
ಜ್ಯೂಸ್ ಎಂದು ಭಾವಿಸಿ ಕಳೆನಾಶಕ ಸೇವಿಸಿ 14 ವರ್ಷದ ಬಾಲಕಿ ಸಾವು
ಆರೋಗ್ಯ ಕಾಪಾಡಿಕೊಳ್ಳಲು ನಿಧಿ ಆಗಾತ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಈ ನಡುವೆ ಕುಟುಂಬಸ್ಥರು ಅಲೋವೆರಾ ಜ್ಯೂಸ್ ಖಾಲಿಯಾದ ಡಬ್ಬದಲ್ಲಿ ಕಳೆನಾಶಕ ಔಷಧ ತುಂಬಿಟ್ಟಿದ್ದರು.
ಆಘಾತಕಾರಿ ಘಟನೆಯೊಂದರಲ್ಲಿ ಮನೆಯಲ್ಲಿಟ್ಟಿದ್ದ ರಾಸಾಯನಿಕವನ್ನು ಜ್ಯೂಸ್ ಎಂದು ತಪ್ಪಾಗಿ ಭಾವಿಸಿ ಕುಡಿದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೋಷಕರ ನಿರ್ಲಕ್ಷ್ಯವೇ ಅದಕ್ಕೆ ಕಾರಣವಾಗಿದ್ದು, ಎಳೆ ಮಗುವೊಂದು ಪ್ರಾಣ ಕಳೆದುಕೊಂಡಿದೆ.
ಅಂದ ಹಾಗೆ ರಾಸಾಯನಿಕವನ್ನು ಪೋಷಕರು ಅಲೋವೇರಾ ಡಬ್ಬದಲ್ಲಿ ಹಾಕಿಟ್ಟಿದ್ದರು. ಅದನ್ನು ತಪ್ಪಾಗಿ ತಿಳಿದುಕೊಂಡ ಬಾಲಕಿ ಕುಡಿದಿದ್ದಳು. ಬೆಂಗಳೂರಿನ ಬ್ಯಾಟರಾಯನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿಧಿಕೃಷ್ಣ (14) ಎನ್ನುವ ಬಾಲಕಿ ಮೃತಪಟ್ಟವಳು.
ಆರೋಗ್ಯ ಕಾಪಾಡಿಕೊಳ್ಳಲು ನಿಧಿ ಆಗಾತ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಈ ನಡುವೆ ಕುಟುಂಬಸ್ಥರು ಅಲೋವೆರಾ ಜ್ಯೂಸ್ ಖಾಲಿಯಾದ ಡಬ್ಬದಲ್ಲಿ ಕಳೆನಾಶಕ ಔಷಧ ತುಂಬಿಟ್ಟಿದ್ದರು. ಮಾರ್ಚ್ 4ರಂದು ಜ್ಯೂಸ್ ಎಂದು ಭಾವಿಸಿ ನಿಧಿ ಹರ್ಬಿಸೈಡ್ ಔಷಧ ಕುಡಿದಿದ್ದಾಳೆ. ಅನಾರೋಗ್ಯ ತಲೆದೋರಿದ ಹಿನ್ನೆಲೆಯಲ್ಲಿ ತಕ್ಷಣ ನಿಧಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 31ರಂದು ನಿಧಿ ಮೃತಪಟ್ಟಿದ್ದಾಳೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.