Kantara: Chapter 1| ‘ಕಾಂತಾರ: ಚಾಪ್ಟರ್ 1 ಸಹ ಕಲಾವಿದ ವಿಜು ವಿಕೆ ಹೃದಯಾಘಾತದಿಂದ ನಿಧನ
x

ಸಾಂದರ್ಭಿಕ ಚಿತ್ರ

Kantara: Chapter 1| ‘'ಕಾಂತಾರ: ಚಾಪ್ಟರ್ 1' ಸಹ ಕಲಾವಿದ ವಿಜು ವಿಕೆ ಹೃದಯಾಘಾತದಿಂದ ನಿಧನ

ಜೂನ್ 11ರ ರಾತ್ರಿ ವಿಜು ವಿಕೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ನಿಧನ ಹೊಂದಿದ್ದಾರೆ.


ಉದಯೋನ್ಮುಖ ಕಲಾವಿದ ರಾಕೇಶ್​ ಪೂಜಾರಿ ಹೃದಯಾಘಾತದಿಂದ ನಿಧನ ಹೊಂದಿದ ದುಃಖ ಮಾಸುವ ಮುನ್ನವೇ 'ಕಾಂತಾರ: ಚಾಪ್ಟರ್ 1' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದ ಸಹ ಕಲಾವಿದರೊಬ್ಬರು ಹೃದಯ ಸ್ತಂಭನಗೊಂಡು ನಿಧನ ಹೊಂದಿದ್ದಾರೆ. ವಿಜು ವಿಕೆ ನಿಧನ ಹೊಂದಿರುವ ಕಲಾವಿದರು. ಕೇರಳದ ತ್ರಿಶೂರ್ ಮೂಲದವರಾದ ವಿಜು ಸಿನಿಮಾದ ಚಿತ್ರೀಕರಣಕ್ಕಾಗಿ ಕರ್ನಾಟಕಕ್ಕೆ ಬಂದಿದ್ದರು.

ವಿಜು ಅವರು ಆಗುಂಬೆ ಸಮೀಪದ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು. ಜೂನ್ 11ರ ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

'ಕಾಂತಾರ' ತಂಡದಲ್ಲಿ ಸತತ ದುರಂತ

'ಕಾಂತಾರ' ಸಿನಿಮಾ ತಂಡದಲ್ಲಿ ಕೆಲವೇ ತಿಂಗಳ ಅಂತರದಲ್ಲಿ ಮೂವರು ಕಲಾವಿದರು ಮೃತಪಟ್ಟಿದ್ದಾರೆ. ಮೇ 6ರಂದು , ಕಪಿಲ್ ಎಂಬುವವರು ಶೂಟಿಂಗ್ ಮುಗಿದ ಬಳಿಕ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಮುಳುಗಿ ನಿಧನರಾಗಿದ್ದರು. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ಹಾಗೂ 'ಕಾಮಿಡಿ ಕಿಲಾಡಿ' ಖ್ಯಾತಿಯ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದರು.

Read More
Next Story