್ನ ವಿರುದ್ಧ ದಾಖಲಿಸಿದ್ದಾರೆ ಎಂದು ಸುಭಾಷ್ ಅವರು ತಮ್ಮ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
2019ರಲ್ಲಿ ಅತುಲ್ ಸುಭಾಷ್ ನಿಕಿತಾ ಸಿಂಘಾನಿಯ ಮದುವೆಯಾಗಿದ್ದರು. ದಂಪತಿಗೆ ಗಂಡು ಮಗು ಇದೆ. ನಿಕಿತಾ ಸಿಂಘಾನಿಯಾ ತಾಯಿ ನಿಶಾ ಸಿಂಘಾನಿಯಾ. ಸಹೋದರ ಅನುರಾಗ ಸಿಂಘಾನಿಯಾ. ಸಂಬಂಧಿ ಸುಶೀಲ್ ಸಿಂಘಾನಿಯಾ ಸೇರಿ ಅತುಲ್ ಮೇಲೆ ಸುಳ್ಳು ಕೇಸ್ ಹಾಕಿದ್ದರು. ಪ್ರಕರಣದ ಇತ್ಯರ್ಥಕ್ಕಾಗಿ 3 ಕೋಟಿ ರೂಪಾಯಿಗಳನ್ನು ಕೊಡಬೇಕೆಂದು ಎಂಬ ಬೇಡಿಕೆಯನ್ನು ಇಟ್ಟಿದ್ದರು. ಸ್ವಂತ ಮಗನ ಭೇಟಿಗೆ ಅವಕಾಶ ನೀಡಲು 30 ಲಕ್ಷ ರೂಪಾಯಿ ಹಣ ಕೊಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದರು ಎಂದು ಅತುಲ್ ತಮ್ಮಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು.
ಪೊಲೀಸ್ ತನಿಖೆ ಮತ್ತು ಕಾನೂನು ಕ್ರಮ
ಸುಭಾಷ್ ಅವರ ಸಹೋದರ ವಿಕಾಸ್ ಕುಮಾರ್ ನೀಡಿದ ದೂರಿನ ಮೇರೆಗೆ ಮಾರತ್ತಹಳ್ಳಿ ಪೊಲೀಸರು ಸುಭಾಷ್ ಅವರ ಪತ್ನಿ, ಅವರ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ.
ನ್ಯಾಯಾಲಯದ ಕಲಾಪಗಳು ಮತ್ತು ಅತ್ತಿಗೆಯ ನಿರಂತರ ಅಪಹಾಸ್ಯದಿಂದಾಗಿ ಸುಭಾಷ್ ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು. ಪ್ರತಿ ಬಾರಿ ಅತುಲ್ ನ್ಯಾಯಾಲಯದ ವಿಚಾರಣೆಗೆ ಹಾಜರಾದಾಗ, ಅವನ ಸಂಬಂಧಿಕರು ಅವನನ್ನು ಗೇಲಿ ಮಾಡುತ್ತಿದ್ದರು ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.