Darshan Case | ನಟ ದರ್ಶನ್‌ ಬೆನ್ನುನೋವು ಶಸ್ತ್ರಚಿಕಿತ್ಸೆ: ವೈದ್ಯರು ನೀಡಿದ ಅಪ್‌ಡೇಟ್‌ ಏನು?
x
ನಟ ದರ್ಶನ್‌ಗೆ ಬೆನ್ನುನೋವು

Darshan Case | ನಟ ದರ್ಶನ್‌ ಬೆನ್ನುನೋವು ಶಸ್ತ್ರಚಿಕಿತ್ಸೆ: ವೈದ್ಯರು ನೀಡಿದ ಅಪ್‌ಡೇಟ್‌ ಏನು?

ಶಸ್ತ್ರಚಿಕಿತ್ಸೆಗಾಗಿ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ದರ್ಶನ್ ಆರೋಗ್ಯದ ಬಗ್ಗೆ ನಿಗಾ ವಹಿಸಿರುವ ವೈದ್ಯರು ಈಗ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದಿದ್ದಾರೆ.


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್‌ಗೆ ಶಸ್ತ್ರಚಿಕಿತ್ಸೆ ಅಗತ್ಯ ಕುರಿತ ವೈದ್ಯರ ವರದಿ ಆಧಾರದ ಮೇಲೆ ಹೈಕೋರ್ಟ್‌ ರೆಗ್ಯುಲರ್ ಜಾಮೀನು ನೀಡಿದೆ. ಆದರೆ, ಈಗ ದರ್ಶನ್ ಆರೋಗ್ಯದ ಬಗ್ಗೆ ವೈದ್ಯರು ಮಹತ್ವದ ಹೇಳಿಕೆ ನೀಡಿದ್ದಾರೆ.

ಶಸ್ತ್ರಚಿಕಿತ್ಸೆಗಾಗಿ ಜಾಮೀನು ಪಡೆದು ಹೊರಬಂದಿರುವ ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ದರ್ಶನ್ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದ ವೈದ್ಯರು ಈಗ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದಿದ್ದಾರೆ.

ದರ್ಶನ್‌ ಆರೋಗ್ಯ ಸ್ಥಿತಿ ಕುರಿತಂತೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಖ್ಯಾತ ಮೂಳೆತಜ್ಞ ಡಾ.ಅಜಯ್ ಹೆಗ್ಡೆ, ದರ್ಶನ್ ಗಂಭೀರವಾದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಈ ಮೊದಲು ಬೆನ್ನುಮೂಳೆಯ L5s ಮೊದಲ ಹಂತದಲ್ಲಿತ್ತು. ಈಗ ಅದು 2ನೇ ಹಂತಕ್ಕೆ ಜಾರಿದೆ. ಹೀಗಾಗಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ದರ್ಶನ್ ದೇಹದ ತೂಕ ಹೆಚ್ಚಾಗಿದೆ. ಇದರಿಂದ ಬೆನ್ನು ನೋವಿನ ಸಮಸ್ಯೆ ವಿಪರೀತವಾಗಿದೆ. ನಿತ್ಯ ಫಿಜಿಯೋ ಥೆರಪಿ ಮಾಡುತ್ತಿದ್ದು, ಮಾತ್ರೆ ನೀಡಲಾಗುತ್ತಿದೆ. L5s ತೊಂದರೆ ಜೊತೆಗೆ ನರದ ತೊಂದರೆ ಕೂಡ ದರ್ಶನ್‌ಗೆ ಇದೆ. ದರ್ಶನ್ ಅವರು ಸದ್ಯ ಮೈಸೂರು ಮೂಲದ ನರತಜ್ಞ ಡಾ.ನವೀನ್ ಅವರಿಂದ ಚಿಕಿತ್ಸೆ ಪಡೆಯುತ್ತಿದ್ದು, ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನುರಿತ ವೈದ್ಯರ ತಂಡ ದರ್ಶನ್‌ಗೆ ಫಿಜಿಯೋ ಥೆರಪಿ ಮಾಡುತ್ತಿದೆ ಎಂದು ಡಾ. ಅಜಯ್ ಹೆಗ್ಡೆ ತಿಳಿಸಿದ್ದಾರೆ.

ಚಿತ್ರೀಕರಣದಲ್ಲಿ ಭಾಗವಹಿಸುವಂತಿಲ್ಲ

ಸಂಕ್ರಾಂತಿ ಹಬ್ಬದ ವೇಳೆ ದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ. ಶಸ್ತ್ರಚಿಕಿತ್ಸೆ ನಂತರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಸುಮಾರು ಒಂದೂವರೆ ತಿಂಗಳ ಕಾಲ ಯಾವುದೇ ಚಿತ್ರೀಕರಣದಲ್ಲಿ ಭಾಗವಹಿಸುವಂತಿಲ್ಲ. ಸಾಹಸ ದೃಶ್ಯಗಳನ್ನು ಮಾಡಲೇಬಾರದು. ಫೆಬ್ರವರಿ ನಂತರ ಚಿತ್ರೀಕರಣದಲ್ಲಿ ಭಾಗವಹಿಸಬಹುದು ಎಂದು ವೈದ್ಯರು ಸೂಚಿಸಿದ್ದಾರೆ.

L5s ಸಮಸ್ಯೆ ಏನು?

L5-S ಬೆನ್ನುಮೂಳೆಯ ಚಲನೆಯ ಭಾಗವಾಗಿರುವ ಲುಂಬೊಸ್ಯಾಕ್ರಲ್ ಜಾಯಿಂಟ್‌ ಎಂದೂ ಕರೆಯಲಾಗುತ್ತದೆ. ಇದು ಸೊಂಟದ ಬೆನ್ನುಮೂಳೆಯ ಮತ್ತು ಕೆಳ ಭಾಗದ ಸ್ಯಾಕ್ರಲ್ ಬೆನ್ನುಮೂಳೆಯ ನಡುವಿನ ಪರಿವರ್ತನೆಯ ಪ್ರದೇಶ. ಈ ಬೆನ್ನುಮೂಳೆಯ ವಕ್ರತೆಯು ಸೊಂಟದ ಲಾರ್ಡೋಸಿಸ್ (ಫಾರ್ವರ್ಡ್ ಕರ್ವ್) ನಿಂದ ಸ್ಯಾಕ್ರಲ್ ಕೈಫೋಸಿಸ್ (ಹಿಂದಿನ ಕರ್ವ್) ಗೆ ಬದಲಾಗುತ್ತದೆ. L5-S ಬೆನ್ನುಮೂಳೆಯಿಂದ ಸೊಂಟ ಮತ್ತು ಕಾಲುಗಳಿಗೆ ಹೊರೆಯನ್ನು ವರ್ಗಾಯಿಸಲು ಸಹಾಯ ಮಾಡುತ್ತದೆ. ದರ್ಶನ್‌ಗೆ ಈ ಲುಂಬೊಸ್ಯಾಕ್ರಲ್‌ ಜಾಯಿಂಟ್‌ ನೋವು ಹೆಚ್ಚಿದ್ದು, ನರದ ಸಮಸ್ಯೆಯೂ ಕಾಡುತ್ತಿರುವುದರಿಂದ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದೆ.

Read More
Next Story