ಅಂಗನವಾಡಿ ಕಾರ್ಯಕರ್ತೆಯರಿಗೆ ಭಾರೀ ವಂಚನೆ;  AITUC ಪದಾಧಿಕಾರಿಗಳ ವಿರುದ್ಧ ಆರೋಪ
x

ಸಾಂದರ್ಭಿಕ ಚಿತ್ರ

ಅಂಗನವಾಡಿ ಕಾರ್ಯಕರ್ತೆಯರಿಗೆ ಭಾರೀ ವಂಚನೆ; AITUC ಪದಾಧಿಕಾರಿಗಳ ವಿರುದ್ಧ ಆರೋಪ

ದೇವನಾಂ ಪ್ರಿಯದರ್ಶಿ ಟ್ರಸ್ಟ್‌ನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ ಮಾಡಲಾಗಿದ್ದು, ಸುಮಾರು 18 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ ಆರೋಪ ಕೇಳಿಬಂದಿದೆ.


ಅಂಗನವಾಡಿ ಕಾರ್ಯಕರ್ತೆಯರ ಹಿತಾಸಕ್ತಿ ಹೆಸರಲ್ಲಿ ಕೋಟ್ಯಾಂತರ ರೂ. ವಂಚನೆ ಮಾಡಿದ ಆರೋಪ ಕೇಳಿಬಂದಿದೆ.

ದೇವನಾಂ ಪ್ರಿಯದರ್ಶಿ ಟ್ರಸ್ಟ್‌ನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ ಮಾಡಲಾಗಿದ್ದು, ಸುಮಾರು 18 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

AITUC ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ ಮತ್ತು ಶ್ರೀಧರ ವಿರುದ್ಧ ವಂಚನೆ ಆರೋಪವಿದೆ. 2019 -20 ರಲ್ಲಿ ದೇವನಾಂ ಪ್ರಿಯದರ್ಶಿ ಎಂಬ ಟ್ರಸ್ಟ್ ಸ್ಥಾಪಿಸಿದ್ದ ಶ್ರೀಧರ, ಬಳಿಕ ಜಯಮ್ಮ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಆಮಿಷವೊಡ್ಡಿ ಹಣ ವಸೂಲಿ ಮಾಡಿದ್ದರೆನ್ನಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಹಿತಾಸಕ್ತಿಗಾಗಿ ಎಂದು ಹೇಳಿ ಜನರನ್ನು ನಂಬಿಸಿ ಹಣ ವಸೂಲಿ ಮಾಡಲಾಗಿದೆ. ಪ್ರತೀ ತಿಂಗಳು 310 ರೂ ಹಣವನ್ನು ವಸೂಲಿ ಮಾಡಲಾಗಿದೆ. ಒಂದು ಲಕ್ಷ ರೂ ನಿವೃತ್ತಿ ಸಹಾಯ ಧನ, ಮರಣ ಹೊಂದಿದವರಿಗೆ 2.5 ಲಕ್ಷ ರೂಪಾಯಿ, ನಿವೃತ್ತಿಯಾದ ಬಳಿಕ ಪ್ರತಿ ತಿಂಗಳು 5 ಸಾವಿರ ರೂಪಾಯಿ ನಿವೃತ್ತಿ ವೇತನ, ಒಂದು ವರ್ಷಗಳ ಕಾಲ ಅಂಗನವಾಡಿ ಸಹಾಯಕಿಯರಿಗೆ ಪ್ರತೀ ತಿಂಗಳು 2500 ರೂ. ನಂತಹ ಆಮಿಷವೊಡ್ಡಿ ಹಣ ವಸೂಲಿ ಮಾಡಲಾಗಿದೆ.

ಈ ಟ್ರಸ್ಟ್ ನ ಆಮಿಷಗಳನ್ನು ನಂಬಿ ರಾಜ್ಯಾದ್ಯಂತ ಹಣ ಪಾವತಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು, ಹಣ ಪಾವತಿಸಿದ ಬಳಿಕ ಯಾವುದೇ ಯೋಜನೆಯ ಹಣವನ್ನು ನೀಡದೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Read More
Next Story