ಅರ್ಕಾವತಿ ರೀಡೂ | ಕೆಂಪಣ್ಣ ಆಯೋಗ ವರದಿ ಬಹಿರಂಗಕ್ಕೆ ಎಎಪಿ ಆಗ್ರಹ
x
ಆಮ್ ಆದ್ಮಿ ಪಕ್ಷ

ಅರ್ಕಾವತಿ ರೀಡೂ | ಕೆಂಪಣ್ಣ ಆಯೋಗ ವರದಿ ಬಹಿರಂಗಕ್ಕೆ ಎಎಪಿ ಆಗ್ರಹ

ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಡಿನೋಟಿಫಿಕೇಷನ್‌ನಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಒಟ್ಟು 880 ಎಕರೆ ರೀಡೂ ಮಾಡಲಾಗಿದೆ ಎಂದು ಎಎಪಿ ಹೇಳಿದೆ


Click the Play button to hear this message in audio format

'ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಕುರಿತು ತನಿಖೆ ನಡೆಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕು' ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಡಿನೋಟಿಫಿಕೇಷನ್‌ನಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಒಟ್ಟು 880 ಎಕರೆ ರೀಡೂ ಮಾಡಲಾಗಿದೆ. ಇದರ ಮೌಲ್ಯ ಅಂದಾಜು 8 ರೂ ಸಾವಿರ ಕೋಟಿ ಇದೆ ಎಂದು ಅವರು ಹೇಳಿದ್ದಾರೆ.

2014ರಲ್ಲಿ ಸಿದ್ದರಾಮಯ್ಯ ಅವರು ಕೆಂಪಣ್ಣ ಅವರನ್ನು ವಿಚಾರಣಾ ಆಯೋಗದ ನೇತೃತ್ವ ವಹಿಸಲು ನೇಮಿಸಿದ್ದರು. ಕೆಂಪಣ್ಣ ಅವರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಹಲವು ವರ್ಷಗಳೇ ಕಳೆದರೂ ಅದು ಇನ್ನೂ ಬಹಿರಂಗವಾಗಿಲ್ಲ ಎಂದು ಜಗದೀಶ್‌ ವಿ ಸದಂ ದೂರಿದ್ದಾರೆ.

Read More
Next Story