ಎಸ್.ಎಲ್. ಭೈರಪ್ಪ ಕುರಿತು ವಾರ್ತಾ ಇಲಾಖೆ ನಿರ್ಮಿಸಿತ್ತು ಸಾಕ್ಷ್ಯಚಿತ್ರ: ವಿಡಿಯೊ ಇಲ್ಲಿ ವೀಕ್ಷಿಸಿ...
ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯು 2010ರಲ್ಲಿ ಎಸ್.ಎಲ್. ಭೈರಪ್ಪ ಕುರಿತಾದ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿತ್ತು.
ಖ್ಯಾತ ಕಾದಂಬರಿಗಾರ ಡಾ.ಎಸ್.ಎಲ್.ಭೈರಪ್ಪ ಅವರ ಕುರಿತಂತೆ 2010 ರಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿತ್ತು. ಈ ಸಾಕ್ಷ್ಯ ಚಿತ್ರವನ್ನು ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅವರು ನಿರ್ದೇಶಿಸಿದ್ದರು. ಸಾಕ್ಷ್ಯಚಿತ್ರದಲ್ಲಿ ಭೈರಪ್ಪ ಅವರು ತಮ್ಮ ಬಾಲ್ಯ, ಕಷ್ಟಗಳ ಪಯಣ, ಮೈಸೂರು-ಬೆಂಗಳೂರು- ಮುಂಬೈ ನಡುವಿನ ಅಲೆದಾಟ, ಶಿಕ್ಷಣ ಮುಂದುವರಿಸಿದ ಪರಿ, ನೆರವಾದವರು ಹಾಗೂ ಕವಿಯಾಗಿ ರೂಪುಗೊಂಡ ಬಗ್ಗೆ ಎಳೆ ಎಳೆಯಾಗಿ ಅನುಭವ ಬಿಡಿಸಿಟ್ಟಿದ್ದಾರೆ.
ಬುಧವಾರ (ಸೆ.24) ಎಸ್.ಎಲ್ ಭೈರಪ್ಪ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಸ್ಮರಣಾರ್ಥ ವಾರ್ತಾ ಇಲಾಖೆಯ ಕಿರುಚಿತ್ರದ ಮೆಲುಕು ಇಲ್ಲಿದೆ.
Next Story