ಕೃಷಿ ಹೊಂಡದಲ್ಲಿ ಸ್ಫೋಟ | ಡ್ರೋನ್ ಪ್ರತಾಪ್ ಗೆ 10 ದಿನ ನ್ಯಾಯಾಂಗ ಬಂಧನ
x
ಡ್ರೋನ್‌ ಪ್ರತಾಪ್‌ಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕೃಷಿ ಹೊಂಡದಲ್ಲಿ ಸ್ಫೋಟ | ಡ್ರೋನ್ ಪ್ರತಾಪ್ ಗೆ 10 ದಿನ ನ್ಯಾಯಾಂಗ ಬಂಧನ

ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಡ್ರೋನ್ ಪ್ರತಾಪ್‌ಗೆ 26-12-24 ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.


Click the Play button to hear this message in audio format

ಕನ್ನಡದ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್‌ಗೆ ಮಧುಗಿರಿಯ ಜೆಎಂಎಫ್‌ಸಿ ಕೋರ್ಟ್‌ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ನೀಡಿದೆ.

ತಮ್ಮ ಯೂಟ್ಯೂವ್ ಚಾನೆಲ್‌ಗಾಗಿ ಪ್ರತಾಪ್‌, ಕೃಷಿ ಹೊಂಡದಲ್ಲಿ ನೀರಿಗೆ ಸೋಡಿಯಂ ಸ್ಫೋಟ ಮಾಡಿದ್ದರು. ಈ ರಾಸಾಯನಿಕ ದೊಡ್ಡ ಮಟ್ಟದಲ್ಲಿ ಸ್ಫೋಟಿಸಿ ಬೆಂಕಿ ಕೂಡ ಚಿಮ್ಮಿತ್ತು. ಈ ವಿಡಿಯೋವನ್ನು ಡ್ರೋನ್‌ ಪ್ರತಾಪ್‌ ಯುಟ್ಯೂಬ್‌ ನಲ್ಲಿ ಅಪ್ಲೋಡ್‌ ಮಾಡಿದ್ದರು. ಈ ವಿಡಿಯೋಗೆ ಸಾರ್ವಜನಿಕರಿಗೆ ಟೀಕೆ ವ್ಯಕ್ತವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್ 12ರಂದು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್‌ರನ್ನು ಬಂಧಿಸಿದ್ದರು. ಬಿಎನ್‌ಎಸ್‌ ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಪೊಲೀಸ್ ಕಸ್ಟಡಿಯಲ್ಲಿ ಮೂರು ದಿನ ಕಳೆದ ಪ್ರತಾಪ್‌ರನ್ನು ಸೋಮವಾರ(ಡಿ.16 ರಂದು) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ವಾದ ಆಲಿಸಿದ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಡ್ರೋನ್ ಪ್ರತಾಪ್‌ಗೆ 26-12-24 ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ವರದಿ ಕೇಳಿದ ಮುಖ್ಯಮಂತ್ರಿ ಕಚೇರಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಮುಖ್ಯಮಂತ್ರಿಗಳ ಕಚೇರಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಧುಗಿರಿ ಸಿಪಿಐ ಕಚೇರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತೆರಳಿ ಮಾಹಿತಿ ಪಡೆದುಕೊಂಡರು. ಬಳಿಕ, ಅಧಿಕಾರಿಗಳು ಸೋಡಿಯಂ ಸ್ಫೋಟಗೊಂಡ ಜನಕಲೋಟಿ ಬಳಿಯ ಕೃಷಿಹೊಂಡಕ್ಕೆ ತೆರಳಿ ನೀರು ಮತ್ತು ಸ್ಥಳದಲ್ಲಿದ್ದ ಕೆಮಿಕಲ್ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಿದ್ದಾರೆ.

Read More
Next Story