SEBI Recruitment | Filling of Young Professional Posts: Heres a bumper opportunity for graduates!
x

ಸಾಂದರ್ಭಿಕ ಚಿತ್ರ

SEBI ನೇಮಕ| 'ಯಂಗ್ ಪ್ರೊಫೆಷನಲ್' ಹುದ್ದೆಗಳ ಭರ್ತಿ: ಪದವೀಧರರಿಗೆ ಇಲ್ಲಿದೆ ಅವಕಾಶ!

ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯಲ್ಲಿ ಯಾವ ಹುದ್ದೆಗಳಿವೆ, ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.


Click the Play button to hear this message in audio format

ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯಲ್ಲಿ(ಸೆಬಿ) ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗಾಗಿ 2026ನೇ ಸಾಲಿನ 'ಯುವ ವೃತ್ತಿಪರ ಕಾರ್ಯಕ್ರಮ' (Young Professional Program - YPP) ಅಡಿಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಸಂಸ್ಥೆಯೊಂದಿಗೆ ಕೆಲಸ ಮಾಡಲು ಬಯಸುವ ಯುವ ಪ್ರತಿಭೆಗಳಿಗೆ ಇದು ಸುವರ್ಣಾವಕಾಶವಾಗಿದೆ.

ಒಟ್ಟು 91 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ 70 ಸಾವಿರ ಮಾಸಿಕ ಗೌರವ ಧನ ನಿಗದಿಪಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್‌ 1 ಕೊನೆಯ ದಿನಾಂಕವಾಗಿದೆ ಎಂದು ಸೆಬಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಯಾವ್ಯಾವ ಹುದ್ದೆಗಳಿವೆ ?

ಬಂಡವಾಳ ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿನ ಸೆಕ್ಯುರಿಟೀಸ್ ಮಾರುಕಟ್ಟೆ ಕಾರ್ಯಾಚರಣೆಗೆ 40 ಹುದ್ದೆಗಳು, ಮಾಹಿತಿ ತಂತ್ರಜ್ಞಾನದಲ್ಲಿ 29 ಹುದ್ದೆಗಳು, ಕಾನೂನು ವಿಭಾಗದಲ್ಲಿ 13 ಹುದ್ದೆಗಳು, ರಾಜ್‌ಬಾಷಾ ವಿಭಾಗದಲ್ಲಿ 5 ಹುದ್ದೆಗಳು ಹಾಗೂ ಸಂಶೋಧನೆಯಲ್ಲಿ 4 ಹುದ್ದೆಗಳು ಸೇರಿದಂತೆ ಒಟ್ಟು 91 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ

ಅರ್ಹಿ ಸಲ್ಲಿಸುವ ಅಭ್ಯರ್ಥಿಗಳು 2026 ಫೆಬ್ರವರಿ 8ರ ವೇಳೆಗೆ ವಯಸ್ಸು 30 ವರ್ಷ ಮೀರಬಾರದು. ಸಂಬಂಧಿತ ವಿಷಯಗಳಲ್ಲಿ ಎಂಬಿಎ (ಹಣಕಾಸು) ಸಿಎ, ಸಿಎಸ್‌, ಎಲ್‌ಎಲ್‌ಬಿ, ಎಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇ. 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಆಯ್ಕೆ ಪ್ರಕ್ರಿಯೆ

ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಆಯ್ಕೆಯು ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ನಡೆಯಲಿದ್ದು, ಶೈಕ್ಷಣಿಕ ಅಂಕಗಳು ಮತ್ತು ಪ್ರೊಫೈಲ್ ಆಧಾರಿತ ಶಾರ್ಟ್‌ಲಿಸ್ಟಿಂಗ್ ಮಾಡಲಾಗುವುದು. ಆನ್‌ಲೈನ್ ಮೂಲಕ ಮೊದಲ ಹಾಗೂ ಎರಡನೇ ಹಂತದ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಪಟ್ಟಿ ಬಿಡಗಡೆ ಮಾಡಲಾಗುವುದು ಎಂದು ಸೆಬಿ ತಿಳಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಬಿಯ ಅಧಿಕೃತ ವೆಬ್‌ಸೈಟ್ www.sebi.gov.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.

* ಮೂಲ ವಿವರಗಳನ್ನು ಒದಗಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

* ಅರ್ಜಿ ನಮೂನೆಯನ್ನು ಭರ್ತಿ ಮಾಡಲು ನಿಮ್ಮ ಶೈಕ್ಷಣಿಕ ವಿವರಗಳು, ಕೆಲಸದ ಅನುಭವವನ್ನು ನಮೂದಿಸಿ ಮತ್ತು ಉದ್ದೇಶದ ಹೇಳಿಕೆಯನ್ನು (SOP) ಅಪ್‌ಲೋಡ್ ಮಾಡಿ.

* ನಿಮ್ಮ ಫೋಟೋ, ಸಹಿ ಮತ್ತು ಸಂಬಂಧಿತ ಅಂಕಪಟ್ಟಿಗಳು ಅಥವಾ ಅನುಭವ ಪ್ರಮಾಣಪತ್ರಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

* ನಮೂದಿಸಿದ ಎಲ್ಲಾ ಮಾಹಿತಿಯನ್ನು ಎರಡು ಬಾರಿ ಪರಿಶೀಲಿಸಿ.

* ಫಾರ್ಮ್ ಅನ್ನು ಅಂತಿಮಗೊಳಿಸಿ. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ದಾಖಲಿಸಿಕೊಳ್ಳಿ.

ಮಾ.1, ಕೊನೆಯ ದಿನಾಂಕವಾಗಿದ್ದು, ಒಬ್ಬ ಅಭ್ಯರ್ಥಿಯು ಕೇವಲ ಒಂದು ವಿಭಾಗಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದಲ್ಲಿ ಅದನ್ನು ತಿರಸ್ಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.


Read More
Next Story