
ಮದ್ದೂರಮ್ಮ ಜಾತ್ರೆ ತೇರು ಬಿದ್ದ ಇಬ್ಬರು ಸಾವನ್ನಪ್ಪಿದ್ದಾರೆ
ಆನೇಕಲ್ ಜಾತ್ರೆ | ದೇವಿ ಉತ್ಸವದಲ್ಲಿ ಧರೆಗುರುಳಿದ ತೇರು: ಇಬ್ಬರು ಧಾರಣ ಸಾವು
ಬೆಂಗಳೂರಿನ ಬೆಳ್ಳಂದೂರು ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಹೊಸೂರಿನ ಲೋಹಿತ್ ಹಾಗೂ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಗೆ ಶನಿವಾರ ಅಮ್ಮನೊಂದಿಗೆ ಗೊಂಬೆ ಮಾರಲು ಬಂದಿದ್ದ ಬಾಲಕಿ ಉರುಳಿ ಬಿದ್ದ ತೇರಿನ ಅಡಿ ಸಿಲುಕಿ ಮೃತಪಟ್ಟಿದ್ದಾಳೆ.
ಆನೇಕಲ್ ಬಳಿಯ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯ ತೇರು ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.
ಬೆಳ್ಳಂದೂರು ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಹೊಸೂರಿನ ಲೋಹಿತ್ ಹಾಗೂ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಗೆ ಶನಿವಾರ ಅಮ್ಮನೊಂದಿಗೆ ಗೊಂಬೆ ಮಾರಲು ಬಂದಿದ್ದ ಬಾಲಕಿ ಉರುಳಿ ಬಿದ್ದ ತೇರಿನ ಅಡಿ ಸಿಲುಕಿ ಮೃತಪಟ್ಟಿದ್ದಾಳೆ.
ರೀಲ್ಸ್ ನೋಡಿ ಹುಸ್ಕೂರು ಜಾತ್ರೆಗೆ ಬಂದಿದ್ದ ಲೋಹಿತ್
ಬೆಳ್ಳಂದೂರು ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಹೊಸೂರಿನ ಲೋಹಿತ್ ಇನ್‌ಸ್ಟಾಗ್ರಾಂನಲ್ಲಿ ತೇರಿನ ರೀಲ್ಸ್ ನೋಡಿ ಹುಸ್ಕೂರು ಜಾತ್ರೆಗೆ ಬಂದಿದ್ದರು. 24 ವರ್ಷದ ಈ ಲೋಹಿತ್ ತಮಿಳುನಾಡಿನ ಹೊಸೂರು ಮೂಲದವರು. ಇತ್ತೀಚೆಗಷ್ಟೇ ಲೋಹಿತ್ ಎಂಜಿನಿಯರಿಂಗ್ ಮುಗಿಸಿದ್ದು, ವೈಟ್ ಫೀಲ್ಡ್‌ನ ಸಾಫ್ಟ್‌ವೇರ್ ಕಂಪನಿಯಲ್ಲಿ ಟ್ರೈನಿ ಆಗಿ ಕೆಲಸ ಮಾಡ್ತಿದ್ದ. ಆರು ತಿಂಗಳು ಕಳೆದಿದ್ದರೆ ಕೆಲಸ ಕನ್‌ಫರ್ಮ್ ಆಗುತಿತ್ತು. ಮನೆ ಮತ್ತು ತಂಗಿ ವಿದ್ಯಾಭ್ಯಾಸಕ್ಕೆ ಹಣ ನೀಡುತ್ತಿದ್ದ ಲೋಹಿತ್ ಕುಟುಂಬಕ್ಕೆ ಆಧಾರ ಸ್ತಂಬವಾಗಿದ್ದ. ಆದರೆ ಸಾವಿನ ಮನೆ ಸೇರಿದ್ದಾರೆ.
ಉಸಿರು ಚೆಲ್ಲಿದ ಗೊಂಬೆ ಬಾಲಕಿ
ಕೆಂಗೇರಿ ಸರ್ಕಾರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಜ್ಯೋತಿ (12) ಅಮ್ಮನೊಂದಿಗೆ ಗೊಂಬೆ ಮಾರಲು ಬಂದಿದ್ದು, ತೇರಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಶನಿವಾರ ಗಾಳಿ ಸಮೇತ ಮಳೆ ಶುರುವಾದಾಗ ಗಂಗಮ್ಮ ಗೊಂಬೆಗಳನ್ನು ಮತ್ತೊಂದು ಮಳಿಗೆಗೆ ಸ್ಥಳಾಂತರಿಸಲು ತೆರಳಿದ್ದರು. ಮಳಿಗೆಯಲ್ಲಿದ್ದ ಜ್ಯೋತಿ ಮೇಲೆ ತೇರು ಉರುಳಿ ಬಿದಿದ್ದೆ. ಗಂಭೀರವಾಗಿ ಗಾಯಗೊಂಡಿದ್ದ ಜ್ಯೋತಿಯನ್ನು ಆಸ್ಪತ್ರೆಗೆ ಕರೆದೊಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಮೃತ ಜ್ಯೋತಿ ಮತ್ತು ಟೆಕಿ ಲೋಹಿತ್ ಶವಗಳನ್ನು ಅತ್ತಿಬೆಲೆ ಸಮೀಪದ ಆಕ್ಸ್‌ಫರ್ಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ನೀಡಲಾಗಿದೆ.
ಬೆಂಗಳೂರಿನ ಆನೇಕಲ್‌ನ ಮದ್ದೂರಮ್ಮ ಜಾತ್ರೆ ಸಲುವಾಗಿ ಸುತ್ತಲ ಗ್ರಾಮಗಳಿಂದ 150 ಅಡಿಯ ತೇರುಗಳು ಆಗಮಿಸಿದ್ದು ಅವುಗಳನ್ನು ಜೋಡಿಸಲಾಗಿತ್ತು. ಗಗನಚುಂಬಿ ತೇರುಗಳನ್ನು ಹುಸ್ಕೂರಿನತ್ತ ಎಳೆದೊಯ್ಯುತ್ತಿದ್ದ ವೇಳೆ ಭಾರಿ ಗಾಳಿ ಬೀಸಿದ ಕಾರಣ ನಿಯಂತ್ರಣ ತಪ್ಪಿ ಎರಡು ತೇರುಗಳು ಮಗುಚಿಬಿದ್ದಿವೆ. ಈ ಪೈಕಿ ದೇವಾಲಯದ ಬಳಿಯ ರಾಯಸಂದ್ರದ ತೇರು ಜನರ ಮೇಲೆ ಉರುಳಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಲಕ್ಕಸಂದ್ರದ ರಾಕೇಶ್ ಹಾಗೂ ಒಬ್ಬ ಮಹಿಳೆ ಸೇರಿ 5 ಜನರಿಗೆ ಗಾಯಗಳಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾವಿರಾರು ವರ್ಷಗಳ ಇತಿಹಾಸ ಇರುವ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಗಗನಚುಂಬಿ ತೇರು ಉರುಳುವುದು ಹೊಸದಲ್ಲ. ಕಳೆದ ವರ್ಷ 2024ರಲ್ಲಿ ಹೀಲಲಿಗೆ ತೇರು, 2012ರಲ್ಲಿ ರಾಯಸಂದ್ರ ತೇರು, 2013ರಲ್ಲಿ ಕಗ್ಗಲಿಪುರ ತೇರು, 2018ರಲ್ಲಿ ನಾರಾಯಣಘಟ್ಟ ತೇರುಗಳು ವಿವಿಧ ಕಾರಣಗಳಿಂದಾಗಿ ನೆಲಕ್ಕೆ ಉರುಳಿದ್ದವು. ಆದರೆ ಯಾವುದೇ ಸಾವು ಸಂಭವಿಸಿರಲಿಲ್ಲ.