No Rejection of Compassionate Job Citing Lack of Vacancy: High Court Order
x

ಕರ್ನಾಟಕ ಹೈಕೋರ್ಟ್‌ 

ಅಂಗನವಾಡಿ ಕಾರ್ಯಕರ್ತೆ ಹುದ್ದೆ ನಾಗರಿಕ ಹುದ್ದೆಗಳಲ್ಲ, ಮೀಸಲಾತಿ ಆದೇಶವಿಲ್ಲ: ಹೈಕೋರ್ಟ್

ರಾಜ್ಯದ ಈ ನೀತಿಯು ಅಂಚಿನಲ್ಲಿರುವ ಸಮುದಾಯಗಳಿಗೆ ಸಮಾನ ಅವಕಾಶವನ್ನು ನಿರಾಕರಿಸುತ್ತದೆ ಮತ್ತು ನಾಗರಿಕ ಸೇವೆಗಳಲ್ಲಿ ಅನುಸರಿಸಲಾಗುವ ಮೀಸಲಾತಿ ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ವಾದಿಸಿದ್ದರು.


ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ನಾಗರಿಕ ಸೇವಾ ಹುದ್ದೆಗಳಂತೆ ಮೀಸಲಾತಿ ನಿಯಮಗಳಿಗೆ ಒಳಪಡುವುದಿಲ್ಲ ಎಂಬ ರಾಜ್ಯ ಸರ್ಕಾರದ ನಿಲುವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಪರಿಶಿಷ್ಟ ಪಂಗಡದ (ಎಸ್‌ಟಿ) ಅರ್ಜಿದಾರರಾದ ವಿಜಯಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರು ಈ ಆದೇಶ ನೀಡಿದ್ದು, ಅರ್ಜಿಯನ್ನು ವಜಾ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

ಇಂಡಿ ತಾಲೂಕಿನ ಅಗರಖೇಡ್-5 ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿಜಯಲಕ್ಷ್ಮಿ ಅರ್ಜಿ ಸಲ್ಲಿಸಿದ್ದರು. 2024 ಅ.9 ರಂದು ಪ್ರಕಟವಾದ ನೇಮಕಾತಿ ಅಧಿಸೂಚನೆಯಲ್ಲಿ ಎಸ್‌ಟಿ ಮೀಸಲಾತಿ ಇಲ್ಲದಿರುವುದನ್ನು ಪ್ರಶ್ನಿಸಿದ್ದರು. ರಾಜ್ಯದ ಈ ನೀತಿಯು ಅಂಚಿನಲ್ಲಿರುವ ಸಮುದಾಯಗಳಿಗೆ ಸಮಾನ ಅವಕಾಶ ನಿರಾಕರಿಸುತ್ತದೆ. ನಾಗರಿಕ ಸೇವೆಗಳಲ್ಲಿ ಅನುಸರಿಸಲಾಗುವ ಮೀಸಲಾತಿ ಮಾನದಂಡಗಳಿಗೆ ಹೊಂದಿಕೆ ಆಗುವುದಿಲ್ಲ ಎಂದು ವಾದಿಸಿದ್ದರು.

ಹಿಂದಿನ ನೇಮಕಾತಿ ಸುತ್ತುಗಳಲ್ಲಿ ತಮ್ಮ ಪ್ರದೇಶದಿಂದ ಕೆಲವೇ ಎಸ್‌ಟಿ ಅಭ್ಯರ್ಥಿಗಳನ್ನು ನೇಮಿಸಲಾಗಿದೆ . ಗ್ರಾಮ ಮಟ್ಟದ ಶಿಶುಪಾಲನಾ ಕೇಂದ್ರಗಳಲ್ಲಿ ಸಮುದಾಯ-ನಿರ್ದಿಷ್ಟ ಕೋಟಾ ನಿರಾಕರಿಸುವುದು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದರು. ಅಧಿಸೂಚನೆ ರದ್ದುಗೊಳಿಸಿ, ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಮೀಸಲಾತಿ ನೀತಿ ಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರಿದ್ದರು.

ಈ ಮಧ್ಯೆ, ರಾಜ್ಯ ಸರ್ಕಾರವು ತನ್ನ ನೀತಿಯನ್ನು ಸಮರ್ಥಿಸಿಕೊಂಡಿತ್ತು. ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರಾಗಿ ನೇಮಕ ಮಾಡುವುದಿಲ್ಲ. ಬದಲಿಗೆ ಗೌರವ ಕಾರ್ಯಕರ್ತೆಯರನ್ನಾಗಿ ನೇಮಕ ಮಾಡಲಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಆರಂಭಿಕ ಶಿಕ್ಷಣ ಒದಗಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ಹುದ್ದೆಗಳಿಗೆ ಸ್ಥಳೀಯ ಸಮುದಾಯದಲ್ಲಿ ವಿಶ್ವಾಸ ಗಳಿಸಬಲ್ಲ ವ್ಯಕ್ತಿಗಳನ್ನು ನೇಮಿಸಲಾಗುತ್ತದೆ ಎಂದು ಸರ್ಕಾರ ವಾದಿಸಿತ್ತು.

ನ್ಯಾಯಮೂರ್ತಿ ಎಂ.ಐ.ಅರುಣ್ ಅವರು ರಾಜ್ಯ ಸರ್ಕಾರದ ವಾದ ಒಪ್ಪಿಕೊಂಡರು. ಅಂಗನವಾಡಿ ಕಾರ್ಯಕರ್ತರು ನಾಗರಿಕ ಹುದ್ದೆಗಳಲ್ಲ, ಸರ್ಕಾರಿ ಸೇವೆಗಳಿಗೆ ಸಮಾನವಾದ ನೇಮಕಾತಿ ಪ್ರಕ್ರಿಯೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ಅಂಗನವಾಡಿ ನೇಮಕಾತಿಗಳು ಗೌರವಾನ್ವಿತ ಸೇವೆಯಾಗಿರುವುದರಿಂದ, ಅವು ವಿಭಿನ್ನ ನಿಯಮಗಳು ಮತ್ತು ಆದ್ಯತೆಗಳನ್ನು ಅನುಸರಿಸುತ್ತವೆ. ಸಾಮಾಜಿಕ ಸೇರ್ಪಡೆ ಮುಖ್ಯವಾದರೂ, ಅಂತಹ ಹುದ್ದೆಗಳ ಸ್ವರೂಪವು ಔಪಚಾರಿಕ ಸರ್ಕಾರಿ ಉದ್ಯೋಗಗಳಿಗಿಂತ ಭಿನ್ನವಾದ ವಿಧಾನ ಸಮರ್ಥಿಸುತ್ತವೆ ಎಂದು ತೀರ್ಪು ನೀಡಿದರು.

Read More
Next Story