ಚಪ್ಪಲಿ ಧರಿಸಿದ್ದಕ್ಕೆ ಏಥರ್‌ ಸಂಸ್ಥಾಪಕನಿಗೆ ಪ್ರವೇಶ ನೀಡದ ಬೆಂಗಳೂರು ರೆಸ್ಟೋರೆಂಟ್
x
ಗಣೇಶ್ ಸೋನಾವಾನೆ ಮತ್ತು ಸ್ವಪ್ರಿಲ್ ಜೈನ್

ಚಪ್ಪಲಿ ಧರಿಸಿದ್ದಕ್ಕೆ ಏಥರ್‌ ಸಂಸ್ಥಾಪಕನಿಗೆ ಪ್ರವೇಶ ನೀಡದ ಬೆಂಗಳೂರು ರೆಸ್ಟೋರೆಂಟ್

ಮಂಗಳವಾರ ಪಂಚೆ ಧರಿಸಿ ಬಂದ ವೃದ್ಧನನ್ನು ಜಿಟಿ-ಮಾಲ್‌ಗೆ ಪ್ರವೇಶ ನಿರಾಕರಿಸಿದ ಘಟನೆ ಬೆನ್ನಲ್ಲೇ ಗಣೇಶ್ ಸೋನಾವಾನೆ ತಮಗೆ ಆದ ಅನುಭವವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


Click the Play button to hear this message in audio format

ಚಪ್ಪಲಿ ಧರಿಸಿದ್ದಕ್ಕಾಗಿ ನನಗೆ ಹಾಗೂ ಏಥರ್ ಸಹ ಸಂಸ್ಥಾಪಕ ಸ್ವಪ್ರಿಲ್ ಜೈನ್ ಅವರಿಗೆ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಪ್ರವೇಶ ನಿರಾಕರಿಸಲಾಗಿತ್ತು ಎಂದು ಪ್ರಿಡೋ ಸಂಸ್ಥಾಪಕ ಹಾಗೂ ಸಿಇಒ ಗಣೇಶ್ ಸೋನಾವಾನೆ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.

ಮಂಗಳವಾರ ಪಂಚೆ ಧರಿಸಿ ಬಂದ ವೃದ್ಧನನ್ನು ಜಿ-ಮಾಲ್‌ಗೆ ಪ್ರವೇಶ ನಿರಾಕರಿಸಿದ ಘಟನೆ ಬೆನ್ನಲ್ಲೇ ಗಣೇಶ್ ಸೋನಾವಾನೆ ತಮಗೆ ಆದ ಅನುಭವವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚಪ್ಪಲಿ ಧರಿಸಿದ್ದಕ್ಕಾಗಿ ನನಗೆ ಹಾಗೂ ಏಥರ್ ಸಹ ಸಂಸ್ಥಾಪಕ ಸ್ವಪ್ರಿಲ್ ಜೈನ್ ಅವರಿಗೆ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಪ್ರವೇಶ ನಿರಾಕರಿಸಲಾಗಿತ್ತು ಎಂದು ಬರೆದುಕೊಂಡಿದ್ದಾರೆ. ಆದರೆ ರೆಸ್ಟೋರೆಂಟ್ ಹೆಸರು, ಸ್ಥಳ ಹಾಗೂ ಯಾವಾಗ ಘಟನೆ ನಡೆದಿತ್ತು ಎನ್ನುವುದರ ಬಗ್ಗೆ ಅವರು ಉಲ್ಲೇಖಿಸಿಲ್ಲ.

'ನಾನು ಅದನ್ನು ಗೌರವಿಸಿ ಬೇರೊಂದು ರೆಸ್ಟೋರೆಂಟ್‌ಗೆ ತೆರಳಿದೆವು. ಇದನ್ನು ನಾನು ತಾರತಮ್ಯ ಎಂದು ಕರೆಯುತ್ತಿಲ್ಲ, ಘಟನೆಯನ್ನು ಹಂಚಿಕೊಂಡೆ ಅಷ್ಟೇ' ಎಂದು ಇನ್ನೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅದೊಂದು ಮೂರ್ಖತನದ ನಿರ್ಧಾರ ಎಂದು ಅವತ್ತು ಅನಿಸಿತ್ತು ಎಂದು ಅವರು ಹೇಳಿದ್ದಾರೆ.

ಉತ್ತರ ಕರ್ನಾಟಕದ ೭೦ರ ರೈತ ಫಕೀರಪ್ಪ ಎಂಬ ರೈತ ಮಂಗಳವಾರ ಸಂಜೆ ಬೆಂಗಳೂರಿನ ಜಿಟಿ ಮಾಲ್‌ಗೆ ಸಾಂಪ್ರದಾಯಿಕ ಧೋತಿ ಮತ್ತು ಬಿಳಿ ಅಂಗಿ ಧರಿಸಿ ತಮ್ಮ ಮಗ ನಾಗರಾಜ್ ಜೊತೆಯಲ್ಲಿ ಸಿನಿಮಾ ನೋಡಲು ಹೋದ ವೇಳೆ ಮಾಲ್‌ನ ಸಿಬ್ಬಂದಿ ಪಂಚೆ ಧರಿಸಿ ಬಂದ ಕಾರಣಕ್ಕೆ ಅವರಿಗೆ ಪ್ರವೇಶ ನಿರಾಕರಿಸಿದ್ದಾರೆ. ಪ್ರವೇಶ ನೀಡುವುದಿಲ್ಲ' ಎಂದು ಭದ್ರತಾ ಸಿಬ್ಬಂದಿ ಹೇಳಿದ್ದರು ಎನ್ನಲಾಗಿದೆ. ಮಾಲ್ ಎದುರೇ ನಿಂತು ನಾಗರಾಜ್ ಅವರು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆಯೇ ಆಕ್ರೋಶ ಹೆಚ್ಚಾಗಿತ್ತು. ಇದಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮಾಲ್ ಕ್ಷಮೆಯನ್ನೂ ಯಾಚಿಸಿತ್ತು.

Read More
Next Story