Job News | Navy Agniveer SSR Recruitment, Golden Opportunity for PUC Passers!
x

ಭಾರತೀಯ ನೌಕಾಪಡೆ ಅಗ್ನಿವೀರ್‌ ಸೈನಿಕರು (ಸಾಂದರ್ಭಿಕ ಚಿತ್ರ)

Job News | ನೌಕಾಪಡೆ ಅಗ್ನಿವೀರ್ ನೇಮಕಾತಿ, ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ !

ಭೌತಶಾಸ್ತ್ರ ಮತ್ತು ಗಣಿತ ವಿಷಯಗಳೊಂದಿಗೆ ಕನಿಷ್ಠ ಶೇ. 50 ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಅಥವಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮುಂತಾದ ವಿಭಾಗಗಳಲ್ಲಿ ಮೂರು ವರ್ಷದ ಎಂಜಿನಿಯರಿಂಗ್ ಡಿಪ್ಲೊಮಾ ಹೊಂದಿರಬೇಕು.


Click the Play button to hear this message in audio format

ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಯುವಕ-ಯುವತಿಯರಿಗೆ ಸುವರ್ಣಾವಕಾಶ ಒದಗಿಬಂದಿದೆ. ನೌಕಾಪಡೆಯು ಅಗ್ನಿವೀರ್ (SSR - ಸೀನಿಯರ್ ಸೆಕೆಂಡರಿ ನೇಮಕಾತಿ) ಯೋಜನೆಯಡಿ 2027ರ ಎರಡು ಬ್ಯಾಚ್‌ಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಏ.6 ಕೊನೆಯ ದಿನಾಂಕವಾಗಿದೆ.

ಶೈಕ್ಷಣಿಕ ಅರ್ಹತೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭೌತಶಾಸ್ತ್ರ ಮತ್ತು ಗಣಿತ ವಿಷಯಗಳೊಂದಿಗೆ ಕನಿಷ್ಠ ಶೇ. 50 ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಅಥವಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮುಂತಾದ ವಿಭಾಗಗಳಲ್ಲಿ ಮೂರು ವರ್ಷದ ಎಂಜಿನಿಯರಿಂಗ್ ಡಿಪ್ಲೊಮಾ ಹೊಂದಿರಬೇಕು. 17 ರಿಂದ 21 ವರ್ಷದೊಳಗಿನ ಅವಿವಾಹಿತ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.

ವೇತನ ಮತ್ತು ಸೌಲಭ್ಯಗಳು

ಆಯ್ಕೆಯಾದ ಅಗ್ನಿವೀರರಿಗೆ ಆಕರ್ಷಕ ವೇತನ ಶ್ರೇಣಿ ನಿಗದಿಪಡಿಸಲಾಗಿದ್ದು, ಮೊದಲ ವರ್ಷ ಮಾಸಿಕ 30 ಸಾವಿರ ರೂ. ವೇತನ ದೊರೆಯಲಿದೆ. ನಾಲ್ಕನೇ ವರ್ಷದ ವೇಳೆಗೆ ಅಭ್ಯರ್ಥಿಗಳು ಮಾಸಿಕ 40 ಸಾವಿರ ರೂ. ಪಡೆಯಲಿದ್ದಾರೆ. 4 ವರ್ಷಗಳ ಸೇವಾ ಅವಧಿಯ ನಂತರ ಸುಮಾರು 10.04 ಲಕ್ಷ ರೂ. ಮೊತ್ತದ 'ಸೇವಾ ನಿಧಿ' ಪ್ಯಾಕೇಜ್ ದೊರೆಯಲಿದೆ. 48 ಲಕ್ಷ ರೂ. ಜೀವ ವಿಮಾ ರಕ್ಷಣೆ ಮತ್ತು ಕರ್ತವ್ಯದ ವೇಳೆ ಮೃತಪಟ್ಟರೆ 44 ಲಕ್ಷ ರೂ. ಪರಿಹಾರ ಸೌಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ನೇಮಕಾತಿಯು ಪ್ರಮುಖವಾಗಿ ಎರಡು ಹಂತಗಳಲ್ಲಿ ನಡೆಯಲಿದ್ದು, ಪ್ರಥಮ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಭಾರತೀಯ ನೌಕಾ ಪ್ರವೇಶ ಪರೀಕ್ಷೆ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ದ್ವಿತೀಯ ಹಂತದಲ್ಲಿ ದೈಹಿಕ ಫಿಟ್‌ನೆಸ್ ಪರೀಕ್ಷೆ , ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಏಪ್ರಿಲ್ 6, ಸಂಜೆ ಐದು ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 550 ರೂ. ಪರೀಕ್ಷಾ ಶುಲ್ಕ ವಿಧಿಸಿದ್ದು ಜಿಎಸ್‌ಟಿ ಸೇರಿ ಒಟ್ಟು 649 ರೂ. ಶುಲ್ಕ ಪಾವತಿಸಬೇಕಾಗಿದೆ. ಅರ್ಜಿಯಲ್ಲಿ ಯಾವುದೇ ತಪ್ಪುಗಳಾದಲ್ಲಿ ಸರಿಪಡಿಸಲು ಏಪ್ರಿಲ್ 10 ಮತ್ತು 11 ರಂದು ಅವಕಾಶ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ನೌಕಾಪಡೆಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story