Job News |ಕೃಷಿ ವಿಜ್ಞಾನ ಕೇಂದ್ರದಲ್ಲಿ ನೇಮಕಾತಿ, 10th ಪಾಸ್‌ ಆಗಿದ್ದೀರಾ ? ಇಂದೇ ಅರ್ಜಿ ಸಲ್ಲಿಸಿ
x

ಕೃಷಿ ವಿಜ್ಞಾನ ಕೇಂದ್ರ, ಇಡುಕ್ಕಿ

Job News |ಕೃಷಿ ವಿಜ್ಞಾನ ಕೇಂದ್ರದಲ್ಲಿ ನೇಮಕಾತಿ, 10th ಪಾಸ್‌ ಆಗಿದ್ದೀರಾ ? ಇಂದೇ ಅರ್ಜಿ ಸಲ್ಲಿಸಿ

ಸಹಾಯಕರ ಹುದ್ದೆಗೆ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಚಾಲಕ ಹುದ್ದೆಗೆ 10ನೇ ತರಗತಿ (ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು.


Click the Play button to hear this message in audio format

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಅಧೀನದಲ್ಲಿರುವ ಕೇರಳದ ಇಡುಕ್ಕಿ ಕೃಷಿ ವಿಜ್ಞಾನ ಕೇಂದ್ರವು (KVK) ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಹಾಯಕ, ಚಾಲಕ ಮತ್ತು ನುರಿತ ಸಹಾಯಕ ಸಿಬ್ಬಂದಿ ಸೇರಿದಂತೆ ಒಟ್ಟು 3 ಪ್ರಮುಖ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತರು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನಾಂಕವಾಗಿದೆ.

ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ

ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಅನ್ವಯ ಆಕರ್ಷಕ ಸಂಬಳ ನೀಡಲಾಗುತ್ತದೆ. ಸಹಾಯಕರ ಹುದ್ದೆಗೆ 35,400 ರೂ. ಸಂಬಳ, ಚಾಲಕ ಹುದ್ದೆಗೆ 21,700 ರೂ. ಹಾಗೂ ನುರಿತ ಸಹಾಯಕ ಸಿಬ್ಬಂದಿ 18,000 ರೂ. ಮೂಲ ವೇತನ ಮತ್ತು ಭತ್ಯೆಗಳು ದೊರೆಯುತ್ತದೆ.

ಅರ್ಹತೆಗಳೇನು?

ಸಹಾಯಕರ ಹುದ್ದೆಗೆ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಚಾಲಕ ಹುದ್ದೆಗೆ 10ನೇ ತರಗತಿ (ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು ಮತ್ತು ಮಾನ್ಯತೆ ಇರುವ ಚಾಲನಾ ಪರವಾನಗಿ ಹೊಂದಿರಬೇಕು. ನುರಿತ ಸಹಾಯಕ ಸಿಬ್ಬಂದಿಗೆ 10ನೇ ತರಗತಿ ಅಥವಾ ಐಟಿಐ ಪೂರ್ಣಗೊಳಿಸಿದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಯೋಮಿತಿ

ಸಹಾಯಕರ ಹುದ್ದೆಗೆ 20 - 30 ವರ್ಷಗಳು, ಚಾಲಕ ಹುದ್ದೆಗೆ 18 - 27 ವರ್ಷಗಳು ಹಾಗೂ ಸಹಾಯಕ ಸಿಬ್ಬಂದಿ ಹುದ್ದೆಗೆ 18- 25 ವರ್ಷಗಳು ನಿಗದಿಪಡಿಸಿದ್ದು, ಸರ್ಕಾರಿ ನಿಯಮದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ

ಮೊದಲ ಹಂತದಲ್ಲಿ ಅರ್ಜಿಗಳ ಪರಿಶೀಲನೆ ನಡೆಯಲಿದೆ. ನಂತರ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ. ಚಾಲಕ ಹುದ್ದೆಗೆ ಪ್ರತ್ಯೇಕವಾಗಿ ಚಾಲನಾ ಕೌಶಲ್ಯ ಪರೀಕ್ಷೆ ಇರಲಿದ್ದು, ಈ ಮೂರು ಹಂತದಲ್ಲಿ ಉತ್ತಿರ್ಣರಾದ ಅಭ್ಯರ್ಥಿಗಳನ್ನು ಅಂತಿಮ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ಶೈಕ್ಷಣಿಕ ದಾಖಲೆಗಳ ಸ್ವಯಂ-ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ಅಂಚೆ ಮೂಲಕ The Programme Coordinator, ICAR-Krishi Vigyan Kendra, Bapuji Sevak Samaj, Santhanpara, Idukki District, Kerala - 685619. ಕಳುಹಿಸಬೇಕು.

ಕೇಂದ್ರ ಸರ್ಕಾರದ ಅನುದಾನಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಡುಕ್ಕಿ ಕೆವಿಕೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Read More
Next Story