
ಸಾಂದರ್ಭಿಕ ಚಿತ್ರ
Job News | NHM ನೇಮಕಾತಿ, ಪರೀಕ್ಷೆ ಇಲ್ಲದೇ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ
ಒಟ್ಟು 35 ಹುದ್ದೆಗಳಿದ್ದು, ಲಸಿಕೆ ಕೋಲ್ಡ್ ಚೈನ್ ಮ್ಯಾನೇಜರ್ 32 ಹುದ್ದೆಗಳು, ಸಲಹೆಗಾರ 1 ಹುದ್ದೆ ಹಾಗೂ ಕಾರ್ಯಕ್ರಮ ಸಹಾಯಕ 2 ಹುದ್ದೆಗಳನ್ನು ವಿಂಗಡಿಸಲಾಗಿದೆ.
ರಾಜ್ಯ ಸರ್ಕಾರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 2026ರ ಅಧಿಕೃತ ಅಧಿಸೂಚನೆಯಂತೆ, ಖಾಲಿ ಇರುವ 35 ಕಾರ್ಯಕ್ರಮ ಸಹಾಯಕ ಹಾಗೂ ಸಲಹೆಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 35 ಹುದ್ದೆಗಳಿದ್ದು, ಲಸಿಕೆ ಕೋಲ್ಡ್ ಚೈನ್ ಮ್ಯಾನೇಜರ್ 32 ಹುದ್ದೆಗಳು, ಸಲಹೆಗಾರ 1 ಹುದ್ದೆ ಹಾಗೂ ಕಾರ್ಯಕ್ರಮ ಸಹಾಯಕ 2 ಹುದ್ದೆಗಳು ವಿಂಗಡಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ನಿಯಮಾವಳಿಗಳ ಪ್ರಕಾರ ಉತ್ತಮ ಮಾಸಿಕ ವೇತನವನ್ನು ನೀಡಲಾಗುವುದು.
ಅರ್ಹತೆ ಮತ್ತು ವಯೋಮಿತಿ
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಸಡಿಲಿಕೆಯು ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕದ ಅಧಿಕೃತ ಮಾನದಂಡಗಳ ಅನ್ವಯ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆಯನ್ನು ಗಮನಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನೇರ ಸಂದರ್ಶನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಏ.13 ರಂದು ನೇರ ಸಂದರ್ಶನಕ್ಕೆ ಮುಖ್ಯ ಆಡಳಿತಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಆರೋಗ್ಯ ಮಿಷನ್ (NHM), 1ನೇ ಮಹಡಿ, ಪಶ್ಚಿಮ ಭಾಗ, ಆರೋಗ್ಯ ಸೌಧ, ಮಾಗಡಿ ರಸ್ತೆ, 1ನೇ ಕ್ರಾಸ್, ಬೆಂಗಳೂರು ಇಲ್ಲಿಗೆ ಹಾಜರಾಗಬೇಕು. ಸರ್ಕಾರಿ ಸಂಸ್ಥೆಯಡಿ ಕೆಲಸ ಮಾಡಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸಂದರ್ಶನಕ್ಕೆ ಹಾಜರಾಗುವ ಮುನ್ನ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

