
ಅಸ್ಸಾಂನಲ್ಲಿ ಭೂಕಂಪ: ಗುವಾಹಟಿಯಲ್ಲಿ 5.8 ತೀವ್ರತೆಯ ಕಂಪನಕ್ಕೆ ಬೆಚ್ಚಿಬಿದ್ದ ಜನ
ಭಾನುವಾರ ಸಂಜೆ 4. 41ಕ್ಕೆ ಸಂಭವಿಸಿದ ಈ ಭೂಕಂಪದ ಕೇಂದ್ರಬಿಂದು ಉದಲ್ಗುರಿ ಜಿಲ್ಲೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಮಿಯ 5 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ.
ಅಸ್ಸಾಂನಲ್ಲಿ ಭಾನುವಾರ ಸಂಜೆ ರಿಕ್ಟರ್ ಪಾಮಕದಲ್ಲಿ 5.8 ಕಂಪನ ಹೊಂದಿದ ತೀವ್ರತೆಯ ಭೂಕಂಪ ಸಂಭವಿಸಿದ್ದು, ಗುವಾಹಟಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೆ ಪ್ರಕಾರ, ಈ ಭೂಕಂಪದಿಂದಾಗಿ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.
ಭಾನುವಾರ ಸಂಜೆ 4. 41ಕ್ಕೆ ಸಂಭವಿಸಿದ ಈ ಭೂಕಂಪದ ಕೇಂದ್ರಬಿಂದು ಉದಲ್ಗುರಿ ಜಿಲ್ಲೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಮಿಯ 5 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ. ಈ ಭೂಕಂಪದ ಅನುಭವವನ್ನು ಹಂಚಿಕೊಂಡ ಗುವಾಹಟಿಯ ನಿವಾಸಿಯೊಬ್ಬರು, "ಭೂಕಂಪ ನಿಲ್ಲುವುದೇ ಇಲ್ಲವೇನೋ ಎನಿಸಿತು. ಒಂದು ಕ್ಷಣ ನಾನು ಸತ್ತೇ ಹೋದೆ ಎಂದುಕೊಂಡಿದ್ದೆ. ಮನೆಯ ಮೇಲ್ಛಾವಣಿ ಕುಸಿದು ಬೀಳುತ್ತದೆ ಎಂದೇ ಭಾವಿಸಿದ್ದೆ" ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಭೂಕಂಪದ ತೀವ್ರತೆಗೆ ಜನರು ಭೀತಿಗೊಂಡು ಬೀದಿಗಿಳಿದರೂ, ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕಂಪನದ ಅನುಭವವು ಅಸ್ಸಾಂ ಮಾತ್ರವಲ್ಲದೆ, ನೆರೆಯ ಭೂತಾನ್ ಮತ್ತು ಉತ್ತರ ಬಂಗಾಳದ ಕೆಲವು ಭಾಗಗಳಲ್ಲಿಯೂ ಆಗಿದೆ ಎಂದು ವರದಿಯಾಗಿದೆ.