ಧರ್ಮಸ್ಥಳದ ಮೇಲಿನ ಅಪಪ್ರಚಾರ ತಡೆಯಲು ಮುಖ್ಯಮಂತ್ರಿಗೆ ಮನವಿ: ಧರ್ಮ ಜಾಗೃತಿ ಸಭೆಯಲ್ಲಿ ನಿರ್ಣಯ
x

ಒಂದು ಪವಿತ್ರ ಸ್ಥಳವನ್ನು ಕೆಟ್ಟದಾಗಿ ಬಿಂಬಿಸುವ ಚಾಳಿ ಸರಿಯಲ್ಲ. ತನಿಖೆಯೊಂದು ಆರಂಭವಾದಾಗಿನಿಂದಲೂ ನಿರಂತರವಾಗಿ ಕ್ಷೇತ್ರದ ಮೇಲೆ ಅಪಪ್ರಚಾರ ನಡೆಯುತ್ತಿದೆ.

ಧರ್ಮಸ್ಥಳದ ಮೇಲಿನ ಅಪಪ್ರಚಾರ ತಡೆಯಲು ಮುಖ್ಯಮಂತ್ರಿಗೆ ಮನವಿ: ಧರ್ಮ ಜಾಗೃತಿ ಸಭೆಯಲ್ಲಿ ನಿರ್ಣಯ

ಧಾರ್ಮಿಕ ಮುಖಂಡ ಎಂ. ಬಿ. ಪುರಾಣಿಕ್ ಮಾತನಾಡಿ, "ಇದು ಒಂದು ಸಂಕೀರ್ಣ ಸಮಸ್ಯೆಯಾಗಿದೆ. ಎಲ್ಲೋ ಕೃತ್ಯಗಳು ನಡೆದಿವೆ ಎಂದು ದೇವರನ್ನು ಅವಮಾನಿಸುವುದು ಮತ್ತು ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವುದು ಸಭ್ಯ ಸಂಸ್ಕೃತಿಯ ಲಕ್ಷಣವಲ್ಲ.


ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರವನ್ನು ಶಾಶ್ವತವಾಗಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ತೀರ್ಮಾನಿಸಿದೆ. ಈ ಕುರಿತು ನಗರದ ಪುರಭವನದಲ್ಲಿ ನಡೆದ 'ಧರ್ಮ ಜಾಗೃತಿ' ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಟೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಹರಿನಾರಾಯಣ ಅಸ್ರಣ್ಣ, "ಒಂದು ಪವಿತ್ರ ಸ್ಥಳವನ್ನು ಕೆಟ್ಟದಾಗಿ ಬಿಂಬಿಸುವ ಚಾಳಿ ಸರಿಯಲ್ಲ. ತನಿಖೆಯೊಂದು ಆರಂಭವಾದಾಗಿನಿಂದಲೂ ನಿರಂತರವಾಗಿ ಕ್ಷೇತ್ರದ ಮೇಲೆ ಅಪಪ್ರಚಾರ ನಡೆಯುತ್ತಿದೆ. ಧರ್ಮವನ್ನು ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ತಡೆಯಲು ಸರ್ಕಾರದ ವತಿಯಿಂದ ಕಠಿಣ ಕ್ರಮ ಅಗತ್ಯವಿದೆ," ಎಂದು ಆಗ್ರಹಿಸಿದರು.

ಧಾರ್ಮಿಕ ಮುಖಂಡ ಎಂ. ಬಿ. ಪುರಾಣಿಕ್ ಮಾತನಾಡಿ, "ಇದು ಒಂದು ಸಂಕೀರ್ಣ ಸಮಸ್ಯೆಯಾಗಿದೆ. ಎಲ್ಲೋ ಕೃತ್ಯಗಳು ನಡೆದಿವೆ ಎಂದು ದೇವರನ್ನು ಅವಮಾನಿಸುವುದು ಮತ್ತು ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವುದು ಸಭ್ಯ ಸಂಸ್ಕೃತಿಯ ಲಕ್ಷಣವಲ್ಲ," ಎಂದು ಅಭಿಪ್ರಾಯಪಟ್ಟರು. ಮುಖಂಡ ಎ. ಸಿ. ಭಂಡಾರಿ, "ಶ್ರೀಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಲು ನಾವೆಲ್ಲರೂ ಒಟ್ಟಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಬೇಕು," ಎಂದು ಕರೆ ನೀಡಿದರು.

ಈ ಮಹತ್ವದ ಸಭೆಯಲ್ಲಿ ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀನಾಥ್ ಹೆಬ್ಬಾರ್, ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಸೇರಿದಂತೆ ಹಲವು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಭಾಗವಹಿಸಿದ್ದರು. ಎಲ್ಲರೂ ಒಕ್ಕೊರಲಿನಿಂದ ಈ ನಿರ್ಣಯಕ್ಕೆ ಬೆಂಬಲ ಸೂಚಿಸಿದರು.

Read More
Next Story