HPCL recruitment: Applications invited for 731 officer posts, annual salary up to Rs. 49 lakh!
x

ಸಾಂದರ್ಭಿಕ ಚಿತ್ರ

HPCL recruitment: 731 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, 49 ಲಕ್ಷ ರೂ. ವರೆಗೆ ವಾರ್ಷಿಕ ವೇತನ!

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಬಿ.ಇ, ಬಿ.ಟೆಕ್, ಡಿಪ್ಲೊಮಾ, ಸಿಎ, ಎಂಬಿಎ ಅಥವಾ ಎಲ್‌ಎಲ್‌ಬಿ ಪದವಿ ಹೊಂದಿರಬೇಕು.


Click the Play button to hear this message in audio format

ದೇಶದ ಪ್ರತಿಷ್ಠಿತ 'ಮಹಾರತ್ನ' ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 2026ನೇ ಸಾಲಿನ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಎಂಜಿನಿಯರಿಂಗ್ ಪದವೀಧರರು ಸೇರಿದಂತೆ ವಿವಿಧ ವೃತ್ತಿಪರರಿಗಾಗಿ ಒಟ್ಟು 731 ಅಧಿಕಾರಿ ಮತ್ತು ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.

ಹುದ್ದೆಗಳ ವಿವರ

ಎಚ್‌ಪಿಸಿಎಲ್‌ ಅಧಿಸೂಚನೆ ಹೊರಡಿಸಿರುವ ಒಟ್ಟು 731 ಹುದ್ದೆಗಳಲ್ಲಿ ಹೊಸಬರಿಗಾಗಿ 618 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಅನುಭವಿ ವೃತ್ತಿಪರರಿಗಾಗಿ 113 ಹುದ್ದೆಗಳಿವೆ. ತಾಂತ್ರಿಕ ವಿಭಾಗದಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ಕೆಮಿಕಲ್ ಮತ್ತು ಐಟಿ ಎಂಜಿನಿಯರ್‌ಗಳು. ಇತರ ವಿಭಾಗಗಳಾದ ಹಣಕಾಸು, ಮಾನವ ಸಂಪನ್ಮೂಲ, ಕಾನೂನು, ಮಾರಾಟ, ಸುರಕ್ಷತೆ ಮತ್ತು ಕ್ವಾಲಿಟಿ ಕಂಟ್ರೋಲ್‌ ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಮಾ.25 ಕೊನೆಯ ದಿನಾಂಕವಾಗಿದೆ.

ವೇತನ ಶ್ರೇಣಿ

ಸಾರ್ವಜನಿಕ ವಲಯದಲ್ಲೇ ಅತ್ಯುತ್ತಮ ವೇತನ ನೀಡುವ ಸಂಸ್ಥೆಗಳಲ್ಲಿ ಎಚ್‌ಪಿಸಿಎಲ್ ಒಂದಾಗಿದ್ದು, ಹುದ್ದೆಗಳಿಗೆ ಅನುಗುಣವಾಗಿ ವಾರ್ಷಿಕ ಸಿಟಿಸಿ 10.88 ಲಕ್ಷ ರೂ. ನಿಂದ ಆರಂಭವಾಗಿ 49.30 ಲಕ್ಷ ರೂ. ವರೆಗೆ ಇರಲಿದೆ. ಇದು ಅಭ್ಯರ್ಥಿಗಳಿಗೆ ಅತ್ಯಂತ ಆಕರ್ಷಕವಾದ ವೇತನವಾಗಿದೆ.

ಅರ್ಹತೆ ಮತ್ತು ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಬಿ.ಇ, ಬಿ.ಟೆಕ್, ಡಿಪ್ಲೊಮಾ, ಸಿಎ, ಎಂಬಿಎ ಅಥವಾ ಎಲ್‌ಎಲ್‌ಬಿ ಪದವಿ ಹೊಂದಿರಬೇಕು. 2025 ಹಾಗೂ 26ರ ಸಾಲಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಹುದ್ದೆಗಳ ಆಧಾರದ ಮೇಲೆ ವಯೋಮಿತಿ ನಿಗದಿಪಡಿಸಲಾಗಿದ್ದು, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿತಿ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪ್ರಮುಖವಾಗಿ ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಮೇ 3 ರಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರಲಿದ್ದು, ಇದರಲ್ಲಿ ಸಾಮಾನ್ಯ ಮತ್ತು ತಾಂತ್ರಿಕ ಜ್ಞಾನದ ಕುರಿತು ಪ್ರಶ್ನೆಗಳಿರುತ್ತವೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ವೈಯಕ್ತಿಕ ಸಂದರ್ಶನ ನಡೆಸಲಾಗುವುದು. ಅಂತಿಮವಾಗಿ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಎಚ್‌ಪಿಸಿಎಲ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಅಧಿಸೂಚನೆ ಓದಲು ಅಭ್ಯರ್ಥಿಗಳು hindustanpetroleum.com ಗೆ ಭೇಟಿ ನೀಡಬಹುದು.

* ʼಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿʼ ಮೇಲೆ ಕ್ಲಿಕ್ ಮಾಡಿ ಮತ್ತು ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿ.

* ಅಗತ್ಯವಿರುವ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ. ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆಗಳು, ಕೆಲಸದ ಅನುಭವ ಸಲ್ಲಿಕೆಯ ನಂತರ ಯಾವುದೇ ಬದಲಾವಣೆಗಳನ್ನು ಅನುಮತಿಸದ ಕಾರಣ ನಿಮ್ಮ ವರ್ಗವನ್ನು ಸರಿಯಾಗಿ ಆಯ್ಕೆಮಾಡಿ.

* ಅಧಿಸೂಚನೆಯಲ್ಲಿನ ಮಾರ್ಗಸೂಚಿಗಳ ಪ್ರಕಾರ ನಿಮ್ಮ ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.

* ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಜಿಎಸ್‌ಟಿ ಸಹಿತ 1,180 ರೂ. ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

* ನಿಮ್ಮ ಅರ್ಜಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅಂತಿಮ ಸಲ್ಲಿಕೆಯ ನಂತರ ಯಾವುದೇ ಬದಲಾವಣೆಗಳನ್ನು ಅನುಮತಿಸಲಾಗುವುದಿಲ್ಲ. ಭವಿಷ್ಯದ ಉಲ್ಲೇಖಕ್ಕಾಗಿ ನಿಮ್ಮ ಅರ್ಜಿ ಸಂಖ್ಯೆಯನ್ನು ಅಭ್ಯರ್ಥಿಗಳು ಉಳಿಸಿಕೊಳ್ಳಿ ಎಂದು ಎಚ್‌ಪಿಸಿಎಲ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story