
ವಿವಾಹೇತರ ಸಂಬಂಧಗಳನ್ನು ಬೆಸೆಯುವ ವಿವಾದಾತ್ಮಕ ಹಾಗೂ ಗೌಪ್ಯ ಡೇಟಿಂಗ್ ಆ್ಯಪ್ 'ಗ್ಲೀಡನ್' ಭಾರತದಲ್ಲಿ ಭಾರಿ ಜನಪ್ರಿಯತೆ ಗಳಿಸುತ್ತಿದೆ. ( ಪೋಟೋ ಕ್ರಿಡಿಟ್ Indian Tech & Infra)
ವಿವಾಹೇತರ ಸಂಬಂಧ; ಈ ಡೇಟಿಂಗ್ ಆ್ಯಪ್ ಬಳಕೆಯಲ್ಲಿ ಬೆಂಗಳೂರಿಗರೇ ನಂಬರ್ ಒನ್!
ಈ ಆ್ಯಪ್ ಬಳಸುವವರಲ್ಲಿ ಬಹುಪಾಲು ಮಂದಿ ಈಗಾಗಲೇ ವಿವಾಹಿತರು ಅಥವಾ ದೀರ್ಘಕಾಲದ ಪ್ರೇಮಸಂಬಂಧದಲ್ಲಿರುವವರೇ ಆಗಿದ್ದಾರೆ. ಪ್ರಸ್ತುತ ಒಟ್ಟು ಬಳಕೆದಾರರಲ್ಲಿ ಶೇಕಡಾ 65ರಷ್ಟು ಪುರುಷರಿದ್ದರೆ, ಶೇಕಡಾ 35ರಷ್ಟು ಮಹಿಳೆಯರಿದ್ದಾರೆ.
ವಿವಾಹೇತರ ಸಂಬಂಧಗಳನ್ನು ಬೆಸೆಯುವ ವಿವಾದಾತ್ಮಕ ಹಾಗೂ ಗೌಪ್ಯ ಡೇಟಿಂಗ್ ಆ್ಯಪ್ 'ಗ್ಲೀಡನ್' (Gleeden) ಭಾರತದಲ್ಲಿ ಭಾರಿ ಜನಪ್ರಿಯತೆ ಗಳಿಸುತ್ತಿದ್ದು, ಪ್ರಸ್ತುತ ಇದರ ಬಳಕೆದಾರರ ಸಂಖ್ಯೆ 40 ಲಕ್ಷದ ಗಡಿ ದಾಟಿದೆ. ಅಚ್ಚರಿಯೆಂದರೆ, ಈ ಆ್ಯಪ್ ಬಳಸುವವರ ಪೈಕಿ ಶೇಕಡಾ 18ರಷ್ಟು ಪಾಲಿನೊಂದಿಗೆ ಸಿಲಿಕಾನ್ ಸಿಟಿ ಬೆಂಗಳೂರು ಅಗ್ರಸ್ಥಾನದಲ್ಲಿದೆ.
ಹೈದರಾಬಾದ್ ಶೇ. 17, ದೆಹಲಿ ಶೇ. 11, ಮುಂಬೈ ಶೇ. 9 ಹಾಗೂ ಪುಣೆ ಶೇ. 7ರಷ್ಟು ಬಳಕೆದಾರರನ್ನು ಹೊಂದಿದೆ. ಈ ಅಂಕಿಅಂಶಗಳು ಐಟಿ ಹಬ್‌ಗಳು ಮತ್ತು ಮಹಾನಗರಗಳಲ್ಲಿ ಸಾಂಪ್ರದಾಯಿಕ ವಿವಾಹ ಸಂಬಂಧಗಳಾಚೆಗಿನ ಒಲವು ಹೆಚ್ಚಾಗುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ.
ಮಹಿಳೆಯರ ಸಂಖ್ಯೆಯಲ್ಲಿ ಶೇ. 148ರಷ್ಟು ಏರಿಕೆ
ಈ ಆ್ಯಪ್ ಬಳಸುವವರಲ್ಲಿ ಬಹುಪಾಲು ಮಂದಿ ಈಗಾಗಲೇ ವಿವಾಹಿತರು ಅಥವಾ ದೀರ್ಘಕಾಲದ ಪ್ರೇಮಸಂಬಂಧದಲ್ಲಿರುವವರೇ ಆಗಿದ್ದಾರೆ. ಪ್ರಸ್ತುತ ಒಟ್ಟು ಬಳಕೆದಾರರಲ್ಲಿ ಶೇಕಡಾ 65ರಷ್ಟು ಪುರುಷರಿದ್ದರೆ, ಶೇಕಡಾ 35ರಷ್ಟು ಮಹಿಳೆಯರಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಕಳೆದ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಈ ಆ್ಯಪ್ ಬಳಸುವ ಮಹಿಳೆಯರ ಪ್ರಮಾಣದಲ್ಲಿ ಬರೊಬ್ಬರಿ 148 ಪ್ರತಿಶತದಷ್ಟು ಭಾರೀ ಏರಿಕೆ ಕಂಡುಬಂದಿದೆ.
ನಗರ ಪ್ರದೇಶದ ಒತ್ತಡದ ಬದುಕು ಹಾಗೂ ದಾಂಪತ್ಯದಲ್ಲಿನ ಭಾವನಾತ್ಮಕ ಒಂಟಿತನದಿಂದಾಗಿ, ಸಾಂಪ್ರದಾಯಿಕ ಚೌಕಟ್ಟಿನಾಚೆಗೆ ದೈಹಿಕ ಅಥವಾ ಭಾವನಾತ್ಮಕ ನೆಲೆ ಕಂಡುಕೊಳ್ಳುವತ್ತ ಮಹಿಳೆಯರು ಆಸಕ್ತಿ ತೋರುತ್ತಿರುವುದನ್ನು ಈ ಬೆಳವಣಿಗೆ ಎತ್ತಿ ತೋರಿಸುತ್ತದೆ.
ತಡರಾತ್ರಿ ಹೆಚ್ಚಿನ ಬಳಕೆ
ಬಳಕೆದಾರರ ದಿನನಿತ್ಯದ ಚಟುವಟಿಕೆಗಳನ್ನು ಗಮನಿಸಿದರೆ, ಭಾರತೀಯರು ಪ್ರತಿದಿನ ಸರಾಸರಿ 1 ರಿಂದ 1.5 ಗಂಟೆಗಳ ಕಾಲ ಈ ಆ್ಯಪ್‌ನಲ್ಲಿ ಕಳೆಯುತ್ತಿದ್ದಾರೆ. ವಿಶೇಷವಾಗಿ ಮಧ್ಯಾಹ್ನ ಊಟದ ವಿರಾಮದ ಸಮಯದಲ್ಲಿ (ಮಧ್ಯಾಹ್ನ 12 ರಿಂದ 3 ಗಂಟೆ) ಹಾಗೂ ತಡರಾತ್ರಿ 10 ಗಂಟೆಯಿಂದ ಮಧ್ಯರಾತ್ರಿಯವರೆಗೆ ಆ್ಯಪ್‌ನಲ್ಲಿ ಅತಿ ಹೆಚ್ಚು ಚಟುವಟಿಕೆಗಳು ಕಂಡುಬರುತ್ತಿವೆ. ಇನ್ನು ಟೈರ್-1 ನಗರಗಳಷ್ಟೇ ಅಲ್ಲದೆ, ಚಂಡೀಗಢ, ಭುವನೇಶ್ವರ, ಲಕ್ನೋ, ಗುವಾಹಟಿಯಂತಹ ಟೈರ್-2 ನಗರಗಳಲ್ಲೂ ಈ ಆ್ಯಪ್‌ನ ಬಳಕೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಗೌಪ್ಯ ಡೇಟಿಂಗ್ ಸಂಸ್ಕೃತಿಯು ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗಿಲ್ಲ ಎಂಬುದನ್ನು ದೃಢಪಡಿಸಿದೆ.

