
ಸಾಂದರ್ಭಿಕ ಚಿತ್ರ
ಆರ್‌ಆರ್‌ಬಿ ಅಪ್ರೆಂಟಿಸ್‌ಶಿಪ್| 10th, ಐಟಿಐ ಪಾಸಾದವರಿಗೆ ಹಲವು ಹುದ್ದೆಗಳ ತರಬೇತಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ. 50 ಅಂಕಗಳೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. NCVT ಯಿಂದ ಐಟಿಐ ಪ್ರಮಾಣಪತ್ರವನ್ನು ಹೊಂದಿದ್ದರೆ, ತರಬೇತಿ ಪಡೆಯಲು ಮತ್ತು ವೃತ್ತಿಜೀವನವನ್ನು ನಿರ್ಮಿಸಲು ಇದು ಅದ್ಭುತ ಅವಕಾಶವಿದೆ.
ಭಾರತೀಯ ರೈಲ್ವೆ ಇಲಾಖೆಯು ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐ ಪಾಸ್ ಆದ ಯುವಕರಿಗೆ ಸಿಹಿ ಸುದ್ದಿ ನೀಡಿದೆ. ಪಶ್ಚಿಮ ರೈಲ್ವೆ ವಿಭಾಗದಲ್ಲಿ 5,349 ಅಪ್ರೆಂಟಿಸ್‌ಶಿಪ್ ತರಬೇತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮಾ.23 ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ. 50 ಅಂಕಗಳೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. NCVT ಯಿಂದ ಐಟಿಐ ಪ್ರಮಾಣಪತ್ರವನ್ನು ಹೊಂದಿದ್ದರೆ, ಭಾರತೀಯ ರೈಲ್ವೆಯಲ್ಲಿ ತರಬೇತಿ ಪಡೆಯಲು ಮತ್ತು ವೃತ್ತಿಜೀವನವನ್ನು ನಿರ್ಮಿಸಲು ಇದು ಅದ್ಭುತ ಅವಕಾಶವಿದೆ.
ಪಶ್ಚಿಮ ರೈಲ್ವೆಯಲ್ಲಿ ಖಾಲಿ ಇರುವ 5,349 ಅಪ್ರೆಂಟಿಸ್‌ಶಿಪ್‌ಗಳಿಗೆ ಒಂದು ವರ್ಷ ಅವಧಿಯ ತರಬೇತಿ ನೀಡಲಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 15 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 24 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗ ಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ವಿನಾಯಿತಿ ನೀಡಲಾಗಿದೆ.
ಆಯ್ಕೆ ವಿಧಾನ
ಈ ನೇಮಕಾತಿಯ ವಿಶೇಷವೆಂದರೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು 10ನೇ ತರಗತಿ ಮತ್ತು ಐಟಿಐನಲ್ಲಿ ಪಡೆದ ಅಂಕಗಳ ಸರಾಸರಿ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಗಳು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಪ್ರಮುಖ ಪ್ರಯೋಜನಗಳು
ತರಬೇತಿ ಅವಧಿಯಲ್ಲಿ ರೈಲ್ವೆ ಮಂಡಳಿಯ ನಿಯಮದಂತೆ ಮಾಸಿಕ 9 ಸಾವಿರ ರೂ. ಸ್ಟೈಫಂಡ್ ನೀಡಲಾಗುತ್ತದೆ. ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿದವರಿಗೆ ಭವಿಷ್ಯದ ರೈಲ್ವೆ ನೇಮಕಾತಿಗಳಲ್ಲಿ (Level-1 ಹುದ್ದೆಗಳು) ಶೇ. 20 ಮೀಸಲಾತಿ ಸೌಲಭ್ಯ ದೊರೆಯಲಿದೆ.
ಅರ್ಜಿ ಸಲ್ಲಿಸುವುದು ಹೇಗೆ ?
* ಅಧಿಕೃತ RRC-WR ವೆಬ್‌ಸೈಟ್‌ಗೆ ಭೇಟಿ ನೀಡಿ ಅಪ್ರೆಂಟಿಸ್ ಅಧಿಸೂಚನೆ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
* ನಿಮ್ಮ ಆಧಾರ್ ಸಂಖ್ಯೆ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿ.
* ನಿಮ್ಮ ವೈಯಕ್ತಿಕ ವಿವರಗಳು, ಅಂಕಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಆದ್ಯತೆಯ ವಿಭಾಗ ಅಥವಾ ಕಾರ್ಯಾಗಾರವನ್ನು ಆಯ್ಕೆಮಾಡಿ.
* ನಿಮ್ಮ ಭಾವಚಿತ್ರ, ಸಹಿ ಮತ್ತು ಅಗತ್ಯವಿರುವ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಿ.
* ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
* ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್‌ಔಟ್ ಡೌನ್‌ಲೋಡ್ ಮಾಡಿ ದಾಖಲೆ ಪರಿಶೀಲನೆಗಾಗಿ ಅದನ್ನು ಸುರಕ್ಷಿತವಾಗಿಟ್ಟುಕೊಳ್ಳಿ.
* ನೀವು ಒಂದು ವಿಭಾಗ ಅಥವಾ ಕಾರ್ಯಾಗಾರವನ್ನು ಮಾತ್ರ ಆಯ್ಕೆ ಮಾಡಬಹುದಾಗಿದ್ದು, ಬದಲಾಯಿಸಲು ಅವಕಾಶ ಇಲ್ಲ ಎಂದು ಆರ್‌ಆರ್‌ಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

