
ಸಾಂದರ್ಭಿಕ ಚಿತ್ರ
Job News | ರಕ್ಷಣಾ ಸಚಿವಾಲಯದಲ್ಲಿ ಉದ್ಯೋಗಾವಕಾಶ, ಗ್ರೂಪ್ ʼಸಿʼ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ !
ಒಟ್ಟು 8 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಸ್ಟೆನೋಗ್ರಾಫರ್ ಗ್ರೇಡ್-II 5 ಹುದ್ದೆಗಳು, ಸಿಎಂಡಿ (ಚಾಲಕ) 2 ಹುದ್ದೆಗಳು ಹಾಗೂ ಬಡಗಿ (ಕಾರ್ಪೆಂಟರ್) 1 ಹುದ್ದೆ ವಿಂಗಡಿಸಲಾಗಿದೆ.
ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡಲು ಬಯಸುವ ಯುವಕರಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಗುಣಮಟ್ಟ ಖಾತರಿ ನಿರ್ದೇಶನಾಲಯವು (DGQA) ಸ್ಟೆನೋಗ್ರಾಫರ್, ಚಾಲಕ ಮತ್ತು ಬಡಗಿ ಸೇರಿದಂತೆ ವಿವಿಧ ಗ್ರೂಪ್ 'ಸಿ' ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 8 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಸ್ಟೆನೋಗ್ರಾಫರ್ ಗ್ರೇಡ್-II 5 ಹುದ್ದೆಗಳು, ಸಿಎಂಡಿ (ಚಾಲಕ) 2 ಹುದ್ದೆಗಳು ಹಾಗೂ ಬಡಗಿ (ಕಾರ್ಪೆಂಟರ್) 1 ಹುದ್ದೆ ವಿಂಗಡಿಸಲಾಗಿದೆ.
ವೇತನ ಶ್ರೇಣಿ
ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಅನ್ವಯ ಆಕರ್ಷಕ ಸಂಬಳ ನೀಡಲಾಗುತ್ತದೆ. ಸ್ಟೆನೋಗ್ರಾಫರ್ ಹುದ್ದೆಗಳಿಗೆ 25,500 ರೂ. ರಿಂದ 81,100 ರೂ. (ಲೆವೆಲ್-4), ಚಾಲಕ ಮತ್ತು ಬಡಗಿ ಹುದ್ದೆಗಳಿಗೆ 19,900 ರೂ. ರಿಂದ 63,200 ರೂ. (ಲೆವೆಲ್-2), ಇದರೊಂದಿಗೆ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಇತರೆ ಸೌಲಭ್ಯಗಳು ಸಿಗಲಿವೆ.
ವಿದ್ಯಾರ್ಹತೆ ಮತ್ತು ವಯೋಮಿತಿ
ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು ಮತ್ತು ಸ್ಟೆನೋಗ್ರಫಿ ಜ್ಞಾನವಿರಬೇಕು. ಚಾಲಕ ಹುದ್ದೆಗಳಿಗೆ 10ನೇ ತರಗತಿ ಪಾಸ್ ಜತೆಗೆ ಭಾರೀ ವಾಹನ ಚಾಲನಾ ಪರವಾನಗಿ ಮತ್ತು 4 ವರ್ಷದ ಅನುಭವ ಕಡ್ಡಾಯವಾಗಿರಬೇಕು. ಬಡಗಿ ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಪಾಸ್ ಆಗಿರಬೇಕು. ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ ಮತ್ತು ಆಯ್ಕೆ ವಿಧಾನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 27 ವರ್ಷಗಳ ನಡುವೆ ಇರಬೇಕು. ಬಡಗಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 37 ವರ್ಷ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳಿಗೆ ಎರಡು ಹಂತಗಳಲ್ಲಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 100 ಅಂಕಗಳ ವಸ್ತುನಿಷ್ಠ ಮಾದರಿಯ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ರೀಸನಿಂಗ್, ಜನರಲ್ ಅವೇರ್ನೆಸ್, ಇಂಗ್ಲಿಷ್ ಮತ್ತು ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಎರಡನೇ ಹಂತದಲ್ಲಿ ಲಿಖಿತ ಪರೀಕ್ಷೆಯಲ್ಲಿ ಪಾಸಾದವರಿಗೆ ಹುದ್ದೆಗೆ ಅನುಗುಣವಾಗಿ ಟೈಪಿಂಗ್ ಅಥವಾ ಚಾಲನಾ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಇದು ಆಫ್ಲೈನ್ ನೇಮಕಾತಿಯಾಗಿದ್ದು, ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕಳುಹಿಸಬೇಕು. ಅಧಿಕೃತ ವೆಬ್ಸೈಟ್ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಭರ್ತಿ ಮಾಡಿ. ಅಗತ್ಯ ದಾಖಲೆಗಳ (ವಿದ್ಯಾರ್ಹತೆ, ಜನ್ಮ ದಿನಾಂಕ, ಜಾತಿ ಪ್ರಮಾಣಪತ್ರ) ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ. ಲಕೋಟೆಯ ಮೇಲೆ "Application for the post of [ಹುದ್ದೆಯ ಹೆಸರು]" ಎಂದು ಸ್ಪಷ್ಟವಾಗಿ ಬರೆಯಬೇಕು. ಅರ್ಜಿ ಸಲ್ಲಿಸಲು ಏ.25 ಕೊನೆಯ ದಿನಾಂಕವಾಗಿದ್ದು, ದೂರದ ಪ್ರದೇಶದ ಅಭ್ಯರ್ಥಿಗಳಿಗೆ ಮೇ.2 ಕೊನೆಯ ದಿನಾಂಕವಾಗಿದೆ.
ಅರ್ಜಿ ಕಳುಹಿಸಬೇಕಾದ ವಿಳಾಸ
Chief Quality Assurance Establishment (Eastern Fleet Stores),
Near NSTL, Opposite Rythu Bazar, Marripalem Post,
Visakhapatnam – 530018.

