ಕನಕಪುರ | ಪುಟ್ಟ ಮಗುವಿಗೆ ಬರೆ ಹಾಕಿ, ಡೈಪರ್‌ಗೆ ಖಾರದಪುಡಿ ತುಂಬಿ ವಿಕೃತಿ
x

ಮಗು ಪ್ರಾತಿನಿಧಿಕ ಚಿತ್ರ

ಕನಕಪುರ | ಪುಟ್ಟ ಮಗುವಿಗೆ ಬರೆ ಹಾಕಿ, ಡೈಪರ್‌ಗೆ ಖಾರದಪುಡಿ ತುಂಬಿ ವಿಕೃತಿ

ಈ ಬಗ್ಗೆ ಚಂದ್ರಮ್ಮ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಕೃತ್ಯ ಎಸಗಿದ ಅಂಗನವಾಡಿ ಸಹಾಯಕಿ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿಗೆ ಪತ್ರ ಬರೆಯಲಾಗಿದೆ.


ಎರಡೂವರೆ ವರ್ಷದ ಪುಟ್ಟ ಮಗುವಿನ ಕೈಮೇಲೆ ಬರೆ ಹಾಕಿ, ಡೈಪರ್‌ಗೆ ಖಾರದ ಪುಡಿ ತುಂಬಿದ್ದಾರೆ ಎಂದು ಕನಕಪುರದ ಮಹಾರಾಜರಕಟ್ಟೆ ಅಂಗನವಾಡಿ ಸಹಾಯಕಿ ಚಂದ್ರಮ್ಮ ಎಂಬವರ ಮೇಲೆ ಆರೋಪ ಮಾಡಲಾಗಿದೆ. ಕನಕಪುರ ನಗರಸಭೆ ವ್ಯಾಪ್ತಿಯ ಮಹಾರಾಜರಕಟ್ಟೆ ಗ್ರಾಮದ ರಮೇಶ್ ನಾಯ್ಕ ಅವರ ಮಗ ದೀಕ್ಷಿತ್ (2.5) ಸಂತ್ರಸ್ತ ಬಾಲಕ.

ಮಂಗಳವಾರ ಅಂಗನವಾಡಿ ಮುಗಿದ ಮೇಲೆ ಮಗನನ್ನು ಕರೆ ತರಲು ದೀಕ್ಷಿತ್ ತಾಯಿ ಚೈತ್ರಬಾಯಿ ಅಂಗನವಾಡಿ ಬಳಿ ಹೋದಾಗ ಮಗು ಅಳುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ, ಕೈ ಮೇಲೆ ಬರೆ ಹಾಕಿರುವುದು ಹಾಗೂ ಡೈಪರ್‌ಗೆ ಖಾರದಪುಡಿ ತುಂಬಿರುವುದು ಕಂಡು ಬಂದಿದೆ ಎಂದು ದೂರಲಾಗಿದೆ.

ಈ ಬಗ್ಗೆ ಚಂದ್ರಮ್ಮ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಕೃತ್ಯ ಎಸಗಿದ ಅಂಗನವಾಡಿ ಸಹಾಯಕಿ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಸಿಡಿಪಿಒ ವಿ.ನಾರಾಯಣ್ ತಿಳಿಸಿದ್ದಾರೆ.

Read More
Next Story