
ಆಂಧ್ರ ಪ್ರದೇಶ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್
ಧರ್ಮಸ್ಥಳಕ್ಕೆ ಸೆಪ್ಟೆಂಬರ್ 11ರಂದು ನಟ, ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಭೇಟಿ
ಆಂಧ್ರ ಪ್ರದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಅಪಪ್ರಚಾರವಾದಗ, ಧರ್ಮರಕ್ಷಣೆ ನಮ್ಮ ಗುರಿ ಎಂದಿದ್ದರು. ಜಗನ್ ಮೋಹನ್‌ರೆಡ್ಡಿ ಮುಖ್ಯಮಂತ್ರಿಯಾಗಿದ್ದ ವೇಳೆ ʼತಿರುಪತಿ ಲಡ್ಡುʼ ವಿವಾದದ ಸಂದರ್ಭದಲ್ಲಿ ಹಿಂದೂ ಧರ್ಮದ ರಕ್ಷಣೆಗೆ ಸದಾ ಸಿದ್ದ ಎಂದು ಘೋಷಿಸಿದ್ದರು.
ಇತ್ತೀಚೆಗೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳ ಕ್ಷೇತ್ರದ ಕುರಿತಾದ ಅಪಪ್ರಚಾರದ ಆರೋಪಗಳ ನಡುವೆಯೇ, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಖ್ಯಾತ ನಟ 'ಪವರ್ ಸ್ಟಾರ್' ಪವನ್ ಕಲ್ಯಾಣ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಮಂಜುನಾಥ ಸ್ವಾಮಿಯ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಮೂಲಕ ಹಿಂದೂ ಧರ್ಮ ಮತ್ತು ದೇವಾಲಯಗಳ ರಕ್ಷಣೆಯ ಬದ್ಧ ಎಂದು ಹೇಳಿದ್ದಾರೆ. .
ಗುರುವಾರ ಸಂಜೆ 5 ಗಂಟೆಗೆ ಪವನ್ ಕಲ್ಯಾಣ್ ಅವರು ಧರ್ಮಸ್ಥಳಕ್ಕೆ ಆಗಮಿಸಲಿದ್ದು, ವಿಶೇಷ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ನಂತರ, ದೇವಾಲಯದ ಮುಂಭಾಗದಲ್ಲಿ ವಿಶೇಷ ಆರತಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಈಗಾಗಲೇ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು 'ಧರ್ಮಸ್ಥಳ ಚಲೋ' ಮತ್ತು 'ಧರ್ಮಸ್ಥಳ ಸತ್ಯ ಯಾತ್ರೆ'ಯ ಮೂಲಕ ಕ್ಷೇತ್ರದ ಪರವಾಗಿ ನಿಂತಿವೆ. ಇದೀಗ ಪವನ್ ಕಲ್ಯಾಣ್ ಅವರ ಭೇಟಿಯು ಈ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ.
ತಿರುಪತಿ ಲಡ್ಡು ವಿವಾದ ವೇಳೆಯೂ ಹೋರಾಟ
ಹಿಂದೂ ಧರ್ಮ ಮತ್ತು ದೇವಾಲಯಗಳ ರಕ್ಷಣೆಯ ವಿಷಯದಲ್ಲಿ ಪವನ್ ಕಲ್ಯಾಣ್ ಅವರು ಮೊದಲಿನಿಂದಲೂ ತಮ್ಮ ಸ್ಪಷ್ಟ ನಿಲುವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಈ ಹಿಂದೆ, ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರದ ಅವಧಿಯಲ್ಲಿ 'ತಿರುಪತಿ ಲಡ್ಡು' ವಿವಾದ ಭುಗಿಲೆದ್ದಾಗ, ಪವನ್ ಕಲ್ಯಾಣ್ ಅವರು ಹೋರಾಟ ಮಾಡಿದ್ದರು. ತಿರುಮಲದ ಪಾವಿತ್ರ್ಯತೆ ಮತ್ತು ಸಂಪ್ರದಾಯಗಳನ್ನು ಉಳಿಸಲು ಹೋರಾಟ ನಡೆಸಿದ್ದ ಅವರು, "ಹಿಂದೂ ಧರ್ಮದ ರಕ್ಷಣೆಗೆ ನಾನು ಸದಾ ಸಿದ್ಧ" ಎಂದು ಘೋಷಿಸಿದ್ದರು.
11 ದಿನಗಳ ತಪಸ್ಸು ದೀಕ್ಷೆ
ತಿರುಪತಿ ತಿರುಮಲದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಪಶ್ಚಾತಾಪ ಪಡಲು ಗುಂಟೂರು ಜಿಲ್ಲೆಯ ನಂಬೂರಿನಲ್ಲಿರುವ ಶ್ರೀ ದಶಾವತರ ವೆಂಕಟೇಶ್ವರ ದೇವಾಲಯದಲ್ಲಿ11 ದಿನಗಳ "ಪ್ರಯಾಶ್ಚಿತ ದೀಕ್ಷೆ" ಯನ್ನು ಆರಂಭಿಸಿದ್ದರು. ಪವಿತ್ರವೆಂದು ಪರಿಗಣಿಸಲಾಗಿರುವ ತಿರುಪತಿ ಲಡ್ಡು ಪ್ರಸಾದವು ಹಿಂದಿನ ಸರ್ಕಾರದ ಅವಧಿಯಲ್ಲಿ ಅಪವಿತ್ರವಾಗಿತ್ತು. ಆರಂಭದಲ್ಲೇ ಇದನ್ನು ಪತ್ತೆ ಹಚ್ಚಲು ಸಾಧ್ಯವಾಗದಿರುವುದು ದೊಡ್ಡ ಕಳಂಕವಾಗಿದೆ ಎಂದು ತಿಳಿಸಿದ್ದರು.