Job News | Have you passed 10th class? There are 827 vacancies in the Armed Border Force.
x

ಸಶಸ್ತ್ರ ಸೀಮಾ ಬಲದ ಸೈನಿಕರು 

Job News | 10ನೇ ತರಗತಿ ಪಾಸ್‌ ಆಗಿದ್ದೀರಾ? ಸಶಸ್ತ್ರ ಸೀಮಾ ಪಡೆಯಲ್ಲಿವೆ 827 ಹುದ್ದೆಗಳು

ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ನಿಯಮದಂತೆ ಹಂತ 3 ಅಡಿಯಲ್ಲಿ 69,100 ರೂ. ವರೆಗೆ ವೇತನ ಸಿಗಲಿದೆ. ಇದರ ಜತೆಗೆ ತುಟ್ಟಿಭತ್ಯೆ , ಮನೆ ಬಾಡಿಗೆ ಭತ್ಯೆ, ಉಚಿತ ವೈದ್ಯಕೀಯ ಸೌಲಭ್ಯ ಸೇರಿದಂತೆ ಇತರೆ ಭತ್ಯೆಗಳು ಲಭ್ಯವಿರುತ್ತವೆ.


Click the Play button to hear this message in audio format

ಕೇಂದ್ರ ಅರೆಸೈನಿಕ ಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಯುವಕರಿಗೆ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಸಶಸ್ತ್ರ ಸೀಮಾ ಬಲ (SSB) ಭರ್ಜರಿ ಅವಕಾಶ ನೀಡಿದೆ. 11 ವಿವಿಧ ಟ್ರೇಡ್‌ಗಳಲ್ಲಿ ಖಾಲಿ ಇರುವ ಒಟ್ಟು 827 ಕಾನ್ಸ್‌ಟೇಬಲ್ (ಟ್ರೇಡ್ಸ್‌ಮನ್) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಮಾರ್ಚ್‌ 21 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತದ ಗಡಿಗಳನ್ನು ಕಾಪಾಡುವ ಈ ಪ್ರತಿಷ್ಠಿತ ಪಡೆಯಲ್ಲಿ ಚಾಲಕ, ಪಶುವೈದ್ಯಕೀಯ, ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಹುದ್ದೆಗಳಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಗೃಹ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ ಯಾವ ಟ್ರೇಡ್‌ಗಳಲ್ಲಿ ಎಷ್ಟು ಹುದ್ದೆ ?

ಸಶಸ್ತ್ರ ಸೀಮಾ ಬಲದಲ್ಲಿ ಒಟ್ಟು 827 ಹುದ್ದೆಗಳಿದ್ದು, ಕಾನ್ಸ್‌ಟೇಬಲ್ ಚಾಲಕ 553, ವಾಷರ್‌ಮನ್ 74, ಕ್ಷೌರಿಕ 43, ದರ್ಜಿ 41, ತೋಟಗಾರ 41, ಪಶುವೈದ್ಯಕೀಯ 34, ಚಮ್ಮಾರ 25, ಕಾರ್ಪೆಂಟರ್ 7, ವಾಟರ್ ಕ್ಯಾರಿಯರ್ 5, ವೇಟರ್ 3 ಹಾಗೂ ನರ್ಸಿಂಗ್ ಆರ್ಡರ್ಲಿಯಲ್ಲಿ 1 ಹುದ್ದೆಗಳನ್ನು ನಿಗದಿಪಡಿಸಿದೆ.

ವೇತನ ಶ್ರೇಣಿ ಎಷ್ಟು?

ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ನಿಯಮದಂತೆ ಹಂತ 3 ಅಡಿಯಲ್ಲಿ 21,700 ರೂ. ನಿಂದ 69,100 ರೂ. ವರೆಗೆ ವೇತನ ಸಿಗಲಿದೆ. ಇದರ ಜೊತೆಗೆ ತುಟ್ಟಿಭತ್ಯೆ , ಮನೆ ಬಾಡಿಗೆ ಭತ್ಯೆ, ಉಚಿತ ವೈದ್ಯಕೀಯ ಸೌಲಭ್ಯ ಸೇರಿದಂತೆ ಇತರೆ ಭತ್ಯೆಗಳು ಲಭ್ಯವಿರುತ್ತವೆ. ಆರಂಭಿಕವಾಗಿ ಮಾಸಿಕ ಸುಮಾರು 30,000 ರೂ. ನಿಂದ 40,000 ರೂ. ವರೆಗೂ ಅಭ್ಯರ್ಥಿಗಳ ಕೈಗೆ ಸಿಗಲಿದೆ.

ಅರ್ಹತಾ ಮಾನದಂಡಗಳು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಐಟಿಐ ಪ್ರಮಾಣಪತ್ರ ಅಥವಾ ಕೆಲಸದ ಅನುಭವ ಕಡ್ಡಾಯವಾಗಿದೆ. (ಉದಾ: ಚಾಲಕ ಹುದ್ದೆಗೆ ಹೆವಿ ವೆಹಿಕಲ್ ಲೈಸೆನ್ಸ್ ಅಗತ್ಯ). ಅಭ್ಯರ್ಥಿಗಳು 18 ರಿಂದ 27 ವರ್ಷಗಳ ಒಳಗಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆಯು ಒಟ್ಟು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಪುರುಷರಿಗೆ 24 ನಿಮಿಷದಲ್ಲಿ 4.8 ಕಿ.ಮೀ. ಓಟ ಹಾಗೂ ಮಹಿಳೆಯರಿಗೆ 18 ನಿಮಿಷದಲ್ಲಿ 2.4 ಕಿ.ಮೀ. ಓಟ ಪೂರ್ಣಗೊಳಿಸಬೇಕು. ಎರಡನೇ ಹಂತದಲ್ಲಿ ಕಂಪ್ಯೂಟರ್‌ ಆಧಾರಿತವಾದ 100 ಅಂಕಗಳ ಬಹು ಆಯ್ಕೆಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಮೂರನೇ ಹಂತದಲ್ಲಿ ಆಯಾ ವೃತ್ತಿಗೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು ಹಾಗೂ ನಾಲ್ಕನೇ ಹಂತದಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ತಪಾಸಣೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

* SSB ನೇಮಕಾತಿ ವೆಬ್‌ಸೈಟ್‌ಗೆ ಭೇಟಿ ನೀಡಿ ಕಾನ್ಸ್‌ಟೇಬಲ್ (ಟ್ರೇಡ್ಸ್‌ಮನ್) ನೇಮಕಾತಿಗಾಗಿ ʼಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿʼ ಕ್ಲಿಕ್ ಮಾಡಿ.

* ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ, ವ್ಯಾಪಾರ ಆಯ್ಕೆ ಮತ್ತು ವರ್ಗವನ್ನು ನಮೂದಿಸಿ.

* ನಿಮ್ಮ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.

* ನೆಟ್ ಬ್ಯಾಂಕಿಂಗ್, ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ.

* ಭವಿಷ್ಯದ ಉಲ್ಲೇಖಕ್ಕಾಗಿ ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More
Next Story