Job News | ಲೆಕ್ಕ ಪರಿಶೋಧಕರ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, 2 ಲಕ್ಷ ರೂ. ಸಂಬಳ!
x

ಸಾಂದರ್ಭಿಕ ಚಿತ್ರ

Job News | ಲೆಕ್ಕ ಪರಿಶೋಧಕರ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, 2 ಲಕ್ಷ ರೂ. ಸಂಬಳ!

ಹೊಸ ಸಿಎ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಕಾರ್ಯನಿರ್ವಾಹಕ ಅಧಿಕಾರಿ ಲೆಕ್ಕ ಪರಿಶೋಧಕ 75 ಹುದ್ದೆಗಳು, ಕಾನೂನು ವಿಭಾಗದಲ್ಲಿ 15 ಹುದ್ದೆಗಳು, ಐಟಿ ವಿಭಾಗದಲ್ಲಿ 10 ಹುದ್ದೆಗಳು ನಿಗದಿಪಡಿಸಿದೆ.


Click the Play button to hear this message in audio format

ವೃತ್ತಿಪರ ಪದವೀಧರರಿಗೆ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ಭರ್ಜರಿ ಉದ್ಯೋಗಾವಕಾಶವನ್ನು ಒದಗಿಸಿದೆ.

2026ನೇ ಸಾಲಿನ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ವಿವಿಧ ವಿಭಾಗಗಳಲ್ಲಿ ಒಟ್ಟು 109 ಕಾರ್ಯನಿರ್ವಾಹಕ ಅಧಿಕಾರಿ (EO) ಮತ್ತು ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಹುದ್ದೆಗಳ ವಿವರ ಮತ್ತು ಸಂಬಳ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಅಡಿಯಲ್ಲಿ ಆಕರ್ಷಕ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಒಟ್ಟು 108 ಕಾರ್ಯನಿರ್ವಾಹಕ ಅಧಿಕಾರಿಗ ಹುದ್ದೆಗಳಿದ್ದು, ಮಾಸಿಕ 56,100 ರೂ. ಕಾನೂನು ನಿರ್ದೇಶಕರ 1 ಹುದ್ದೆಗೆ ಮಾಸಿಕ 2,05,400 ರೂ. ವೇತನ ನಿಗದಿಪಡಿಸಿದೆ. ವಸತಿ ಹಾಗೂ ಆರೋಗ್ಯ ಭತ್ಯೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ ವಿಭಾಗದಲ್ಲಿ ಎಷ್ಟು ಹುದ್ದೆ ?

ಹೊಸ ಸಿಎ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಕಾರ್ಯನಿರ್ವಾಹಕ ಅಧಿಕಾರಿ ಲೆಕ್ಕ ಪರಿಶೋಧಕ 75 ಹುದ್ದೆಗಳು, ಕಾನೂನು ವಿಭಾಗದಲ್ಲಿ 15 ಹುದ್ದೆಗಳು, ಐಟಿ ವಿಭಾಗದಲ್ಲಿ 10 ಹುದ್ದೆಗಳು, ಕಂಪನಿ ಕಾರ್ಯದರ್ಶಿ 2 ಹುದ್ದೆಗಳು, ಅರ್ಥಶಾಸ್ತ್ರ 1 ಹಾಗೂ ಮೂಲಸೌಕರ್ಯ ವಿಭಾಗದಲ್ಲಿ 2 ಹುದ್ದೆಗಳನ್ನು ವಿಂಗಡಿಸಲಾಗಿದೆ.

ಅರ್ಹತೆ

ಹುದ್ದೆಗಳಿಗೆ ಅನುಗುಣವಾಗಿ ಚಾರ್ಟರ್ಡ್ ಅಕೌಂಟೆನ್ಸಿ , ಕಾನೂನು ಪದವಿ , ಕಂಪನಿ ಕಾರ್ಯದರ್ಶಿ , ಪಿಎಚ್‌ಡಿ ಅಥವಾ ಬಿ.ಇ, ಬಿ.ಟೆಕ್ ಪದವಿ ಹೊಂದಿರಬೇಕು. ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 30 ವರ್ಷ ಮೀರಿರಬಾರದು. ಕಾನೂನು ನಿರ್ದೇಶಕ ಹುದ್ದೆಗೆ ಗರಿಷ್ಠ 55 ವರ್ಷ ನಿಗದಿಪಡಿಸಲಾಗಿದ್ದು, 22 ವರ್ಷಗಳ ವೃತ್ತಿ ಅನುಭವ ಅಗತ್ಯ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏ.15ಕ್ಕೆ ಕೊನೆಯಾಗಲಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕಾಲಾವಕಾಶದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆರಂಭಿಕ ನೇಮಕಾತಿಯು ದೆಹಲಿ ಅಥವಾ ನೋಯ್ಡಾದಲ್ಲಿ ಇರಲಿದ್ದು, ಅಗತ್ಯವಿದ್ದಲ್ಲಿ ಭಾರತದ ಯಾವುದೇ ಭಾಗಕ್ಕೆ ವರ್ಗಾವಣೆಗೊಳ್ಳುವ ಸಾಧ್ಯತೆ ಇರುತ್ತದೆ. ಅಭ್ಯರ್ಥಿಗಳು ಕೇವಲ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story