
ವಿಶಾಖಪಟ್ಟಣದಲ್ಲಿರುವ ಎನ್‌ಎಸ್‌ಟಿಎಲ್ ಕಚೇರಿ
Job News|ಬಿಇ, ಬಿಟೆಕ್ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ, ಡಿಆರ್‌ಡಿಒನಲ್ಲಿ ಸ್ಟೈಫಂಡ್‌ನೊಂದಿಗೆ ಇಂಟರ್ನ್‌ಶಿಪ್
ಬಿಇ ಅಥವಾ ಬಿಟೆಕ್ ಅಂತಿಮ ವರ್ಷದ ವಿದ್ಯಾರ್ಥಿಗಳು ಕನಿಷ್ಠ 7.5 ಸಿಜಿಸಿಪಿ ಹೊಂದಿರಬೇಕು. ಎಂಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕನಿಷ್ಠ ಶೇ. 75 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಧೀನದಲ್ಲಿರುವ ಪ್ರತಿಷ್ಠಿತ ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯ (NSTL), 2026ನೇ ಸಾಲಿನ ಇಂಟರ್ನ್‌ಶಿಪ್‌ಗೆ ಅಧಿಸೂಚನೆ ಹೊರಡಿಸಿದ್ದು, ಎಂಜಿನಿಯರಿಂಗ್ ಮತ್ತು ವಿಜ್ಞಾನ ವಿಭಾಗದ ಒಟ್ಟು 35 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಮತ್ತು ನೀರೊಳಗಿನ ಶಸ್ತ್ರಾಸ್ತ್ರ ವ್ಯವಸ್ಥೆಗಳ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಮಾ.23 ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ
ಒಟ್ಟು 35 ಇಂಟರ್ನ್‌ಶಿಪ್ ಸೀಟುಗಳಿದ್ದು, ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ 8, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗಕ್ಕೆ 6, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಕ್ಕೆ 5, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗಕ್ಕೆ 4, ಸಿವಿಲ್ ಅಥವಾ ನೌಕಾ ವಾಸ್ತುಶಿಲ್ಪ ವಿಭಾಗಕ್ಕೆ 3, ಎಲೆಕ್ಟ್ರಿಕಲ್ ಮತ್ತು ಇನ್ಸ್ಟ್ರುಮೆಂಟೇಶನ್ ವಿಭಾಗಕ್ಕೆ 2, ಎಂ.ಎಸ್ಸಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗಕ್ಕೆ ತಲಾ 2 ಹುದ್ದೆಗಳನ್ನು ವಿಂಗಡಿಸಲಾಗಿದೆ.
ಅರ್ಹತೆಗಳು
ಬಿಇ ಅಥವಾ ಬಿಟೆಕ್ ಅಂತಿಮ ವರ್ಷದ ವಿದ್ಯಾರ್ಥಿಗಳು ಕನಿಷ್ಠ 7.5 ಸಿಜಿಸಿಪಿ ಹೊಂದಿರಬೇಕು. ಎಂಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕನಿಷ್ಠ ಶೇ. 75 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಮೇ.1ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 25 ವರ್ಷ ಮೀರಿರಬಾರದು ಹಾಗೂ ಅರ್ಜಿದಾರರು ಯಾವುದೇ ಬ್ಯಾಕ್‌ಲಾಗ್‌ಗಳನ್ನು ಹೊಂದಿರಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಟೈಫಂಡ್ ಮತ್ತು ಅವಧಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಶಾಖಪಟ್ಟಣಂನಲ್ಲಿ ಆರು ತಿಂಗಳ ಕಾಲ ತರಬೇತಿ ನೀಡಿ, ಮಾಸಿಕ ಐದು ಸಾವಿರ ಸ್ಟೈಫಂಡ್ ನೀಡಲಾಗವುದು. ವಸತಿ ಮತ್ತು ಊಟದ ವ್ಯವಸ್ಥೆಯನ್ನು ಅಭ್ಯರ್ಥಿಗಳೇ ಮಾಡಿಕೊಳ್ಳಬೇಕು.
ಆಯ್ಕೆ ಪ್ರಕ್ರಿಯೆ ಹೇಗೆ ?
ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಮೊದಲು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಆಯ್ಕೆ ಸಮಿತಿಯು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ತಾಂತ್ರಿಕ ಸಂದರ್ಶನ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ ?
* ಈ ಇಂಟರ್ನ್‌ಶಿಪ್‌ಗೆ ಯಾವುದೇ ಆನ್‌ಲೈನ್ ಪೋರ್ಟಲ್ ಇರುವುದಿಲ್ಲ. ಆಸಕ್ತರು ಇಮೇಲ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
* ನಿಮ್ಮ ಅಪ್‌ಡೇಟೆಡ್ ರೆಸ್ಯೂಮ್ ಸಿದ್ಧಪಡಿಸಿ.
* ಶೈಕ್ಷಣಿಕ ದಾಖಲೆಗಳು, ಕಾಲೇಜು ಐಡಿ ಮತ್ತು ಫೋಟೋವನ್ನು ಸ್ಕ್ಯಾನ್ ಮಾಡಿ.
* ಇ-ಮೇಲ್ ನಲ್ಲಿ “Application for NSTL Internship 2026 ” ಎಂದು ನಮೂದಿಸಿ.
* intern-hrd@gov.in ಈ ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಸಲ್ಲಿಸಿ.

