Operation Sindoor | ಯುದ್ಧದ ಕಾರ್ಮೋಡ ;ಭಾರತದ 32 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ
x

ವಿಮಾನ ನಿಲ್ದಾಣ 

Operation Sindoor | ಯುದ್ಧದ ಕಾರ್ಮೋಡ ;ಭಾರತದ 32 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ

ಶ್ರೀನಗರ, ಅಮೃತಸರ ಸೇರಿ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ 32 ವಿಮಾನ ನಿಲ್ದಾಣಗಳಲ್ಲಿ ಮೇ 15 ರವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿ ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ತಿಳಿಸಿದೆ.


ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ದೇಶದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿರುವ 32 ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಳಿಸಿ ಭಾರತದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಆದೇಶಿಸಿದೆ.

ಶ್ರೀನಗರ ಮತ್ತು ಅಮೃತಸರ ವಿಮಾನ ನಿಲ್ದಾಣ ಸೇರಿ 32 ನಿಲ್ದಾಣಗಳಲ್ಲಿ ಮೇ 15 ರವರೆಗೆ ವಿಮಾನಗಳ ಕಾರ್ಯಾಚರಣೆ ಸ್ಥಗಿತ ಗೊಳಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ತಿಳಿಸಿದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಮತ್ತು ಸಂಬಂಧಿತ ವಾಯುಯಾನ ಸಂಸ್ಥೆಗಳ ಅಧಿಕಾರಿಗಳು, ವಾಯುಪಡೆ ಸಿಬ್ಬಂದಿಗೆ (ನೋಟಾಮ್‌ಗಳು) ಸರಣಿ ನೋಟಿಸ್‌ ನೀಡಿದ್ದು, ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ 32 ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ನಾಗರಿಕ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸುವುದಾಗಿ ಘೋಷಿಸಿದೆ.

ಕಾರ್ಯಾಚರಣೆ ಕಾರಣಗಳಿಂದಾಗಿ "ಮೇ 9 ರಿಂದ ಮೇ 14 ರವರೆಗೆ ವಿಮಾನಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಅಧಂಪುರ್, ಅಂಬಾಲ, ಅಮೃತಸರ, ಅವಂತಿಪುರ, ಬಟಿಂಡಾ, ಭುಜ್, ಬಿಕಾನೇರ್, ಚಂಡೀಗಢ, ಹಲ್ವಾರಾ, ಹಿಂದನ್ ಮತ್ತು ಜಮ್ಮು, ಜೈಸಲ್ಮೇರ್, ಜಾಮ್‌ನಗರ್, ಜೋಧ್‌ಪುರ, ಕಾಂಡ್ಲಾ, ಕಂಗ್ರಾ (ಗಗ್ಗಲ್), ಕೆಶೋದ್, ಕಿಶನ್‌ಗಢ್, ಕುಲು ಮನಾಲಿ (ಭುಂಟರ್) ಮತ್ತು ಲೇಹ್ ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.

ಲೂಧಿಯಾನ, ಮುಂದ್ರಾ, ನಲಿಯಾ, ಪಠಾಣ್‌ಕೋಟ್, ಪಟಿಯಾಲ, ಪೋರಬಂದರ್, ರಾಜ್‌ಕೋಟ್ (ಹಿರಾಸರ್), ಸರ್ಸಾವಾ, ಶಿಮ್ಲಾ, ಶ್ರೀನಗರ, ಥೋಯಿಸ್ ಮತ್ತು ಉತ್ತರಲೈ ಅನ್ನು ಸಹ ಮುಚ್ಚಲಾಗಿದೆ.

Read More
Next Story