
ಸಾಂದರ್ಭಿಕ ಚಿತ್ರ
IOCL ನೇಮಕಾತಿ| ಗುವಾಹಟಿ ರಿಫೈನರಿಯಲ್ಲಿ ಪರೀಕ್ಷೆಯಿಲ್ಲದೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಒಟ್ಟು 42 ಖಾಲಿ ಹುದ್ದೆಗಳಿದ್ದು ಬಾಯ್ಲರ್ ಅಟೆಂಡೆಂಟ್ ಆಪರೇಟರ್‌ಗೆ ಬಿ.ಎಸ್ಸಿ ವಿಭಾಗದಲ್ಲಿ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಅಥವಾ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ಪೂರ್ಣಗೊಳಿಸಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪದವಿ ಹಾಗೂ ತಾಂತ್ರಿಕ ಶಿಕ್ಷಣ ಪೂರೈಸಿರುವ ಯುವಕರಿಗೆ ಸಾರ್ವಜನಿಕ ವಲಯದ ಬೃಹತ್ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಸುವರ್ಣಾವಕಾಶವೊಂದನ್ನು ನೀಡಿದೆ. ಅಸ್ಸಾಂನ ಗುವಾಹಟಿ ರಿಫೈನರಿಯಲ್ಲಿ ವಿವಿಧ ವಿಭಾಗಗಳ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು ಅರ್ಜಿ ಸಲ್ಲಿಸಲು ಫೆ.24 ಕೊನೆಯ ದಿನಾಂಕವಾಗಿದೆ.
ಒಟ್ಟು 42 ಖಾಲಿ ಹುದ್ದೆಗಳಿದ್ದು ಬಾಯ್ಲರ್ ಅಟೆಂಡೆಂಟ್ ಆಪರೇಟರ್‌ಗೆ ಬಿ.ಎಸ್ಸಿ ವಿಭಾಗದಲ್ಲಿ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಅಥವಾ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ಪೂರ್ಣಗೊಳಿಸಿರಬೇಕು. ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ ಸಂಬಂಧಿತ ವಿಷಯದಲ್ಲಿ 3 ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 24 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಈ ನೇಮಕಾತಿಯ ವಿಶೇಷವೆಂದರೆ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯಲ್ಲಿ (ಬಿ.ಎಸ್ಸಿ ಅಥವಾ ಡಿಪ್ಲೊಮಾ) ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಅಭ್ಯರ್ಥಿಗಳು ಮೊದಲು NAPS/NATS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ IOCL ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಮೈಕ್ರೋಸಾಫ್ಟ್ ಫಾರ್ಮ್ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಈ ಅಪ್ರೆಂಟಿಸ್ ತರಬೇತಿಯ ಅವಧಿಯು 12 ರಿಂದ 24 ತಿಂಗಳುಗಳಾಗಿದ್ದು, ತರಬೇತಿ ಪೂರ್ಣಗೊಂಡ ನಂತರ ಖಾಯಂ ಉದ್ಯೋಗ ನೀಡುವ ಯಾವುದೇ ಬಾಧ್ಯತೆಯನ್ನು ಸಂಸ್ಥೆ ಹೊಂದಿರುವುದಿಲ್ಲ ಎಂದು ತಿಳಿಸಿದೆ.
ಹಂತ I - ಕೋಡ್ 101 ಮತ್ತು 103 ಬಿ.ಎಸ್‌ಸಿ ಅಭ್ಯರ್ಥಿಗಳು APPS ಪೋರ್ಟಲ್‌ನಲ್ಲಿ apprenticeshipindia.gov.in ನಲ್ಲಿ ನೋಂದಾಯಿಸಿ. ಕೋಡ್ 104 ಮತ್ತು 107 ಡಿಪ್ಲೊಮಾ ಅಭ್ಯರ್ಥಿಗಳು nats.education.gov.in ನಲ್ಲಿ NATS ಪೋರ್ಟಲ್‌ನಲ್ಲಿ ನೋಂದಾಯಿಸಿ. IOCL ಗುವಾಹಟಿ ರಿಫೈನರಿ ಯೂನಿಟ್‌ಗಾಗಿ ಹುಡುಕಿ, ನೋಂದಣಿಯನ್ನು ಪೂರ್ಣಗೊಳಿಸಿ.
ಹಂತ II - ಮೈಕ್ರೋಸಾಫ್ಟ್ ಫಾರ್ಮ್‌ಗಳನ್ನು ಭರ್ತಿ ಮಾಡಿ, ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆಗಳು ಮತ್ತು NAPS/NATS ನೋಂದಣಿ ಸಂಖ್ಯೆ ಸೇರಿದಂತೆ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

