ವಿಮಾನದಲ್ಲಿ ಹತ್ತು ಹಳದಿ ಹೆಬ್ಬಾವು ಕಳ್ಳಸಾಗಣೆ: ಆರೋಪಿ ಕೆಐಎಎಲ್ ಕಸ್ಟಮ್ಸ್ ವಶಕ್ಕೆ
ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸುವಾಗ ಆರೋಪಿ ಅನಕೊಂಡಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಆರೋಪಿಯನ್ನು 56 ವರ್ಷದ ಕೈಶರ್ ಜಮೀಲ್ ಅಹಮದ್ ಎಂದು ಗುರುತಿಸಲಾಗಿದೆ.
ಬೆಂಗಳೂರು: ಬ್ಯಾಂಕಾಕ್‌ನಿಂದ 10 ಹಳದಿ ಅನಕೊಂಡ(ಹೆಬ್ಬಾವು)ಗಳನ್ನು ಬೆಂಗಳೂರಿಗೆ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎಎಲ್) ವಶಕ್ಕೆ ಪಡೆಯಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸುವಾಗ ಆರೋಪಿ ಅನಕೊಂಡಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಆರೋಪಿಯನ್ನು 56 ವರ್ಷದ ಕೈಶರ್ ಜಮೀಲ್ ಅಹಮದ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು, ಬ್ಯಾಂಕಾಕ್‌ನಿಂದ ಆಗಮಿಸುವ ಪ್ರಯಾಣಿಕರ ಚೆಕ್-ಇನ್ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ 10 ಹಳದಿ ಅನಕೊಂಡಗಳ ಕಳ್ಳಸಾಗಣೆ ಪ್ರಯತ್ನವನ್ನು ತಡೆದಿದ್ದೇವೆ ಎಂದು ಹೇಳಿದ್ದಾರೆ.
"ಆರೋಪಿ ಪ್ರಯಾಣಿಕನನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ವನ್ಯಜೀವಿ ಕಳ್ಳಸಾಗಣೆಯನ್ನು ಸಹಿಸಲಾಗುವುದಿಲ್ಲ" ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. ಭಾರತೀಯ ಕಾನೂನುಗಳ ಪ್ರಕಾರ ವನ್ಯಜೀವಿ ವ್ಯಾಪಾರ ಕಾನೂನುಬಾಹಿರ ಮತ್ತು ಕಸ್ಟಮ್ಸ್ ಆಕ್ಟ್ 1962 ರ ಪ್ರಕಾರ ವನ್ಯಜೀವಿ ಕಳ್ಳಸಾಗಣೆ ತಡೆಗೆ ಹಲವು ಕಾನೂನುಗಳನ್ನು ಒಳಗೊಂಡಿದೆ.
10 ಹಾವುಗಳ ಪೈಕಿ ಮೂರು ಹಾವುಗಳು ಥಾಯ್ಲೆಂಡ್‌ನ ಬ್ಯಾಂಕಾಕ್‌ನಿಂದ ಬರುವಾಗಲೇ ಸತ್ತಿವೆ. ಉಳಿದವರನ್ನು ಭಾನುವಾರ (ಏ. 21) ಥಾಯ್ಲೆಂಡ್‌ಗೆ ವಾಪಸ್ ಕಳುಹಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆಯ ಮೂಲಗಳು ತಿಳಿಸಿವೆ.