
ಸಾಂದರ್ಭಿಕ ಚಿತ್ರ
Job News | MBBS ಪೂರೈಸಿದ್ದೀರಾ ? ವೈದ್ಯಕೀಯ ವೃತ್ತಿಪರ ಹುದ್ದೆಗಳಿಗೆ ಅಧಿಸೂಚನೆ, ಇಂದೇ ಅರ್ಜಿ ಸಲ್ಲಿಸಿ !
ಒಟ್ಟು 55 ವೈದ್ಯಕೀಯ ವೃತ್ತಿಪರರ ಹುದ್ದೆಗಳು ಲಭ್ಯವಿದ್ದು, ಜಿಡಿಎಂಒ 20 ಹುದ್ದೆಗಳು, ಜನರಲ್ ಮೆಡಿಸಿನ್ ವೈದ್ಯರು 25 ಹುದ್ದೆಗಳು, ಒ & ಜಿ 8 ಹುದ್ದೆಗಳು, ಮಕ್ಕಳ ತಜ್ಞರು 1 ಹುದ್ದೆ ಹಾಗೂ ನೇತ್ರವಿಜ್ಞಾನ ವಿಭಾಗಕ್ಕೆ1 ಹುದ್ದೆ ನಿಗದಿಪಡಿಸಲಾಗಿದೆ.
ಭಾರತದ ಅತಿದೊಡ್ಡ ಇಂಧನ ಉತ್ಪಾದನಾ ಸಂಸ್ಥೆಯಾದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ಲಿಮಿಟೆಡ್ (NTPC) 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ನವದೆಹಲಿಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅರ್ಹ ವೈದ್ಯಕೀಯ ವೃತ್ತಿಪರರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಹುದ್ದೆಗಳ ವಿವರ
ಒಟ್ಟು 55 ವೈದ್ಯಕೀಯ ವೃತ್ತಿಪರರ ಹುದ್ದೆಗಳು ಲಭ್ಯವಿದ್ದು, ಜಿಡಿಎಂಒ 20 ಹುದ್ದೆಗಳು, ಜನರಲ್ ಮೆಡಿಸಿನ್ ವೈದ್ಯರು 25 ಹುದ್ದೆಗಳು, ಒ & ಜಿ 8 ಹುದ್ದೆಗಳು, ಮಕ್ಕಳ ತಜ್ಞರು 1 ಹುದ್ದೆ ಹಾಗೂ ನೇತ್ರವಿಜ್ಞಾನ ವಿಭಾಗಕ್ಕೆ1 ಹುದ್ದೆ ನಿಗದಿಪಡಿಸಲಾಗಿದೆ.
ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎನ್‌ಟಿಪಿಎಸ್ ಅಧಿಕೃತ ನಿಯಮಾವಳಿಗಳ ಪ್ರಕಾರ ಸಂಬಂಧಿತ ವೈದ್ಯಕೀಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಸರ್ಕಾರದ ನಿಯಮಾವಳಿ ಪ್ರಕಾರ ವಯೋಮಿತಿ ವಿನಾಯಿತಿ ಅನ್ವಯವಾಗಲಿದೆ. ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎನ್‌ಟಿಪಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಅಗತ್ಯ ದಾಖಲೆಗಳಾದ ಐಡಿ ಪ್ರೂಫ್, ಶೈಕ್ಷಣಿಕ ದಾಖಲಾತಿಗಳು ಮತ್ತು ರೆಸ್ಯೂಮ್ ಸಿದ್ಧವಾಗಿಟ್ಟುಕೊಳ್ಳಿ. ಆನ್‌ಲೈನ್ ಲಿಂಕ್ ಮೂಲಕ ವಿವರಗಳನ್ನು ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಏ.23 ಕೊನೆಯ ದಿನಾಂಕಔಾಗಿದೆ.

