ATM Robbery | ಕಲಬುರಗಿಯಲ್ಲಿ ಎಟಿಎಂ ದರೋಡೆ; 18 ಲಕ್ಷ ರೂ. ದೋಚಿ ಪರಾರಿ
x

ATM Robbery | ಕಲಬುರಗಿಯಲ್ಲಿ ಎಟಿಎಂ ದರೋಡೆ; 18 ಲಕ್ಷ ರೂ. ದೋಚಿ ಪರಾರಿ

ಕಲಬುರಗಿ ರಿಂಗ್‌ ರಸ್ತೆಯಲ್ಲಿ ದರೋಡೆಕೋರರು ಎಟಿಎಂ ಯಂತ್ರದ ಕ್ಯಾಶ್ ಬಾಕ್ಸ್ ತೆರೆದು, 18 ಲಕ್ಷ ರೂ ನಗದು ದೋಚಿರುವ ಘಟನೆ ಪರಾರಿಯಾಗಿದ್ದಾರೆ.


ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿ ಎಸ್ಬಿಐ ಬ್ಯಾಂಕಿನ ಎಟಿಎಂಗೆ ನುಗ್ಗಿದ ದರೋಡೆಕೋರರು ಎಟಿಎಂ ಯಂತ್ರವನ್ನು ಧ್ವಂಸ ಮಾಡಿ 18 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ರಿಂಗ್ ರಸ್ತೆಯ ರಾಮನಗರದಲ್ಲಿ ಬುಧವಾರ ನಸುಕಿನ ಜಾವ 4 ರಸುಮಾರಿಗೆ ದರೋಡೆಕೋರರು ಕಾರಿನಲ್ಲಿ ಎಟಿಎಂ ಬಳಿಗೆ ಬಂದಿದ್ದಾರೆ. ಎಟಿಎಂ ಕೇಂದ್ರದ ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಗ್ರೇ ಬಣ್ಣ ಸ್ಪ್ರೇ ಮಾಡಿ ಹಣ ದರೋಡೆ ಮಾಡಿದ್ದಾರೆ.

ಇದಕ್ಕೂ ಮುನ್ನ ಗ್ಯಾಸ್ ಕಟರ್‌ನಿಂದ ಎಟಿಎಂ ಯಂತ್ರದ ಕ್ಯಾಶ್ ಬಾಕ್ಸ್ ತೆರೆದು, ಅದರಲ್ಲಿದ್ದ 18 ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದಾರೆ. ಬ್ಯಾಂಕ್ ಸಿಬ್ಬಂದಿ ಮಂಗಳವಾರ ಸಂಜೆ 6ರ ಸುಮಾರಿಗೆ ಎಟಿಎಂ ಯಂತ್ರದಲ್ಲಿ ಹಣ ಹಾಕಿದ್ದರು. ಮರುದಿನ ನಸುಕಿನ ಜಾವವೇ ದರೋಡೆ ನಡೆದಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಬರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇತ್ತೀಚೆಗೆ ಬೀದರ್‌ನಲ್ಲಿ ಎಟಿಎಂ ವಾಹನ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ ಆಗಂತುಕರು ಸುಮಾರು 1 ಕೋಟಿ ಹಣದೊಂದಿಗೆ ಪರಾರಿಯಾಗಿದ್ದರು. ಹೈದರಾಬಾದ್ನಿಂದ ಛತ್ತೀಸ್ಗಢಕ್ಕೆ ಪರಾರಿಯಾಗಲು ಯತ್ನಿಸಿದ್ದ ಇಬ್ಬರು ದರೋಡೆಕೋರರನ್ನು ಬೀದರ್ ಪೊಲೀಸರು ಹಾಗೂ ಹೈದರಾಬಾದ್ ಪೊಲೀಸರು ಬಂಧಿಸಿದ್ದರು.

Read More
Next Story