SIDBI Job News | Annual salary of Rs. 55 lakh, applications invited for 14 Specialist Officer posts.
x

ಸಾಂದರ್ಭಿಕ ಚಿತ್ರ

SIDBI Job News | ವಾರ್ಷಿಕ 55 ಲಕ್ಷ ರೂ. ಭರ್ಜರಿ ಸಂಬಳ, ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಬಿ.ಇ, ಬಿ.ಟೆಕ್, ಎಂ.ಟೆಕ್, ಎಂಬಿಎ (ಹಣಕಾಸು), ಸಿಎ ಅಥವಾ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ 3 ರಿಂದ 15 ವರ್ಷಗಳ ವೃತ್ತಿಪರ ಅನುಭವ ಹೊಂದಿರಬೇಕು.


Click the Play button to hear this message in audio format

ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಲು ಬಯಸುವವರಿಗೆ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ಸುವರ್ಣಾವಕಾಶ ನೀಡಿದೆ. 2026ರ ಸಾಲಿನ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ಡೇಟಾ ಸೈಂಟಿಸ್ಟ್ ಮತ್ತು ಎಐ ಸ್ಪೆಷಲಿಸ್ಟ್ ಸೇರಿದಂತೆ ಒಟ್ಟು 14 ಪರಿಣಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ಕನಿಷ್ಠ 12 ಲಕ್ಷ ರೂ. ರಿಂದ ಗರಿಷ್ಠ 55 ಲಕ್ಷ ರೂ. ವರೆಗೆ ನಿಗದಿಪಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಏ.7 ಕೊನೆಯ ದಿನಾಂಕವಾಗಿದೆ.

ಯಾವ್ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ ?

ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಡೇಟಾ ಪ್ರೊಟೆಕ್ಷನ್ ಆಫೀಸರ್, ಪೋರ್ಟ್ಫೋಲಿಯೋ ಮ್ಯಾನೇಜರ್‌, ಡೇಟಾ ಎಂಜಿನಿಯರ್‌, ಎಐ ಮತ್ತು ಎಂಎಲ್‌ ಸ್ಪೆಷಲಿಸ್ಟ್, ಕ್ಲಸ್ಟರ್ ಮ್ಯಾನೇಜರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆ ಮತ್ತು ಅನುಭವ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಬಿ.ಇ, ಬಿ.ಟೆಕ್, ಎಂ.ಟೆಕ್, ಎಂಬಿಎ (ಹಣಕಾಸು), ಸಿಎ ಅಥವಾ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ 3 ರಿಂದ 15 ವರ್ಷಗಳ ವೃತ್ತಿಪರ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನೇಮಕಾತಿ ಪ್ರಕ್ರಿಯೆ

ಇದು ಒಪ್ಪಂದದ ಆಧಾರದ ನೇಮಕಾತಿಯಾಗಿದ್ದು, ಆರಂಭದಲ್ಲಿ 3 ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುವುದು. ಕಾರ್ಯಕ್ಷಮತೆಯ ಆಧಾರದ ಮೇಲೆ ಇದನ್ನು ಮುಂದಿನ 2 ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿದೆ. ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಮೂಲಕ ಶಾರ್ಟ್‌ಲಿಸ್ಟ್ ಮಾಡಿ, ಆನ್‌ಲೈನ್ ಸಂದರ್ಶನದ ಮೂಲಕ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಸಾಮನ್ಯವರ್ಗ ಸೇರಿದಂತೆ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಆನ್‌ಲೈನ್ ಪೋರ್ಟಲ್ ಇರುವುದಿಲ್ಲ. ಬದಲಾಗಿ ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿ, ಸಿವಿ (CV) ಮತ್ತು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಇ-ಮೇಲ್‌ನಲ್ಲಿ ಹುದ್ದೆಯ ಹೆಸರು ನಮೂದಿಸಿ recruitment@sidbi.in ಗೆ ಏ.7 ಸಂಜೆ 6 ಗಂಟೆಯೊಳಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.

Read More
Next Story