ಅತ್ಯಾಚಾರ ಯತ್ನಕ್ಕೊಳಗಾಗಿದ್ದ ಸಂತ್ರಸ್ತೆ ವಿರುದ್ಧವೇ ಪ್ರಕರಣ ದಾಖಲು
x

ಅತ್ಯಾಚಾರ ಯತ್ನಕ್ಕೊಳಗಾಗಿದ್ದ ಸಂತ್ರಸ್ತೆ ವಿರುದ್ಧವೇ ಪ್ರಕರಣ ದಾಖಲು


ಬೆಂಗಳೂರಿನ ಎಚ್ಎಸ್‌ಆರ್‌ ಲೇಔಟ್‌ನಲ್ಲಿ ಭಾನುವಾರ ನಡೆದ ಯುವತಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಇದೀಗ ಸ್ವತಃ ಸಂತ್ರಸ್ತೆ ವಿರುದ್ಧವೇ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಯ ದಿನ ಆಟೋವೊಂದಕ್ಕೆ ಅಪಘಾತವೆಸಗಿದ್ದ ಆರೋಪದಡಿ ಅದರ ಚಾಲಕ ಅಜಾಜ್ ಎಂಬುವರು ನೀಡಿರುವ ದೂರಿನನ್ವಯ ಆಡುಗೋಡಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಗಸ್ಟ್ 17ರಂದು ರಾತ್ರಿ ಯುವತಿ ಕೊರಮಂಗಲಕ್ಕೆ ಗೆಳೆಯನ ಜೊತೆ ಕಾರಿನಲ್ಲಿ ಹೋಗಿದ್ದಳು. ಪಾರ್ಟಿ ಮುಗಿಸಿಕೊಂಡು ವಾಪಸ್ ಬರುವಾಗ ಯುವತಿ ಗೆಳೆಯನ ಬದಲಾಗಿ ತಾನೇ ಕಾರನ್ನು ಚಲಾಯಿಸುತ್ತಿದ್ದಳು. ಈ ವೇಳೆ ಕೋರಮಂಗಲದ ಮಂಗಳ ಜಂಕ್ಷನ್ ಬಳಿ ಆಟೋಗಳಿಗೆ ಕಾರು ಡಿಕ್ಕಿಯಾಗಿತ್ತು. ಯುವತಿ ಚಲಾಯಿಸುತ್ತಿದ್ದ ಕಾರು ಎರಡು ಆಟೋ ಹಾಗೂ ಒಂದು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಹೀಗೆ ಸರಣಿ ಅಪಘಾತ ಬಳಿಕವೂ ಕಾರನ್ನು ನಿಲ್ಲಿಸದೆ ಆಕೆ ಮುಂದೆ ಹೋಗಿದ್ದಳು. ಹೀಗಾಗಿ ಕೋಪಗೊಂಡ ವಾಹನಗಳ ಚಾಲಕರು ಆಕೆಯನ್ನು ಹಿಂಬಾಲಿಸಿದ್ದರು. ಕೆಲ ಆಟೋ ಚಾಲಕರು ಕಾರಿಗೆ ಅಡ್ಡಹಾಕಿ ಆಕೆಯನ್ನು ಪ್ರಶ್ನಿಸಿದ್ದರು. ಆಗ ಕಾರಿನಿಂದ ಇಳಿದ ಯುವತಿ ಕಾರನ್ನು ಅಲ್ಲೇ ಬಿಟ್ಟು ತೆರಳಿದ್ದಳು. ಕಾರಿನಲ್ಲಿದ್ದ ಯುವಕ ಚಾಲಕರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ನಿಭಾಯಿಸಿ, ಬಳಿಕ ಆಕೆಗಾಗಿ ಹುಡುಕಾಟ ನಡೆಸಿದ್ದ. ಬಳಿಕ ಆಕೆ ಯಾರಿಂದಲೋ ಡ್ರಾಪ್ ಕೇಳಿತ್ತಿದ್ದನ್ನು ಕಂಡು ಯುವಕ ಆಕೆಯ ಬಳಿ ಬಂದು ಆಕೆಯನ್ನು ಅಪ್ಪಿಕೊಂಡು ಸಮಾಧಾನ ಮಾಡಿದ್ದ. ಈ ವೇಳೆ ಪರಿಸ್ಥಿತಿ ನಿಭಾಯಿಸಿರುವುದಾಗಿಯೂ ಗೆಳೆಯ ಆಕೆಗೆ ಹೇಳಿದ್ದ. ಆದರೂ ಯುವತಿ ಬೇರೆಯವರಿಂದ ಡ್ರಾಪ್ ತೆಗೆದುಕೊಂಡು ಅಲ್ಲಿಂದ ಹೊರಟು ಹೋಗಿದ್ದಳು.

ಆಕೆ ರಾತ್ರಿ ವೇಳೆ ಡ್ರಾಪ್‌ ಕೇಳಿ ಯುವತಿ, ಅಪರಿಚಿತನೊಂದಿಗೆ ತೆರಳಿದ ಬಳಿಕ ಆಕೆಯ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂದು ತಿಳಿದು ಬಂದಿದೆ. ಬಳಿಕ ಆಕೆ ಸ್ನೇಹಿತರ ಸಹಾಯ ಪಡೆದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಮೇಲೆ ಅತ್ಯಾಚಾರ ಪ್ರಯತ್ನ ನಡೆಸಿದವರ ಶೋಧಕಾರ್ಯ ಮುಮದುವರೆದಿದೆ.

ಸದ್ಯ ಘಟನೆಯ ದಿನ ಅಜಾಗರೂಕತೆಯಿಂದ ಕಾರು ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದ್ದ ಯುವತಿ ಹಾಗೂ ಆಕೆಯ ಗೆಳೆಯನ ವಿರುದ್ಧ ಆಡುಗೋಡಿ ಸಂಚಾರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಹೀಗಾಗಿ ಸಂತ್ರಸ್ತೆಗೆ ಹೊಸ ಸಂಕಷ್ಟ ಎದುರಾಗಿದೆ.

Read More
Next Story