Job News | Applications invited for 111 posts in Madras Fertilizers, Rs. 2.6 lakh salary!
x

 ಮದ್ರಾಸ್ ಫರ್ಟಿಲೈಸರ್ಸ್‌ ಕಾರ್ಖಾನೆ

Job News | ಮದ್ರಾಸ್ ಫರ್ಟಿಲೈಸರ್ಸ್‌ನಲ್ಲಿ 111 ಹುದ್ದೆಗಳಿಗೆ ಅರ್ಜಿ ಆಹ್ವಾನ, 2.6 ಲಕ್ಷ ರೂ. ವೇತನ !

ಎಂಜಿನಿಯರಿಂಗ್ ಹುದ್ದೆಗಳಿಗೆ ಬಿ.ಇ, ಬಿ.ಟೆಕ್ ಪೂರೈಸಿರಬೇಕು. ಹಣಕಾಸು ಹುದ್ದೆಗಳಿಗೆ ಸಿಎ ಅಥವಾ ಎಲ್‌ಎಲ್‌ಬಿ ಜೊತೆಗೆ ಎಂಬಿಎ ಉತ್ತೀರ್ಣರಾಗಿರಬೇಕು.


Click the Play button to hear this message in audio format

ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದಲ್ಲಿರುವ 'ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್' (MFL) ವಿವಿಧ ಹುದ್ದೆಗಳ ಭರ್ತಿಗೆ ಬೃಹತ್ ಅಧಿಸೂಚನೆ ಹೊರಡಿಸಿದೆ. ಮೇಲ್ವಿಚಾರಣಾ (Supervisory) ಮತ್ತು ಮೇಲ್ವಿಚಾರಣೇತರ (Non-Supervisory) ಕೇಡರ್‌ನಲ್ಲಿ ಒಟ್ಟು 111 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

ಮೇಲ್ವಿಚಾರಣಾ ಕೇಡರ್‌ನಲ್ಲಿ 68 ಹುದ್ದೆಗಳಿದ್ದು, ಡಿಜಿಎಂ, ಮುಖ್ಯ ವ್ಯವಸ್ಥಾಪಕರು, ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಸೀನಿಯರ್ ಎಂಜಿನಿಯರ್ ಹುದ್ದೆಗಳಿವೆ. ಮೇಲ್ವಿಚಾರಣೇತರ ಕೇಡರ್‌ನ 43 ಹುದ್ದೆಗಳಲ್ಲಿ ತಾಂತ್ರಿಕ ಸಹಾಯಕ ತರಬೇತುದಾರರು ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್, ರಿಗ್ಗರ್, ವೆಲ್ಡರ್ ಮತ್ತು ಜೂನಿಯರ್ ಸೆಕ್ರೆಟರಿ ಹುದ್ದೆಗಳು ಸೇರಿ ಒಟ್ಟು 111 ಹುದ್ದೆಗಳಿವೆ.

ಶೈಕ್ಷಣಿಕ ಅರ್ಹತೆ

ಎಂಜಿನಿಯರಿಂಗ್ ಹುದ್ದೆಗಳಿಗೆ ಬಿ.ಇ, ಬಿ.ಟೆಕ್ ಪೂರೈಸಿರಬೇಕು. ಹಣಕಾಸು ಹುದ್ದೆಗಳಿಗೆ ಸಿಎ ಅಥವಾ ಎಲ್‌ಎಲ್‌ಬಿ ಜೊತೆಗೆ ಎಂಬಿಎ ಉತ್ತೀರ್ಣರಾಗಿರಬೇಕು. ತಾಂತ್ರಿಕ ಸಹಾಯಕರ ಹುದ್ದೆಗೆ ಸಂಬಂಧಿತ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ, ತಂತ್ರಜ್ಞರು ಹುದ್ದೆಗೆ ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ ಅಥವಾ ಸಂಬಂಧಿತ ಅನುಭವ ಹೊಂದಿರಬೇಕು.

ವೇತನ ಶ್ರೇಣಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ದರ್ಜೆಗೆ ಅನುಗುಣವಾಗಿ ಆಕರ್ಷಕ ವೇತನ ನೀಡಲಾಗುತ್ತದೆ. ಕನಿಷ್ಠ 21,500 ರೂ. ರಿಂದ ಪ್ರಾರಂಭವಾಗಿ, ಗರಿಷ್ಠ 2,60,000 ರೂ. ನಿಗದಿಪಡಿಸಿದೆ. ಇವುಗಳ ಜೊತೆಗೆ ಡಿಎ (ಶೇ. 53.4), ಹೆಚ್‌ಆರ್‌ಎ, ವೈದ್ಯಕೀಯ ಸೌಲಭ್ಯ ಮತ್ತು ಪಿಎಫ್ ಸೌಲಭ್ಯಗಳು ಲಭ್ಯವಿರುತ್ತವೆ.

ಆಯ್ಕೆ ಪ್ರಕ್ರಿಯೆ ಹೇಗೆ ?

ಮೇಲ್ವಿಚಾರಣಾ ಹುದ್ದೆಗಳಿಗೆ ಅರ್ಜಿಗಳ ಸ್ಕ್ರೀನಿಂಗ್ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆಮಾಡಲಾಗುತ್ತದೆ. ಮೇಲ್ವಿಚಾರಣೇತರ ಹುದ್ದೆಗಳಿಗೆ 90 ನಿಮಿಷಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯಲಿದೆ. ತಂತ್ರಜ್ಞ ಮತ್ತು ಕಾರ್ಯದರ್ಶಿ ಹುದ್ದೆಗಳಿಗೆ ಹೆಚ್ಚುವರಿಯಾಗಿ ಕೌಶಲ್ಯ ಪರೀಕ್ಷೆ ಇರಲಿದೆ. ಅರ್ಜಿ ಸಲ್ಲಿಸಲು ಏ. 5, ಕೊನೆಯ ದಿನಾಂಕವಾಗಿದೆ.

ಅರ್ಜಿ ಶುಲ್ಕ

ಸಾಮಾನ್ಯ ವರ್ಗ, ಹಿಂದುಳಿದ ವರ್ಗಗ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 500 ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆಸಕ್ತರು MFL ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story